Advertisement
ಸುದ್ದಿಗಳು

ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯರಿಗೆ ಪುತ್ತೂರು ‘ಗೋಪಣ್ಣ’ ಸ್ಮೃತಿ ಗೌರವ ಪ್ರದಾನ

Share
ಒಬ್ಬನೇ ಗುರುವಿನಲ್ಲಿ ಕಲಿತ ಶಿಷ್ಯನಲ್ಲಿ ಗುಣ, ಸ್ವಭಾವಗಳ ರೂಢನೆಯಲ್ಲಿ ವ್ಯತ್ಯಾಸಗಳನ್ನು ಕಾಣುತ್ತೇವೆ. ಗುರುವಿನಲ್ಲಿ ತಾನು ಕಲಿತ ವಿದ್ಯೆಯ ಪ್ರತಿಫಲನವು ಸಮಾಜದಲ್ಲಿ ಹೇಗೆ ಪ್ರಕಟವಾಗುತ್ತದೆ ಎನ್ನುವುದರ ಮೇಲೆ ಆತನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಈ ವ್ಯಕ್ತಿತ್ವದ ಪ್ರಕಾಶಕ್ಕೆ ಆತನ ಶೀಲದ ಹಿನ್ನೆಲೆ ದೊಡ್ಡದು. ಬದುಕಿನಲ್ಲಿ ಶೀಲ, ಗುಣ, ಸ್ವಭಾವವನ್ನು ಹೊಂದಿದವರು ಸೋಲುವುದಿಲ್ಲ. ಭಾರತೀಯ ಕಲೆಗಳು ಇದನ್ನೇ ಬಯಸುತ್ತವೆ ಎಂದು ಶ್ರೀ ಕಟೀಲು ಮೇಳದ ಕಲಾವಿದ, ಮೇಳದ ಪ್ರಬಂಧಕ ಸುಣ್ಣಂಬಳ ವಿಶ್ವೇಶ್ವರ ಭಟ್ ಹೇಳಿದರು.
ಅವರು ಪುತ್ತೂರಿನ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರ ‘ಅಗ್ರಹಾರ’ ಮನೆಯಲ್ಲಿ ಜರುಗಿದ ‘ಪುತ್ತೂರು ಗೋಪಣ್ಣ’ ಇವರ ಸ್ಮೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಕಲಾ ಬದುಕಿನಲ್ಲಿ ಉತ್ತಮ ಶೀಲ, ನಡತೆಯ ಮೂಲಕ ಕಲೆಯನ್ನು ಎತ್ತರೇಕ್ಕೇರಿಸಿದ ಲಕ್ಷ್ಮೀಶ ಅಮ್ಮಣ್ಣಾಯರು ಸದಾ ವಂದ್ಯರು.”  ಎಂದರು.
ಹಿರಿಯ ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯ-ಗೀತಾ ದಂಪತಿಗೆ ‘ಗೋಪಣ್ಣ ಸ್ಮೃತಿ’ ಗೌರವವನ್ನು ಪ್ರದಾನಿಸಲಾಯಿತು. “ಗೋಪಾಲಕೃಷ್ಣರು ಜಗನ್ನಿವಾಸರ ತೀರ್ಥರೂಪರು. ಅವರ ನೆನಪಿನಲ್ಲಿ ನೀಡಿದ ಗೌರವವನ್ನು ಸ್ವೀಕರಿಸಲು ಸಂತೋಷವಾಗುತ್ತದೆ. ಯಕ್ಷಗಾನದ ಹಿಮ್ಮೇಳ ಕಲಾವಿದರು ಮರೆಯಲಾಗದ ಹೆಸರು ಗೋಪಣ್ಣ” ಎಂದರು. ಸುಳ್ಯದ ವೇ.ಮೂ. ನಾಗರಾಜ ಭಟ್ಟರು ಸಂಮಾನಿತರಿಗೆ ಶುಭ ಹಾರೈಸಿದರು.
ಭಾಗವತ ರಮೇಶ್ ಭಟ್ ಪುತ್ತೂರು ಆಭಿವಂದನಾ ನಲ್ನುಡಿ ಅಕ್ಷರ ಗುಚ್ಛವನ್ನು ವಾಚಿಸಿದರು. ಶ್ರೀವಿದ್ಯಾ ಜೆ. ರಾವ್, ವೈಷ್ಣವಿ ರಾವ್, ಶ್ರೀಕೃಷ್ಣ ರಾವ್ ಹಾಗೂ ಮನೆಯವರು ಅಮ್ಮಣ್ಣಾಯರನ್ನು  ಗೌರವಿಸಿದರು. ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿದರು. ಕಲಾವಿದ ನಾ. ಕಾರಂತ ಪೆರಾಜೆ ನಿರ್ವಹಿಸಿ, ವಂದಿಸಿದರು. ಪಿ.ಜಿ.ಚಂದ್ರಶೇಖರ ರಾವ್,  ರತ್ನಾಕುಮಾರಿ ರಾವ್ ಅತಿಥಿಗಳಿಗೆ ಪುಷ್ಪ ನೀಡಿ ಅಭಿನಂದಿಸಿದರು.
ಕೊನೆಯಲ್ಲಿ ‘ಪಂಚವಟಿ’ ಪ್ರಸಂಗದ ತಾಳಮದ್ದಳೆ ಜರುಗಿತು. ಶ್ರೀಗಳಾದ ನಾರಾಯಣ ಶಬರಾಯ, ರಮೇಶ ಭಟ್ ಪುತ್ತೂರು, ಮಹೇಶ್ ಕನ್ಯಾಡಿ (ಭಾಗವತರು); ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ಪದ್ಯಾಣ ಜಯರಾಮ ಭಟ್, ಕೃಷ್ಣಪ್ರಕಾಶ್ ಉಳಿತ್ತಾಯ, ರಾಜಗೋಪಾಲ ಜೋಷಿ, ರಾಮಪ್ರಸಾದ್ ವದ್ವ, ಶಿತಿಕಂಠ ಭಟ್ (ಚೆಂಡೆ, ಮದ್ದಳೆ); ಸುಣ್ಣಂಬಳ ವಿಶ್ವೇಶ್ವರ ಭಟ್, ಅಶೋಕ ಭಟ್ ಉಜಿರೆ, ರಾಧಾಕೃಷ್ಣ ಕಲ್ಚಾರ್, ಡಾ.ವಿನಾಯಕ ಭಟ್ ಗಾಳಿಮನೆ, ಗುಂಡ್ಯಡ್ಕ ಈಶ್ವರ ಭಟ್, ಹರೀಶ ಬೊಳಂತಿಮೊಗರು, ರಮಾನಂದ ನೆಲ್ಲಿತ್ತಾಯ, ಶಶಿಧರ ರಾವ್ ಕನ್ಯಾಡಿ, ರಾಮ ಜೋಯಿಸ ಬೆಳ್ಳಾರೆ, ಶ್ರೀಮತಿ ಜಯಲಕ್ಷ್ಮೀ ವಿ. ಭಟ್ (ಅರ್ಥದಾರಿಗಳು) ಮೊದಲಾದ ಕಲಾವಿದರು ‘ಗೋಪಣ್ಣ ಸ್ಮೃತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡುಗೆ ಎಣ್ಣೆ ಸ್ವಾವಲಂಬನೆಯ ಗುರಿ | 10 ಸಾವಿರ ಕೋಟಿಗೂ ಅಧಿಕ ಹಣಕಾಸು ಸೌಲಭ್ಯ | ತಾಳೆ ಬೆಳೆಯತ್ತಲೂ ಚಿತ್ತ |

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ…

4 hours ago

ಅರಣ್ಯ ಬೆಳೆಸುವುದರ ಜೊತೆಗೆ ವನ್ಯ ಜೀವಿಗಳನ್ನು ಕಾಪಾಡಬೇಕಿದೆ | ತುಮಕೂರಿನಲ್ಲಿ 70ನೇ ವನ್ಯ ಜೀವಿ ಸಪ್ತಾಹ |

ವನ್ಯಜೀವಿ ಸಪ್ತಾಹ  ಅಂಗವಾಗಿ ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ 70ನೇ ವನ್ಯಜೀವಿ…

4 hours ago

ದೇಶದಲ್ಲಿ ಸಹಕಾರಿ ವಲಯದ ಪಾತ್ರ ಮುಂದಿನ ದಿನಗಳಲ್ಲಿ ಮಹತ್ವ ಪಡೆಯಲಿದೆ | ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವದಲ್ಲಿ ಅಮಿತ್‌ ಶಾ |

ಆರ್ಥಿಕ ಪ್ರಗತಿಯ ಜೊತೆಗೆ ಜನರ ಕಲ್ಯಾಣವನ್ನು ಖಾತರಿಪಡಿಸಲು ಜಗತ್ತಿನಲ್ಲಿ ಯಾವುದಾದರೂ ಮಾದರಿ ಇದ್ದರೆ…

4 hours ago

7ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ | 20 ಭಾಷೆಯ 100ಕ್ಕೂ ಅಧಿಕ ಸಿನಿಮಾ ಪ್ರದರ್ಶನ

ಇನೋವೇಟಿವ್ ಫಿಲ್ಮಂ ಅಕಾಡೆಮಿ ಬೆಂಗಳೂರಿನಲ್ಲಿ ಆಯೋಜಿಸಿರುವ ಮೂರು ದಿನಗಳ 7ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ…

5 hours ago

ಹವಾಮಾನ ವರದಿ | 05-10-2024 | ಗುಡುಗು ಸಹಿತ ಸಾಮಾನ್ಯ ಮಳೆ | ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ

ಈಗಿನಂತೆ ಅಕ್ಟೊಬರ್ 10ರ ವೇಳೆಗೆ ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ…

13 hours ago