ನೈಸರ್ಗಿಕ ಕೃಷಿಗೆ ಸರ್ಕಾರದಿಂದ ಉತ್ತೇಜನ | ಪ್ರತಿ ಎಕರೆಗೆ ಸಹಾಯಧನ…|

March 30, 2023
8:18 PM

ಕರ್ನಾಟಕ ಸರ್ಕಾರವು ಕೃಷಿ ಭೂಮಿಯನ್ನು ಉಳಿಸುವುದರ ಜೊತೆಗೆ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳ ಬೆಳೆಯುವ ನೈಸರ್ಗಿಕ ಕೃಷಿಯ ಮೂಲಕ ಸಿರಿಧಾನ್ಯಗಳಿಗೆ ಇನ್ನಷ್ಟು ಆದ್ಯತೆಯನ್ನು ನೀಡಲು ಮುಂದಾಗಿದೆ. ರಾಸಾಯನಿಕ ಬಳಕೆಯಿಂದ ಕೃಷಿ ಭೂಮಿಯು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇದು ಹೀಗೇ ಮುಂದುವರೆದರೆ ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ನೇರ ಪರಿಣಾಮ ಬೀರುವುದರ ಬಗ್ಗೆ ಎಚ್ಚೆತ್ತುಗೊಂಡ ಸರ್ಕಾರ,ಇದನ್ನು ತಪ್ಪಿಸಲು ಮುಂದಾಗಿದೆ.

Advertisement
Advertisement

ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ತಮ್ಮ ಮೊದಲ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ನೈಸರ್ಗಿಕ ಕೃಷಿ ಯೋಜನೆಯನ್ನು ಮತ್ತಷ್ಟು ವಿಸ್ತರಣೆ ಮಾಡಲು ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಗೆ ಸಂಬಂಧಿಸಿದ ಐದು ವಿಶ್ವವಿದ್ಯಾಲಯ ವ್ಯಾಪ್ತಿಯ ತಲಾ ಒಂದು ಸಾವಿರ ಹೆಕ್ಟರ್ ನಲ್ಲಿ ನೈಸರ್ಗಿಕ ಕೃಷಿ ಮಾಡಲು ಘೋಷಣೆ ಮಾಡಲಾಗಿತ್ತು. ಅದಕ್ಕೀಗ ಸರ್ಕಾರ ಸಿದ್ಧತೆಯನ್ನು ನಡೆಸಿದೆ.

Advertisement

ನೈಸರ್ಗಿಕ ಕೃಷಿ ಅವಲಂಬಿಸಿದ ರೈತರಿಗೆ ಪ್ರತಿ ಎಕ್ಕರೆಗೆ ರೂ.7000 ಪ್ರೋತ್ಸಾಹ ಧನವನ್ನು ಸರ್ಕಾರ ನೀಡಲು ಮುಂದಾಗಿದೆ. ಇದನ್ನು ಹೆಚ್ಚಿಸುವ ಚಿಂತನೆಯೂ ಸರ್ಕಾರಕ್ಕಿದೆ. ಪ್ರತಿ ವರ್ಷ ದೇಶದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಗೆ ಸುಮಾರು ಮೂರು ಲಕ್ಷ ಕೋಟಿ ರೂಪಾಯಿಗಳ ಸಬ್ಸಿಡಿ ನೀಡಲಾಗುತ್ತಿದೆ.ಇದನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.ಅದಕ್ಕಾಗಿಯೇ ನೈಸರ್ಗಿಕ ಕೃಷಿ ಪದ್ಧತಿಗೆ ಆದ್ಯತೆ ನೀಡುವುದು ಸರ್ಕಾರದ ಉದ್ದೇಶವಾಗಿದ್ದು,ಈ ನಿಟ್ಟಿನಲ್ಲಿ ರೈತರಿಗೆ ಪ್ರತಿ ಎಕ್ಕರೆಗೆ ರೂ.7000 ಪ್ರೋತ್ಸಾಹ ಧನ ನೀಡುವ ಮೂಲಕ ನೈಸರ್ಗಿಕ ಕೃಷಿಗೆ ಉತ್ತೇಜನೆ ನೀಡಲಾಗುತ್ತಿದೆ.

Advertisement

ನೈಸರ್ಗಿಕ ಕೃಷಿ ಎಂದರೇನು? : ನೈಸರ್ಗಿಕ ಕೃಷಿಯು ರಾಸಾಯನಿಕ ಮುಕ್ತ ಅಥವಾ ಸಾಂಪ್ರದಾಯಿಕ ಕೃಷಿ ವಿಧಾನವಾಗಿದೆ. ಇದು ಬೆಳೆಗಳು,ಮರಗಳು ಮತ್ತು ಜಾನುವಾರಗಳನ್ನು ಕ್ರಿಯಾತ್ಮಕ ಜೀವ ವೈವಿಧ್ಯತೆಯೊಂದಿಗೆ ಸಂಯೋಜಿಸುವ ಕೃಷಿ ವಿಜ್ಞಾನ ಆಧಾರಿತ ವೈವಿಧ್ಯಮಯ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ಇದರಿಂದ ರಾಸಾಯನಿಕ ಬಳಕೆ ಕಡಿಮೆಯಾಗಿ ಭೂಮಿಯ ಫಲವತ್ತತೆಯೂ ಉಳಿಯುತ್ತದೆ ಹಾಗೂ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬೆಳೆಯಬಹುದು.

ಒಂದುವರೆ ದರ್ಶ ದಶಕದ ಹಿಂದೆ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಶೇಕಡ 1 ರಿಂದ 1.5 ಇತ್ತು. ಆದರೆ ಈಗ 0.5ಕ್ಕೆ ಇಳಿಕೆ ಆಗಿರುವುದು ಗಮನಹರಿಸಬೇಕಾದ ವಿಷಯ. ಇದು ಹೀಗೇ ಮುಂದುವರೆದರೆ ಕೃಷಿ ಉತ್ಪನ್ನಗಳಿಗೆ ಪರಾವಲಂಬಿಯಾಗಬೇಕಾಗುತ್ತದೆ.ಇದರಿಂದ ಶೇ.25 ಆಹಾರ ಉತ್ಪಾದನೆ ಕಡಮೆಯಾಗುತ್ತದೆ.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ | ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ |
April 25, 2024
3:00 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror