ದೀಪಾವಳಿಯ ಸಂದರ್ಭ ಸರಣಿ ಸಾಮೂಹಿಕ ಗೋಪೂಜೆ ಮೂಲಕ ಸಮಾಜದಲ್ಲಿ ದೇಸೀ ಗೋ ತಳಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಕಳೆದ ಎಂಟು ವರ್ಷಗಳಿಂದ ಗುತ್ತಿಗಾರಿನಲ್ಲಿ ನಡೆಯುತ್ತಿದೆ.
ರಾಮಚಂದ್ರಾಪುರ ಮಠದ ಮುಳ್ಳೇರಿಯ ಮಂಡಲದ ಗುತ್ತಿಗಾರು ವಲಯದ ವೈದಿಕ ವಿಭಾಗದ ಆಶ್ರಯದಲ್ಲಿ ದೇಸೀ ಗೋವಿಗೆ ಸರಣಿ ಗೋಪೂಜೆಯ ಕಾರ್ಯಕ್ರಮ ಪ್ರತೀ ವರ್ಷ ನಡೆಯುತ್ತಿದೆ. ಈ ಬಾರಿ ಕೂಡಾ ಸರಣಿ ಗೋಪೂಜೆ ನಡೆಯಿತು. ಸುಬ್ರಹ್ಮಣ್ಯ ಘಟಕದಲ್ಲಿ ಆರಂಭಗೊಂಡ ಗೋಪೂಜಾ ಕಾರ್ಯಕ್ರಮವು ಬಳಿಕ ವಳಲಂಬೆ, ಕೊಲ್ಲಮೊಗ್ರ, ಕಮಿಲ, ಮೇಲ್ತೋಟ ,ಮರ್ಕಂಜ, ನೆಲ್ಲೂರುಕೆಮ್ರಾಜೆ ಘಟಕಗಳಲ್ಲಿ ನಡೆದು ಮೊಗ್ರ ಸತ್ಯನಾರಾಯಣ ಅವರ ಮನೆಯಲ್ಲಿ ಸಮಾರೋಪಗೊಂಡಿತು.
ಸಾಮೂಹಿಕ ಗೋಪೂಜೆಯ ಮೂಲಕ ದೇಸೀ ಗೋವಿನ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ದೇಸೀ ಗೋತಳಿ ಅಭಿವೃದ್ಧಿಯತ್ತ ಕೃಷಿಕರು ಮನಸ್ಸು ಮಾಡಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಮುರಳಿಕೃಷ್ಣ ಭಟ್ ವಳಲಂಬೆ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಸತ್ಯನಾರಾಯಣ ಮೊಗ್ರ, ದೇವಕಿ. ಜಿ. ಭಟ್ ಪನ್ನೆ, ಶ್ರೀಕೃಷ್ಣ ಶರ್ಮ.ಪಿ., ಶ್ರೀಕೃಷ್ಣ ಭಟ್ ಗುಂಡಿಮಜಲು, ಮೊದಲಾದವರು ಇದ್ದರು.
ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…
ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…
ಪರಿಸರ ನಾಶವು ಕೇವಲ ಸಮಸ್ಯೆಯಲ್ಲ, ಅದು ಅಪರಾಧ ಎಂಬುದನ್ನು “ಗ್ರೀನ್ ಕ್ರೈಮ್” ಪುಸ್ತಕ…
ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಯೋಜನೆ ಆರಂಭಗೊಂಡಿದ್ದು, ರೈತರ ಆದಾಯ ಹೆಚ್ಚಿಸಲು ಮತ್ತು…
ಕರ್ನಾಟಕದ ವಿವಿಧ ಭಾಗಗಳಲ್ಲಿ ಮತ್ತೆ ಮಳೆಯ ಚಟುವಟಿಕೆ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಹಾಗೂ…
ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗುರ ಮಳೆಯ ಸಾಧ್ಯತೆ…