ಕಳೆದ ಎರಡು ಮೂರು ತಿಂಗಳಿಂದ ಪಡಿತರ ಚೀಟಿ (Ration Card) ತಿದ್ದುಪಡಿ ಮಾಡುವುದರಲ್ಲೇ ಸರ್ಕಾರ ಕಾಲ ಕಳೆಯುತ್ತಿದೆ. ಹೊಸದಾಗಿ ಸೇರ್ಪಡೆ ಆಗುವುದನ್ನು ತಡೆ ಹಿಡಿದಿದೆ. ಈ ಮಧ್ಯೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ರೇಷನ್ ಕಾರ್ಡ್ ದಾಖಲೆ ಕಡ್ಡಾಯಗೊಳಿಸಿದೆ. ಹಾಗಾಗಿ ಅನೇಕರು ಪರದಾಡುವಂತಾಗಿತ್ತು. ಇದೀಗ ಬಿಪಿಎಲ್ ಕಾರ್ಡ್ದಾರರಿಗೆ ಆಹಾರ ಇಲಾಖೆ ಶುಭ ಸುದ್ದಿ ನೀಡಿದೆ. ತಿದ್ದುಪಡಿಗೆ ಅರ್ಜಿಸಲ್ಲಿಸಿದ್ದ ಬಿಪಿಎಲ್ ಫಲಾನುಭವಿಗಳ ಕಾರ್ಡ್ಗಳಿಗೆ ಇಲಾಖೆಯು ಗ್ರೀನ್ ಸಿಗ್ನಲ್ ನೀಡಿದೆ.
ಈ ಹಿಂದೆ ಬಿಪಿಎಲ್ ಕಾರ್ಡ್ಗಳ ತಿದ್ದುಪಡಿಗೆಂದೇ ಒಟ್ಟು 3.18 ಲಕ್ಷ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಕಳೆದ ಒಂದು ತಿಂಗಳಿನಿಂದ ಹೊಸದಾಗಿ ತಿದ್ದಪಡಿಗೆ ಒಟ್ಟು 53219 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಒಟ್ಟು 3 ಲಕ್ಷ 70 ಸಾವಿರ ಅರ್ಜಿಗಳು ತಿದ್ದುಪಡಿಗೆಂದೇ ಸಲ್ಲಿಕೆಯಾಗಿದ್ದವು. ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಒಟ್ಟು 117646 ಬಿಪಿಎಲ್ ಕಾರ್ಡ್ಗಳ ತಿದ್ದುಪಡಿಗೆ ಅನುಮತಿ ನೀಡಲಾಗಿದೆ. ಇನ್ನು 3.70 ಲಕ್ಷ ಕಾರ್ಡ್ಗಳ ಪೈಕಿ 93362 ಬಿಪಿಎಲ್ ಕಾರ್ಡ್ಗಳ ಅರ್ಜಿ ತಿರಸ್ಕೃತಗೊಂಡಿವೆ. ಆಹಾರ ಇಲಾಖೆ ನಿಯಮವಳಿಗಳನ್ನು ಮೀರಿ ತಿದ್ದುಪಡಿಗೆ ಅರ್ಜಿಸಲ್ಲಿಸದವರಿಗೆ ಶಾಕ್ ನೀಡಲಾಗಿದೆ.
ತಿದ್ದಪಡಿಯಲ್ಲಿ ಹೆಸರು ಬದಲಾವಣೆ ಹಾಗೂ ಹೊಸ ಫಲಾನುಭವಿಗಳ ಹೆಸರು ಸೇರಿಸಲು ಮಾತ್ರ ಅವಕಾಶ ನೀಡಲಾಗಿತ್ತು. ಇದೀಗ ಆಹಾರ ಇಲಾಖೆಯ ಅಧಿಕಾರಿಗಳು ತಿದ್ದುಪಡಿಗೆ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ ಒಟ್ಟು 117646 ಅರ್ಜಿಗಳ ತಿದ್ದುಪಡಿಗೆ ಅನುಮತಿ ನೀಡಿದ್ದಾರೆ. ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡುವ ಸಾಧ್ಯತೆ ಇದೆ ಎಂದು ಮೂಲಗಳು ಇತ್ತೀಚೆಗೆ ತಿಳಿಸಿದ್ದವು. ಇದರ ಬೆನ್ನಲ್ಲೇ ತಿದ್ದುಪಡಿ ಅರ್ಜಿಗಳಿಗೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯಿಂದ ಅನೇಕ ಮಹಿಳೆಯರು ವಂಚಿತರಾಗುತ್ತಿರುವುದನ್ನು ತಪ್ಪಿಸಲು ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಬಿಪಿಎಲ್ ಕಾರ್ಡ್ನಲ್ಲಿ ಪುರುಷರು ಮುಖ್ಯಸ್ಥರಾಗಿದ್ದರೆ ಗೃಹಲಕ್ಷ್ಮೀ ಯೋಜನೆಯಿಂದ ಆ ಕುಟುಂಬದ ಮಹಿಳೆಯರು ವಂಚಿತರಾಗಬೇಕಾಗುತ್ತದೆ. ಈ ಕಾರಣಕ್ಕೆ ಮನೆ ಮುಖ್ಯಸ್ಥರ ಹೆಸರು ಬದಲಾವಣೆಗೆ ಸೆಪ್ಟೆಂಬರ್ 1ರಿಂದ ಸರ್ಕಾರ ಅನುಮತಿ ನೀಡಿತ್ತು. ನಿಯಮದ ಪ್ರಕಾರ ಬಿಪಿಎಲ್ ಕಾರ್ಡ್ ನಲ್ಲಿ ಮಹಿಳೆಯರೇ ಮುಖ್ಯಸ್ಥರಿರಬೇಕು. ಮಹಿಳಾ ಮುಖ್ಯಸ್ಥರಿದ್ದರೆ ಮಾತ್ರ ಬಿಪಿಎಲ್ ಸೌಲಭ್ಯ ದೊರೆಯಲಿದೆ. ಇಲಾಖೆಯ ಪ್ರಕಾರ 6 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ದಾರರ ಪೈಕಿ ಪುರುಷ ಮುಖ್ಯಸ್ಥರು ಇದ್ದಾರೆ. ಹೀಗಾಗಿ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು.
Source : Digital Media
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…