ವರ್ಷವಿಡೀ ತಾವು ಬೆಳೆದ ಬೆಲೆ(Rate) ಕೈಗೆ ಬರಲು ರೈತರು(Farmer) ಇನ್ನಿಲ್ಲದ ಕಷ್ಟ ಪಡುತ್ತಾರೆ. ಅದೃಷ್ಟ ಚೆನ್ನಾಗಿದ್ದರೆ ಮಾತ್ರ ಫಸಲು(Crop) ಕೈಗೆ ಬಂದಾಗ ಅದಕ್ಕೆ ತಕ್ಕ ರೇಟು ಸಿಗುತ್ತದೆ. ಈ ಬಾರಿ ಮೆಣಸಿನ ಕಾಳು ಬೆಳೆಗಾರರಿಗೆ ಅದೃಷ್ಟ ಖುಲಾಯಿಸಿದೆ. ದಿನದಿಂದ ದಿನಕ್ಕೆ ದೇಶಿಯ ಮಾರುಕಟ್ಟೆಯಲ್ಲಿ(Market) ಕರಿ ಮೆಣಸಿನ (Black Pepper) ಬೆಲೆ(Price) ಗಗನಕ್ಕೇರುತ್ತಿದೆ. ಭಾರತದೆಲ್ಲೆಡೆ ಕಾಳುಮೆಣಸಿನ ದರ ಗಗನಕ್ಕೆ ಜಿಗಿದಿದೆ. ಚಿಕ್ಕಮಗಳೂರು(Chikkamagaluru) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಂತೂ ಧಾರಣೆಯು ಕ್ವಿಂಟಾಲ್‌ಗೆ 88,000 ರೂಪಾಯಿ ಆಗಿದ್ದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಲೆನಾಡ ಚಿಕ್ಕಮಗಳೂರು ಭಾಗಕ್ಕೆ ಶಿರಸಿ ಹಾಗೂ ಸುತ್ತಮುತ್ತಲಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ವಿಘ್ನೇಶ್ ಭಟ್ ಹೊಸ್ತೋಟ ಅವರು ತಮ್ಮ ಅಡಿಕೆ ತೋಟದಲ್ಲಿ ಕಳೆದ 15 ವರ್ಷದಿಂದ ಕಾಳುಮೆಣಸಿನ ಕೃಷಿ ಮಾಡುತ್ತಿದ್ದಾರೆ. ಖ್ಯಾತ ಕೃಷಿ ತಜ್ಞ ವಿಎಂ ಹೆಗಡೆಯವರ ಸಲಹೆಯೊಂದಿಗೆ ಕೃಷಿ ಮಾಡುತ್ತಿರುವ ಇವರು ಬಾರೆಯ ಹೊಸ್ತೋಟದಲ್ಲಿ ತಮ್ಮ ಮನೆ ಬಳಿ ಉಪಬೆಳೆಯಾಗಿ ಕಾಳುಮೆಣಸನ್ನು ಬೆಳೆದಿದ್ದಾರೆ.
ವಿವಿಧ ತಳಿಯ ಕಾಳುಮೆಣಸು
8-10 ವಿಧದ ಕಾಳುಮೆಣಸು ಇವರಲ್ಲಿ ಇವೆ ಅದರಲ್ಲಿ ಪಣಿಯೂರು-1, ಪಣಿಯೂರು-2, ನೀಲಮುಂಡಿ, ಶ್ರೀಕರ, ಶುಭಕರ ಸೇರಿದಂತೆ ಹಲವು ವಿಧದ ಕಾಳುಮೆಣಸು ಇವರಲ್ಲಿವೆ, ಕೇವಲ 1000 ಬಳ್ಳಿಗಳನ್ನು ಹೊಂದಿರುವ ಇವರು ಪ್ರತೀ ವರ್ಷ ಬರೊಬ್ಬರಿ 2.5 ಟನ್ ನಷ್ಟು ಇಳುವರಿಯನ್ನು ಪಡೆಯುತ್ತಿದ್ದಾರೆ. ಜೂನ್ ತಿಂಗಳಲ್ಲಿ ಟ್ರೆಂಚಿಂಗ್ ಮಾಡಿ ಲೈಟೆಕ್ಸ್ ಹಾಕಿ ನಂತರ ಪ್ಲ್ಯಾಸ್ಟಿಕ್ ಹೊದಿಕೆ ಹಾಕಿಡುವ ಕಾರಣ ಭಾರೀ ಮಳೆಯಲ್ಲೂ ಭರ್ಜರಿ ಫಸಲು ದೊರಕುತ್ತಿದೆ. 6 ಲಕ್ಷ ಖರ್ಚಿಗೆ ಸದ್ಯದ ಮಟ್ಟಿಗೆ 15 ರಿಂದ 20 ಲಕ್ಷ ವಹಿವಾಟು ನಡೆಸುವ ನಿರೀಕ್ಷೆಯಲ್ಲಿದ್ದಾರೆ. ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ದೇಶದಲ್ಲಿ ಕಾಳುಮೆಣಸಿನ ಬಳಕೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಹೊಸ ಪೀಳಿಗೆಯ ಆಹಾರ ಖಾದ್ಯಗಳಲ್ಲಿ ಕಾಳುಮೆಣಸು ಪ್ರಮುಖ ಪಾತ್ರ ವಹಿಸಿದೆ.
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…
ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ…
ಟ್ಯಾಕ್ಸಿ, ಆಟೋ ಟ್ಯಾಕ್ಟರ್, ಗೂಡ್ಸ್ ವಾಹನದ ಡ್ರೈವರ್ ಆಗಿದ್ದರೂ ಸ್ವಂತ ವಾಹನವಿಲ್ಲ ಎಂಬ…
ಮಧ್ಯಪ್ರದೇಶ ಸರ್ಕಾರದಿಂದ ಅನುದಾನಿತ ಸಂಶೋಧನಾ ಉಪಕ್ರಮವು, ಸಾಂಪ್ರದಾಯಿಕ ಹಸು ಆಧಾರಿತ ಸಿದ್ಧತೆಗಳನ್ನು ಬಳಸಿಕೊಂಡು…
ಉಪಗ್ರಹ ದತ್ತಾಂಶ ಆಧಾರಿತ CREA ವಿಶ್ಲೇಷಣೆಯ ಪ್ರಕಾರ, ಭಾರತದ 4,041 ನಗರಗಳಲ್ಲಿ 1,787…