ಪಿಎಂ ಕಿಸಾನ್ ಪಟ್ಟಿಯಲ್ಲಿ ಅನರ್ಹರಾಗಿದ್ದ ಕೆಲ ರೈತರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ತಿಳಿಸಿದ್ದಾರೆ. ಕೈ ಬಿಟ್ಟ ರೈತರನ್ನು ಹೊರತುಪಡಿಸಿ ಉಳಿದೆಲ್ಲಾ ಅರ್ಹ ಫಲಾನುಭವಿಗಳು ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ಲೋಕಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪಿಎಂ ಕಿಸಾನ್ ಸಹಿತ ಸರ್ಕಾರದ ಎಲ್ಲಾ ಯೋಜನೆಗಳ ಸಹಾಯಧನವು ಇನ್ನು ಮುಂದ ಆಧಾರ್ ಕಾರ್ಡ್ ನೋಂದಣಿಯಾದ ಬ್ಯಾಂಕ್‌ಗೆ ಮಾತ್ರಾ ಪಾವತಿಯಾಗುತ್ತದೆ. ಅದಕ್ಕಾಗಿ ಆಧಾರ್ ಸೀಡಿಂಗ್ ಕಾರ್ಯ ನಡೆಯುತ್ತದೆ. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸಂಖ್ಯೆಯು ಲಿಂಕ್ ಆಗಿರಬೇಕು, ಕೇವಲ ಲಿಂಕ್ ಆಗಿದ್ದರೆ ಸಾಲದು ಸೀಡಿಂಗ್ ಆಗಿರಬೇಕು. ಸೀಡಿಂಗ್ ಆಗಿರದ ಆಧಾರ್ ಕಾರ್ಡ್‌ಗಳಿಗೆ ಸಹಾಯಧನವು ಮುಂದಿನ ದಿನಗಳಲ್ಲಿ ಪಾವತಿಯಾಗುವುದಿಲ್ಲ.ಈಗ ಪಿಎಂ ಕಿಸಾನ್ ಯೋಜನೆಯಲ್ಲೂ ಇದೇ ಸಮಸ್ಯೆಯಾಗುತ್ತಿದೆ.
ನಕಲಿ ವಿಳಾಸಗಳು, ಮೃತರ ಖಾತೆಗೆ ಹಣ ಪಾವತಿ ತಡೆಯಲು ಮುಂದಿನ ದಿನಗಳಲ್ಲಿ ಬ್ಯಾಂಕ್ ಖಾತೆಗಳ ಬದಲಾಗಿ ಆಧಾರ್ ಸಂಖ್ಯೆಗಳಿಗೆ ಹಣ ಪಾವತಿಯಾಗುತ್ತದೆ. ಈ ಸಂದರ್ಭದಲ್ಲಿ ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆಗಳು ಸೀಡಿಂಗ್ ಆಗಿರಬೇಕಾಗಿರುತ್ತದೆ. ಒಂದು ಆಧಾರ್ ಗೆ ಒಂದು ಖಾತೆ ಮಾತ್ರಾ ಸೀಡಿಂಗ್ ಆಗಿರುತ್ತದೆ. ಆಧಾರ್ ಗೆ ನಿಮ್ಮ ಬ್ಯಾಕ್ ಖಾತೆ ಸೀಡಿಂಗ್ ಆಗಿದೆಯೇ ಎಂದು ಪರಿಶೀಲನೆ ಮಾಡಲು ಈ ಲಿಂಕ್ ಮೂಲಕ ಗಮನಿಸಬಹುದಾಗಿದೆ. https://resident.uidai.gov.in/bank-mapper
ಒಂದು ವೇಳೆ ಆಧಾರ್ ಸಂಖ್ಯೆ ಜೊತೆ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಆಗದೇ ಇದ್ದರೆ ಅಥವಾ ಸೀಡಿಂಗ್ ಆಗದೇ ಇದ್ದರೆ ಬ್ಯಾಂಕ್ ನಲ್ಲಿ ಈ ಬಗ್ಗೆ ಪ್ರತ್ಯೇಕವಾಗಿ ತಿಳಿಸಿ ಸೀಡಿಂಗ್ ಮಾಡಿಸಿದರೆ ಪಿಎಂ ಕಿಸಾನ್ ಯೋಜನೆಯ ಹಣ ಹಾಗೂ ಸರ್ಕಾರದ ಇತರ ಎಲ್ಲಾ ಯೋಜನೆಯ ಹಣವು ಪಾವತಿಯಾಗುತ್ತದೆ.
ಒಂದು ಔಷಧವು ಮಾರುಕಟ್ಟೆಗಿಳಿಯಲು ಹಲವು ಪರೀಕ್ಷೆಗೆ ಒಡ್ಡಿಕೊಂಡು, ಸರಕಾರದಿಂದ ಮಾನ್ಯತೆ ಪಡೆದಾಗ ಮಾತ್ರ…
ನಿಮ್ಮ ಮನೆಯು ಕೇವಲ ಒಂದು ಇಟ್ಟಿಗೆಯ ಗೋಡೆಗಳ ಸಮೂಹವಲ್ಲ; ಇದು ನಿಮ್ಮ ಜೀವನದ…
ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಿಂದ ಸ್ಪೇನ್, ಫ್ರಾನ್ಸ್ ಮತ್ತು ಸೈಬೀರಿಯಾದವರೆಗೆ ಭೀಕರ ಮಳೆ,…
ದೇಶದ ಕೃಷಿ ಹಾಗೂ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟ…
ರಾಜ್ಯದಲ್ಲಿ ನೆನೆಗುದ್ದಿಗೆ ಬಿದ್ದಿದ್ದ ಸುಮಾರು 43 ಸಾವಿರ ಕೋಟಿ ರೂಪಾಯಿ ವೆಚ್ಚದ ರೈಲ್ವೆ…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರೀ ಮಳೆಯ…