ಮನುಷ್ಯನ ಕ್ರೌರ್ಯ, ಪ್ರಕೃತಿ(Nature) ಮೇಲಿನ ಅಸಡ್ಡೆ, ತಾನು ಮಾತ್ರ ಇಲ್ಲಿ ಬದುಕಬೇಕು ಅನ್ನುವ ದುರಹಾಂಕರ.. ಇದಕ್ಕೆಲ್ಲಾ ಪ್ರಕೃತಿ ಈಗಾಗಲೇ ಮನುಜ ಕುಲಕ್ಕೆ ಶಿಕ್ಷೆಯನ್ನು ಪ್ರಕಟಿಸುತ್ತಲೇ ಬಂದಿದೆ. ದೇಶದಲ್ಲಿ ಪ್ರಾಣಿ ಪಕ್ಷಿಗಳು(Animals-Birds) ಅಳಿವಿನಂಚಿನ(Endangered) ದಾರಿ ಹಿಡಿದಿವೆ. ಕಾಡು ವಿನಾಶದತ್ತ(Wild destruction) ಸಾಗುತ್ತಿದೆ. ಹೀಗಿದ್ದೂ ದೇಶದಲ್ಲಿ(Country) ಚಿರತೆಗಳ(Leopards) ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂಬ ಸುದ್ದಿ ಖುಷಿ ಕೊಟ್ಟಿದೆ. 2018ರಲ್ಲಿ 12,852 ರಷ್ಟಿದ್ದ ಚಿರತೆಗಳು 2022ರಲ್ಲಿ 13,874ಕ್ಕೆ ಏರಿಕೆ ಕಂಡಿವೆ. ಆದರೆ, ಶಿವಾಲಿಕ್ ಬೆಟ್ಟ ಮತ್ತು ಇಂಡೋ-ಗಂಗಾ ಬಯಲಿನಲ್ಲಿ ಕೊಂಚ ಇಳಿಕೆಯಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ(Union Ministry of Environment) ತಿಳಿಸಿದೆ.
ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು: ಚಿರತೆಗಳ ಸ್ಥಿತಿಗತಿ ಎಂಬ ವರದಿಯನ್ನು ಕೇಂದ್ರ ಪರಿಸರ ಸಚಿವ ಭುಪೇಂದರ್ ಯಾದವ್ ಬಿಡುಗಡೆಗೊಳಿಸಿ ಮಾತನಾಡಿ, ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು 3,907 ಚಿರತೆಗಳಿವೆ (2018ರಲ್ಲಿ 3,421) ಎಂದು ಮಾಹಿತಿ ನೀಡಿದರು.
ಕರ್ನಾಟಕದಲ್ಲೆಷ್ಟು?: ಮಹಾರಾಷ್ಟ್ರದಲ್ಲಿ 2018ರಲ್ಲಿ 1,690 ಇದ್ದ ಚಿರತೆಗಳ ಸಂಖ್ಯೆ 2022ರಲ್ಲಿ 1,985ಕ್ಕೆ ಏರಿದೆ. ಇನ್ನು ಕರ್ನಾಟಕದಲ್ಲಿ 1,783 ರಷ್ಟಿದ್ದ ಚಿರತೆಗಳ ಸಂಖ್ಯೆ 1,879 ಆಗಿದೆ. ತಮಿಳುನಾಡಿನಲ್ಲಿ 868 ಇದ್ದ ಚಿರತೆಗಳು ಸಂಖ್ಯೆ ಇದೀಗ 1,070 ಆಗಿದೆ.
ದೇಶದ ಕೇಂದ್ರಭಾಗದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಸ್ಥಿರವಾದ ಬೆಳವಣಿಗೆ ಕಂಡಿರುವುದಾಗಿ ವರದಿ ತೋರಿಸಿದೆ. ಇಲ್ಲಿ 2018ರಲ್ಲಿ 8,071 ಇದ್ದ ಚಿರತೆಗಳು 2022ರಲ್ಲಿ 8,820 ಆಗಿವೆ. ಆದರೆ, ಶಿವಾಲಿಕ್ ಬೆಟ್ಟ ಮತ್ತು ಇಂಡೋ-ಗಂಗಾ ಬಯಲಿನಲ್ಲಿ 2018ರಲ್ಲಿ 1,253 ಚಿರತೆಗಳು 2022ರಲ್ಲಿ 1,109ಕ್ಕೆ ಇಳಿಕೆ ಕಂಡಿದೆ.
ದೇಶದಲ್ಲಿ ಚಿರತೆಗಳ ಸಂಖ್ಯೆಯಲ್ಲಿ 1.08ರಷ್ಟು ವಾರ್ಷಿಕ ಬೆಳವಣಿಗೆ ಕಂಡರೆ, ಶಿವಾಲಿಕ್ ಬೆಟ್ಟ ಮತ್ತು ಗಂಗಾಬಯಲಿನ ಪ್ರದೇಶದಲ್ಲಿ ವಾರ್ಷಿಕ ಬೆಳವಣಿಗೆಯಲ್ಲಿ 3.4 ಇಳಿಕೆಯಾಗಿದೆ. ಇತ್ತೀಚಿಗೆ ಬೆಳವಣಿಗೆ ದರದಲ್ಲಿ ಕೇಂದ್ರ ಭಾರತ ಮತ್ತು ಪೂರ್ವ ಘಾಟ್ ಪ್ರದೇಶದಲ್ಲಿ. 1.5ರಷ್ಟು ಏರಿಕೆಯಾಗಿದೆ ಎಂದು ಸಚಿವಾಲಯ ಹೇಳಿದೆ. ಆಂಧ್ರ ಪ್ರದೇಶದ ನಾಗಾರ್ಜುನಸಾಗರ ಶ್ರೀಶೈಲಂ, ಮಧ್ಯಪ್ರದೇಶದ ಪನ್ನ ಮತ್ತು ಸತ್ಪುರದ ಹುಲಿ ಮೀಸಲು ಅಥವಾ ಅತೀ ಹೆಚ್ಚು ಚಿರತೆ ಸಂಖ್ಯೆ ಹೊಂದಿರುವ ಪ್ರದೇಶವಾಗಿದೆ.
6,41,449 ಕಿ.ಮೀ ದೂರ ಈ ಸಮೀಕ್ಷೆ ನಡೆಸಲಾಗಿದೆ. 32,803 ಸ್ಥಳದಲ್ಲಿ ಕ್ಯಾಮೆರಾ ಬಳಕೆ ಮಾಡಲಾಗಿದೆ. 85,488 ಫೋಟೋಗಳನ್ನು ಸೆರೆ ಹಿಡಿಯಲಾಗಿದೆ. ಚಿರತೆಗಳ ಸಂರಕ್ಷಣೆಯಲ್ಲಿನ ಸಂರಕ್ಷಿತ ಪ್ರದೇಶದ ಪಾತ್ರವನ್ನು ಅಧ್ಯಯನ ತಿಳಿಸಿದೆ. ಹುಲಿ ಮೀಸಲು ಸೇವೆ ಕೂಡ ಇದಕ್ಕೆ ಬಲ ನೀಡಿದ್ದು, ಸಂರಕ್ಷಣೆಯ ಅಂತರದ ಹೊರಗಿನ ರಕ್ಷಣೆ ಪ್ರದೇಶವೂ ಸಮಾನವಾಗಿ ಪ್ರಾಮುಖ್ಯತೆ ಪಡೆದಿದೆ.
ಇದರೊಂದಿಗೆ ಸಮುದಾಯ ಮತ್ತು ಚಿರತೆಗಳ ನಡುವಿನ ಘರ್ಷಣೆ ಕೂಡ ಸವಾಲಾಗಿದ್ದು, ಸಂರಕ್ಷಿತ ಪ್ರದೇಶಗಳ ಹೊರಗೆ ಚಿರತೆ ಬದುಕುಳಿಯುವುದು ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಾನವ-ವನ್ಯ ಜೀವಿಗಳ ಸಂಘರ್ಷ ಕಡಿಮೆ ಮಾಡುವುದು ಮತ್ತು ರಕ್ಷಣಾ ಆವಾಸಸ್ಥಾನ ಸಂರಕ್ಷಣೆಗೆ ಸಂಘಟನೆ, ಸರ್ಕಾರದ ಏಜೆನ್ಸಿ, ಸ್ಥಳೀಯ ಸಮುದಾಯಗಳು ಸಹಕಾರ ಅಗತ್ಯ ಎಂದು ಸಚಿವರು ಒತ್ತಿ ಹೇಳಿದ್ದಾರೆ.
(ಪಿಟಿಐ – ಅಂತರ್ಜಾಲ ಮಾಹಿತಿ
The news that the number of leopards has increased in the country is pleasing. Leopard numbers increased from 12,852 in 2018 to 13,874 in 2022. However, the Union Ministry of Environment said that there has been a slight decrease in Shivalik hills and Indo-Gangetic plains.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…