ಶ್ರೀ ಮದ್ವಾಲ್ಮೀಕಿ ರಾಮಾಯಣದ 108 ಪಾರಾಯಣ | ” ರಾಮಾಯಣ ಸಿದ್ಧ” ಗೌರವಾರ್ಪಣೆ

September 29, 2020
2:07 PM

ಶ್ರೀ ಮದ್ವಾಲ್ಮೀಕಿ ರಾಮಾಯಣದ 108 ಪಾರಾಯಣ ಮಾಡಿ ವಿಶೇಷವಾಗಿ ಸಾಧನೆ ಮಾಡಿದ ಕಾಟುಕುಕ್ಕೆಯ ಬಿ ವಿ ನಾರಾಯಣ ಭಟ್ಟರಿಗೆ ಗೌರವಾರ್ಪಣಾ ಕಾರ್ಯಕ್ರಮವು ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳವರ ನಿರ್ದೇಶನದಂತೆ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ  ಸಂಪನ್ನವಾಯಿತು.

Advertisement

ಈ ಸಂದರ್ಭ  ಬಿ ವಿ ನಾರಾಯಣ ಭಟ್ಟರು ಶ್ರೀ ಮದ್ವಾಲ್ಮೀಕಿ ರಾಮಾಯಣ ಪಾರಾಯಣದ ಶ್ರೀ ರಾಮ ಪಟ್ಟಾಭಿಷೇಕ ಸರ್ಗವನ್ನು ಪಾರಾಯಣ ಮಾಡಿದರು. ಬಳಿಕ ಜರಗಿದ ಸನ್ಮಾನ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಮುಳ್ಳೇರಿಯಾ ಮಂಡಲಾಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಸ್ತಾವನೆ ಮಾಡಿ ಸ್ವಾಗತಿಸಿದರು.

ಮಹಾಮಂಡಲ ಧರ್ಮಕರ್ಮ ವಿಭಾಗದ ಸಹಕಾರ್ಯದರ್ಶಿ ವೇ ಮೂ ಕೇಶವಪ್ರಸಾದ ಭಟ್ಟ ಕೂಟೇಲು ಇವರು ದಿಕ್ಸೂಚಿ ಮಾತುಗಳನ್ನಾಡಿ ಶ್ರೀ ಮದ್ವಾಲ್ಮೀಕಿ ರಾಮಾಯಣದ ವಿಶೇಷತೆ, ಔಚಿತ್ಯ, ಉದ್ದೇಶ, ಪರಿಣಾಮ, ಫಲ ಇವುಗಳ ಬಗ್ಗೆ ವೇದದ ಶಾಸ್ತ್ರೀಯ ಮಾಹಿತಿಗಳನ್ನು ಪ್ರಸ್ತುತಪಡಿಸಿದರು.

 

 

ಬಿ ವಿ ನಾರಾಯಣ ಭಟ್ಟ ಮತ್ತು ಶೈಲಾ ಯನ್ ಭಟ್ ಇವರನ್ನು ಶಾಲುಹೊದೆಸಿ ಶ್ರೀಗಂಧ ಹಾರಾರ್ಪಣೆ ಮಾಡಿ ಫಲ, ಅಭಿನಂದನಾ ಪತ್ರ ಇವುಗಳನ್ನಿತ್ತು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹವ್ಯಕ ಮಹಾಮಂಡಲ ವಿದ್ಯಾರ್ಥಿವಾಹಿನೀ ಸಂಘಟನಾ ನೇತೃತ್ವದಲ್ಲಿ ಕುಮಾರಿ ದಿವ್ಯಾ ಭಾರತಿ, ಒಡಿಯೂರು ಮನೆ, ಕನ್ಯಾನ ವಲಯ, ಮಂಗಳೂರು ಮಂಡಲ ಇವರು ರಚಿಸಿದ ಬಿ ವಿ ನಾರಾಯಣ ಭಟ್ಟರ ಭಾವ ಚಿತ್ರವನ್ನು ಗೌರವ ಪೂರ್ಣವಾಗಿ ಅವರಿಗೆ ಸಮರ್ಪಣೆ ಮಾಡಿದರು.

ಈ ಕುರಿತಾದ ಮಾಹಿತಿಯನ್ನು ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಅವರು ವಿವರಿಸಿದರು. ದಿವ್ಯಾ ಭಾರತಿ ಇವರಿಗೆ ಮಹಾ ಮಂಡಲ ಮಾತೃತ್ವಂ ಸಂಚಾಲಕಿ ಈಶ್ವರಿ ಬೇರ್ಕಡವು, ಮಂಡಲ ಮಾತೃ ವಿಭಾಗ ಪ್ರಧಾನೆ  ಕುಸುಮಾ ಪೆರ್ಮುಖ ಇವರು ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿದರು.

ಮಹಾ ಮಂಡಲ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಮಹಾಮಂಡಲ ಶಾಸನತಂತ್ರದ ಗುರುಸಂಪರ್ಕ ಶ್ರೀಸಂಯೋಜಕರು ಹಾಗೂ ಮುಳ್ಳೇರಿಯಾ ಮಂಡಲ ಗುರಿಕ್ಕಾರ ಸತ್ಯನಾರಾಯಣ ಭಟ್ ಮೊಗ್ರ, ಶಿವಪ್ರಸಾದ ವರ್ಮುಡಿ, ಜಯದೇವ ಖಂಡಿಗೆ ಇವರು ಅಭಿನಂದನಾ ಭಾಷಣ ಮಾಡಿದರು.

ಸನ್ಮಾನಿತರಾದ ಬಿ ವಿ ನಾರಾಯಣ ಭಟ್ಟರು ರಾಮಾಯಣ ಪಾರಾಯಣದ ಸಂದರ್ಭದ ಅನುಭವ ಮತ್ತು ಸನ್ಮಾನಿಸಿದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಗೋಶಾಲಾ ಆಡಳಿತ ಮಂಡಳೀಯ ಕಾರ್ಯದರ್ಶಿ ಕೃಷ್ಣ ಪ್ರಸಾದ ಬನಾರಿ ಇವರು ಗೋಶಾಲೆಯ ಬಗ್ಗೆ ಮಾಹಿತಿಗಳನ್ನಿತ್ತರು. ಕುಂಬಳೆ ವಲಯಾಧ್ಯಕ್ಷರಾದ ಬಾಲಕೃಷ್ಣ ಶರ್ಮ ಇವರು ಧನ್ಯವಾದವನ್ನಿತ್ತರು. ಎಣ್ಮಕಜೆ ವಲಯ ಕಾರ್ಯದರ್ಶಿ ಶಂಕರಪ್ರಸಾದ ಕುಂಚಿನಡ್ಕ ಇವರು ಸಭಾ ನಿರೂಪಣೆ ಮಾಡಿ ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ಸಂಯೋಜನೆ ಮಾಡಿದರು.

ವಿದ್ಯಾರ್ಥಿ ವಾಹಿನಿ ಪ್ರಧಾನ ಗುರುಮೂರ್ತಿ ಮೇಣ, ಮಂಡಲ, ವಲಯ ಹಾಗೂ ಗೋಶಾಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸೆ.9 ಸುಳ್ಯದಲ್ಲಿ ಮೊಸರು ಕುಡಿಕೆ ಉತ್ಸವ | ಮಾಜಿ ಸಂಸದ ಪ್ರತಾಪ್‌ ಸಿಂಹ ಅವರಿಗೆ ಆಹ್ವಾನ |
August 25, 2024
10:23 PM
by: ದ ರೂರಲ್ ಮಿರರ್.ಕಾಂ
ಮಾನಸ ಭಾರದ್ವಾಜ್ ಗೆ ಡಾಕ್ಟರೇಟ್ ಪದವಿ
June 5, 2024
11:00 AM
by: ದ ರೂರಲ್ ಮಿರರ್.ಕಾಂ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ವಿಕಿಪೀಡಿಯ ಜ್ಞಾನವನ್ನು ತಿಳಿದುಕೊಳ್ಳುವ ಜೊತೆ ಹಂಚುವ ಕೆಲಸ ಮಾಡುತ್ತಿದೆ
February 21, 2024
7:57 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group