ಬಹುತೇಕ ಮಂದಿಗೆ ಚಿನ್ನವೇ ದುಬಾರಿ ವಸ್ತು ಅಂತ ತಿಳಿದಿದೆ. ಆದರೆ ವಿಶ್ವದ ಅತ್ಯಂತ ದುಬಾರಿ ಚಿನ್ನ ಅಲ್ಲ, ಕ್ಯಾಲಿಫೋರ್ನಿಯಮ್ ಅನ್ನುವ ಲೋಹ.
ಕ್ಯಾಲಿಫೋರ್ನಿಯಮ್ ಅಂದರೆ ಕೃತಕ ವಿಕಿರಣಶೀಲ ರಾಸಾಯನಿಕ ಅಂಶವಾಗಿದೆ. ಈ ಲೋಹವು ಸಂಪೂರ್ಣವಾಗಿ ಮಾನವರಿಂದ ಸೃಷ್ಟಿಸಲ್ಪಟ್ಟ ಲೋಹವಾಗಿದ್ದು, 1950 ರಲ್ಲಿ ಬಕ್ರ್ಲಿಯ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದರು. ಆದ್ದರಿಂದ ಈ ಸಂಶೋಧನೆ ನಡೆದ ವಿಶ್ವವಿದ್ಯಾಲಯದ ಹೆಸರನ್ನು ಕ್ಯಾಲಿಪೋರ್ನಿಯಮ್ ಎಂದು ಹೆಸರಿಸಲಾಗಿದೆ.
ಇದು ಭೂಮಿಯ ಮೇಲೆ ನೈಸರ್ಗಿಕವಾಗಿ ಸಿಗುವಂತಹದಲ್ಲ ಬದಲಾಗಿ ಸಂಪೂರ್ಣವಾಗಿ ಸಂಶ್ಲೇಷಿತ ಅಂಶವಾಗಿದೆ. ಆದರೆ ಇದರ ಉತ್ಪಾದನಾ ಪ್ರಕ್ರಿಯೆಯು ತುಂಬಾ ಸಂಕೀರ್ಣವಾಗಿದೆ. ಪ್ರಪಂಚದಾದ್ಯಂತ ಇದರ ಪೂರೈಕೆಯು ತುಂಬ ಕಡಿಮೆ ಆಗಿರುವುದರಿಂದ ಇದರ ಬೆಲೆ ತುಂಬಾ ದುಬಾರಿಯಾಗಿದೆ. ಒಂದು ಗ್ರಾಂ ಕ್ಯಾಲಿಫೋರ್ನಿಯಂ ಲೋಹದ ಬೆಲೆ 27 ಮಿಲಿಯನ್ ಡಾಲರ್ ಅಂದರೆ ಸುಮಾರು 239 ಕೋಟಿ ರೂಪಾಯಿಗಳು. ಅಂದರೆ ಒಂದು ಗ್ರಾಂ ಕ್ಯಾಲಿಫೋರ್ನಿಯವನ್ನು ಖರೀದಿಸುವ ಬೆಲೆಯಲ್ಲಿ 200 ಕಿಲೋಗ್ರಾಂಗಳಷ್ಟು ಚಿನ್ನವನ್ನು ಖರೀದಿಸಬಹುದು.
ಈ ಕ್ಯಾಲಿಫೋರ್ನಿಯಾವನ್ನು ಎಲ್ಲೆಲ್ಲಿ ಬಳಸಲಾಗುತ್ತದೆ ಎಂದು ನೋಡಿದರೆ ಪ್ರಮುಖವಾಗಿ ಪರಮಾಣು ರಿಯಾಕ್ಟರ್ ಗಳಲ್ಲಿ ಬಳಸಲಾಗುತ್ತದೆ. ಆದ್ದರಿಂದ ಈ ಲೋಹವು ಪರಮಾಣು ಉದ್ಯಮಕ್ಕೆ ಒಂದು ಪ್ರಮುಖ ಅಂಶವಾಗಿದೆ. ಇದನ್ನು ಸಣ್ಣ ಮಾಡ್ಯುಲರ್ ರಿಯಾಕ್ಟರ್ ಗಳು, ವೈದ್ಯಕೀಯ ಚಿಕಿತ್ಸೆಗಳು, ಬಾಹ್ಯಾಕಾಶ ಪರಿಶೋಧನೆ ಮತ್ತು ತಾಯ್ನಾಡಿನ ಭದ್ರತೆಯಲ್ಲಿಯೂ ಬಳಸಲಾಗುತ್ತದೆ.
ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…
ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…
ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್ Z ಗಾಗಿ…
ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…
ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು…