ಇದು ಗೂಗಲ್#googol ಜಗತ್ತು. ಆದಿಲ್ಲದೆ ಈಗ ಕೆಲಸನೇ ನಡೆಯಲ್ಲ. ಏನೇ ಮಾಹಿತಿ#Information ಬೇಕಾದ್ರು ಜಸ್ಟ್ ಗೂಗಲ್ ಮೊರೆ ಹೋದರೆ ಆಯ್ತು. ನಮ್ಮ ಮೆದುಳನ್ನು ನಾವು ಅದರ ಕೈಗೆ ಕೊಟ್ಟು ಬಿಟ್ಟಷ್ಟು ಈಗ ನಾವು ಗೂಗಲ್ ಅನ್ನು ನೆಚ್ಚಿಕೊಂಡಿದ್ದೇವೆ. ಸಣ್ಣ ಮಕ್ಕಳಿಂದ ಹಿಡಿದು, ಕಾಲೇಜ್, ಉನ್ನತ ವ್ಯಾಸಂಗ ಮಾಡುವ ಪ್ರತೀ ವಿದ್ಯಾರ್ಥಿ#Studentsಗಳ ನೆಚ್ಚಿನ ಗೂಗಲ್ ಅನ್ನು ಈಗ ಅಂಗೈಯಲ್ಲೇ ಇಟ್ಟುಕೊಂಡು ಓಡಾಡುವಷ್ಟು ಸಲೀಸು. ದೊಡ್ಡ ದೊಡ್ಡ ಕೆಲಸದಲ್ಲಿ ಇರುವವರನ್ನು ಬಿಡಿ. ರೈತರು#Farmers, ಕಾರ್ಮಿಕರು, ಚಾಲಕರು ಎಲ್ಲರಿಗೂ ಈಗ ಗೂಗಲ್ ಆಪದ್ಭಾಂಧವ. ಇಂದು ಸೆಪ್ಟೆಂಬರ್ 27– ಸರಿಯಾಗಿ 25 ವರ್ಷದ ಹಿಂದೆ ಗೂಗಲ್#Google Inc. ಎಂಬ ಕಂಪನಿಯ ಹುಟ್ಟು ಆಗಿತ್ತು.
ಅಮೆರಿಕದ ಸ್ಟಾನ್ಫೋರ್ಡ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಪ್ರೋಗ್ರಾಮ್ನಲ್ಲಿ ಸೆರ್ಗೆ ಬ್ರಿನ್#Sergy Brin ಮತ್ತು ಲ್ಯಾರಿ ಪೇಜ್#Larry Page ಎಂಬಿಬ್ಬರು ವಿದ್ಯಾರ್ಥಿಗಳ ಭೇಟಿಯಾಗಿತ್ತು. ಇಡೀ ವಿಶ್ವ ವ್ಯಾಪಿ ಅಂತರ್ಜಾಲ ಎಲ್ಲರಿಗೂ ತಲುಪಲು ಏನಾದರೊಂದು ಮಾರ್ಗ ಹುಡುಕಬೇಕು ಎಂದು ಅವರಿಬ್ಬರ ಮನಸಿನಲ್ಲಿ ಏಕರೀತಿಯ ಗುರಿ ಮತ್ತು ಆಲೋಚನೆಗಳು ಬಂದಿದ್ದವು. ಅದು 1996ರ ವರ್ಷ. ಬ್ಯಾಕ್ರಬ್ ಎಂಬ ರಿಸರ್ಚ್ ಪ್ರಾಜೆಕ್ಟ್ ಶುರುವಾಯಿತು. ಇವರ ಆಲೋಚನೆಗೆ ರೂಪುಗೊಡಲು ಸಹಾಯವಾಗಿ ಸ್ಕಾಟ್ ಹಸನ್#Scot Hassan ಎಂಬುವವರು ಇದ್ದರು. ಈ ಮೂವರು ಸೇರಿ ಮಾಡಿದ ಸಾಹಸ ಒಂದು ಉತ್ತಮ ಸರ್ಚ್ ಎಂಜಿನ್ ಸೃಷ್ಟಿಗೆ ಕಾರಣವಾಯಿತು. ಸ್ಕಾಟ್ ಹಸನ್ ಸರ್ಚ್ ಎಂಜಿನ್ನ ಬಹುತೇಕ ಕೋಡ್ಗಳನ್ನು ರಚಿಸಿದರು.
ಈ ಸರ್ಚ್ ಎಂಜಿನ್ ಆಲೋಚನೆ ಸಾಕಾರಗೊಳ್ಳುತ್ತಿರುವಂತೆಯೇ ಸ್ಕಾಟ್ ಹಸನ್ ಬೇರೆ ಬೇರೆ ದಾರಿ ಹುಡುಕಿಕೊಂಡು ಹೋದರು. ಸೆರ್ಗಿ ಬ್ರಿನ್ ಮತ್ತು ಲ್ಯಾರಿ ಪೇಜ್ ಇಬ್ಬರೂ ಕೂಡ ಒಂದು ಗ್ಯಾರೇಜ್ ಅನ್ನು ಬಾಡಿಗೆಗೆ ಪಡೆದು ಗೂಗಲ್ ಎಂಬ ಕಂಪನಿ ಆರಂಭಿಸಿದರು. ಅದು 1998, ಸೆಪ್ಟೆಂಬರ್ 27. ಇಪ್ಪತ್ತೈದು ವರ್ಷದ ಬಳಿಕ ತಮ್ಮ ಗೂಗಲ್ ಮೇಲೆ ಕೋಟ್ಯಂತರ ಜನರು ಒಂದಿಲ್ಲೊಂದು ರೀತಿಯಲ್ಲಿ ಅವಲಂಬಿತರಾಗುತ್ತಾರೆ ಎಂದು ಸೆರ್ಗೇ ಬ್ರಿನ್ ಮತ್ತು ಲ್ಯಾರಿ ಪೇಜ್ ಅಂದಾಜು ಮಾಡಿರಲಿಲ್ಲ. ಅಷ್ಟರಮಟ್ಟಿಗೆ ಹೊಸ ಹೊಸ ಆವಿಷ್ಕಾರಗಳೊಂದಿಗೆ ಗೂಗಲ್ ಅಗಾಧವಾಗಿ ಬೆಳೆದಿದೆ.
ಗೂಗಲ್ ಹೆಸರಿನ ಅರ್ಥ ಏನು? ಗೂಗಲ್ ಎಂಬುದು ಗೂಗೊಲ್ ಎಂಬ ಗಣಿತ ಸಂಖ್ಯಾ ಪದದ ಅಪಭ್ರಂಶ. ಗೂಗೊಲ್ ಎಂದರೆ ಗಣಿತದಲ್ಲಿ ಹತ್ತರ ನೂರು ಘಾತಗಳ ಒಂದು ಸಂಖ್ಯೆ. ಇಂಗ್ಲೀಷ್ನಲ್ಲಿ ಟೆನ್ ಟು ದಿ ಪವರ್ ಆಫ್ 100 ಎನ್ನುತ್ತಾರೆ (10100). 1 ಅಂಕಿ ಮುಂದೆ ನೂರು ಸೊನ್ನೆಗಳನ್ನು ಸೇರಿಸಿದಾಗ ಬರುವ ಸಂಖ್ಯೆ. ಇಷ್ಟು ದೊಡ್ಡ ಮೊತ್ತದ ಮಾಹಿತಿಯನ್ನು ತಮ್ಮ ಸರ್ಚ್ ಎಂಜಿನ್ ಹೆಕ್ಕಿ ತೆಗೆಯುತ್ತದೆ ಎಂದು ಸೂಚಿಸಲು ಗೂಗಲ್ ಪದವನ್ನು ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ತಮ್ಮ ಹೊಸ ಕಂಪನಿಗೆ ಇಡುತ್ತಾರೆ. ಗೂಗೋಲ್ ಎಂಬ ಉಚ್ಚಾರಣೆ ಬರದೇ ಗೂಗಲ್ ಎಂದು ಹೆಸರಿಡುತ್ತಾರೆ. ಗೂಗಲ್ ಇಲ್ಲದೇ ಜಗವಿಲ್ಲ ಎನ್ನುವಂತಾಗಿದೆ… ಗೂಗಲ್ ಬಹುತೇಕ ಸರ್ವವ್ಯಾಪಿ ಆಗಿಹೋಗಿದೆ. ನಮ್ಮ ನಿತ್ಯಜೀವನದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಗೂಗಲ್ ತಂತ್ರಜ್ಞಾನಗಳನ್ನು ನಾವು ಬಳಸುತ್ತೇವೆ. ಪರಿಪೂರ್ಣ ಸರ್ಚ್ ಎಂಜಿನ್ ಆಗಿ ರೂಪುಗೊಂಡ ಗೂಗಲ್ ಎಂಬ ಗಿಡ, ಬೆಳೆದು ಹಲವು ರೆಂಬೆ, ಕೊಂಬೆಗಳನ್ನು ಬೆಳೆಸಿಕೊಂಡು ಇಂದು ಬೃಹತ್ ವಟವೃಕ್ಷವಾಗಿ ಬಹಳ ಮಂದಿಗೆ ಸಹಾಯವಾಗಿದೆ. ಅದರ ಇಮೇಲ್, ಮ್ಯಾಪ್ಸ್, ಬ್ರೌಸರ್, ಕ್ಲೌಡ್, ಯೂಟ್ಯೂಬ್, ಟ್ರಾನ್ಸ್ಲೇಟ್, ಪ್ಲೇಸ್ಟೋರ್ ಹೀಗೆ ಹಲವು ಗೂಗಲ್ ಅಪ್ಲಿಕೇಶನ್ಗಳು ಮತ್ತು ಸರ್ವಿಸ್ಗಳು ಬಹಳ ಜನರಿಗೆ ಸಹಾಯವಾಗಿವೆ. ಆರ್ಟಿಫಿಶಿಯಲ್ ಎಂಟಿಲೆನ್ಸ್, ಮೆಷಿನ್ ಲರ್ನಿಂಗ್, ಸ್ಮಾರ್ಟ್ಫೋನ್, ಸ್ಮಾರ್ಟ್ ಹೋಮ್ ಹೀಗೆ ಗೂಗಲ್ನ ವ್ಯಾಪ್ತಿ ನಮ್ಮ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳವಾಗಿ ವ್ಯಾಪಿಸಿದೆ. ಇಪ್ಪತ್ತೈದರ ಹರೆಯದ ಗೂಗಲ್ನಿಂದ ಮುಂದಿನ ವರ್ಷಗಳಲ್ಲಿ ಇನ್ನೆಷ್ಟು ಆವಿಷ್ಕಾರಗಳು ಆಗುತ್ತವೋ ಕಾದುನೋಡಬೇಕು. ಗೂಗಲ್ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಭಾರತ ಮೂಲದ ಸುಂದರ್ ಪಿಚೈ ಅವರು ಸಿಇಒ ಆಗಿರುವುದು ನಮ್ಮೆಲ್ಲಿರಿಗೂ ಅಚ್ಚರಿಯ ವಿಚಾರ. - ಅಂತರ್ಜಾಲ ಮಾಹಿತಿ
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…