Advertisement
The Rural Mirror ವಾರದ ವಿಶೇಷ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ

Share

ಸರ್ಕಾರಿ ಶಾಲೆಗಳು ಎಂದರೆ ಇನ್ನೂ ಹಲವರ ಮನಸ್ಸಿನಲ್ಲಿ ಕೇವಲ ಮೂಲಭೂತ ಪಾಠ ಕಲಿಸುವ ಕೇಂದ್ರ, ಶಿಕ್ಷಣ ಅಂದರೆ ಅಷ್ಟೇ ಎನ್ನುವ ಕಲ್ಪನೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಹಾಗೂ ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲೂ ಹೊಸ ಪ್ರಯೋಗಗಳು ಆರಂಭವಾಗುತ್ತಿದ್ದು, ಅದರ ಭಾಗವಾಗಿ ಈಗ ಚೆಸ್ ತರಬೇತಿ ಕಾರ್ಯಕ್ರಮ ಆರಂಭಿಸಿರುವುದು ವಿಶೇಷವಾದ ಬೆಳವಣಿಗೆಯಾಗಿದೆ. …… ಮುಂದೆ ಓದಿ……

Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ ಉದ್ದೇಶದಿಂದ “ಚೆಸ್ ಇನ್ ಸ್ಕೂಲ್” ಎಂಬ ಮಹತ್ವದ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್  ಮಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಚೆಸ್ ಆಟವನ್ನು ಸರಕಾರಿ ಶಾಲಾ ಮಕ್ಕಳಿಗೆ ಪ್ರಾಯೋಗಿಕವಾಗಿ ಪರಿಚಯಿಸುವ ಕಾರ್ಯಕ್ರಮವು ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ, ಸ್ಯಾಂಡ್ಸಪಿಟ್, ಬೆಂಗ್ರೆ, ಮಂಗಳೂರಿನಲ್ಲಿ ನಡೆಯಿತು.  ಇಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಆಟವನ್ನಷ್ಟೇ ಕಲಿಸದೆ, ಅದರ ಪ್ರಯೋಜನಗಳು, ಬೌದ್ಧಿಕ ಬೆಳವಣಿಗೆಯ ಮಹತ್ವ ಹಾಗೂ ಮುಂದಿನ ದಿನಗಳಲ್ಲಿ ಚೆಸ್‌ನ್ನು ಮುಂದುವರಿಸಲು ಬೇಕಾದ ಮಾರ್ಗದರ್ಶನವನ್ನು ನೀಡಲಾಯಿತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ …… ಮುಂದೆ ಓದಿ……

ಚೆಸ್ ಆಟವನ್ನು ಸಾಮಾನ್ಯವಾಗಿ “ಶ್ರೀಮಂತ ಮಕ್ಕಳ ಆಟ” ಎಂದು ಕೆಲವರು ಭಾವಿಸಿದರೂ ಇದ್ದಾರೆ. ಆದರೆ  ವಾಸ್ತವದಲ್ಲಿ ಚೆಸ್‌ ಎಂಬುದ ಮಕ್ಕಳಲ್ಲಿ, ಏಕಾಗ್ರತೆ, ತಾಳ್ಮೆ, ತಾರ್ಕಿಕ ಚಿಂತನೆ, ನಿರ್ಧಾರ ಸಾಮರ್ಥ್ಯ, ಸಮಸ್ಯೆ ಪರಿಹಾರ ಶಕ್ತಿ, ಆತ್ಮವಿಶ್ವಾಸ ಇವುಗಳನ್ನು ಬೆಳೆಸುವ ಅತ್ಯುತ್ತಮ ಶೈಕ್ಷಣಿಕ ಸಾಧನವಾಗಿದೆ. ಇದೇ ಕಾರಣಕ್ಕೆ ಚೆಸ್ ಅನ್ನು ಶಾಲಾ ಹಂತದಲ್ಲೇ ಪರಿಚಯಿಸುವುದು ಮಕ್ಕಳ ಭವಿಷ್ಯದ ಸಾಮರ್ಥ್ಯ ನಿರ್ಮಾಣಕ್ಕೆ ಪೂರಕ.

ಕಾರ್ಯಕ್ರಮದ ಆರಂಭದಲ್ಲಿ ಕರ್ನಾಟಕ ಚೆಸ್ ಅಸೋಸಿಯೇಷನ್‌ನ ಉಪಾಧ್ಯಕ್ಷ  ರಮೇಶ್ ಕೋಟೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಚೆಸ್ ಅಸೋಸಿಯೇಷನ್ ಬಗ್ಗೆ ಮಾತನಾಡಿದರು.  ಚೆಸ್‌ನಂತಹ ಬೌದ್ಧಿಕ ಆಟವನ್ನು ಸರಕಾರಿ ಶಾಲೆಗಳಿಗೂ ತಲುಪಿಸುವುದು ಅಗತ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಮುಂದಾಳು ಪ್ರಭಾಕರ ಶ್ರೀಯಾನ್ ಉಪಸ್ಥಿತರಿದ್ದು, ಶಾಲಾ ಮಕ್ಕಳಿಗೆ ಇದು ಹೊಸ ಅವಕಾಶ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ  ಉಮಾ ಲಕ್ಷ್ಮಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಮಕ್ಕಳಲ್ಲಿ ಹೊಸ ಚಿಂತನೆ ಮತ್ತು ಶಿಸ್ತು ಬೆಳೆಸುವ ದಿಕ್ಕಿನಲ್ಲಿ ಈ ಯೋಜನೆಯ ಮಹತ್ವವನ್ನು ವಿವರಿಸಿದರು.

ರಮೇಶ್‌ ಕೋಟ್

ಚೆಸ್ ಮಕ್ಕಳಲ್ಲಿ ತಾರ್ಕಿಕ ಚಿಂತನೆ ಮತ್ತು ಆತ್ಮವಿಶ್ವಾಸ ಬೆಳೆಸುವ ಸಾಧನ. ಸರ್ಕಾರಿ ಶಾಲೆಗಳಲ್ಲಿ ಇದು ತಲುಪಬೇಕು,‌ – ರಮೇಶ್ ಕೋಟೆ,  ಉಪಾಧ್ಯಕ್ಷ,  ಕರ್ನಾಟಕ ಚೆಸ್ ಅಸೋಸಿಯೇಷನ್‌

ಇದೀಗ  ದಕ್ಷಿಣ ಕನ್ನಡ ಚೆಸ್ ಅಸೋಸಿಯೇಶನ್‌ ಸರ್ಕಾರಿ ಶಾಲೆಗಳಲ್ಲಿ ಚೆಸ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಮೊದಲ ಹಂತದಲ್ಲಿ ಬೋಳೆ, ಗಾಂಧಿನಗರ, ಮಲ್ಲಿಕಟ್ಟೆ ಹಾಗೂ ಮಗ್ಗುಡ ಭಾಗಗಳ ಶಾಲೆಗಳಲ್ಲಿ ಚೆಸ್ ಪಾಠ ಆರಂಭವಾಗಿದ್ದು ಮಕ್ಕಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ತರಬೇತುದಾರರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಚೆಸ್ ತಂತ್ರಗಳು ಹಾಗೂ ಸ್ಪರ್ಧಾತ್ಮಕ ಅಭ್ಯಾಸ ನೀಡಲಾಗುತ್ತಿದೆ. ಶಾಲಾ ಶಿಕ್ಷಕರು ಹಾಗೂ ಪಾಲಕರು ಈ ಹೊಸ ಪ್ರಯತ್ನವನ್ನು ಸ್ವಾಗತಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸರ್ಕಾರಿ ಶಾಲೆಗಳಿಗೆ ಈ ಯೋಜನೆಯನ್ನು ವಿಸ್ತರಿಸಬೇಕೆಂಬ ಬೇಡಿಕೆ ಹೆಚ್ಚಾಗಿದೆ.

ಅಮರಶ್ರೀ ಆಳ್ವ

ಚೆಸ್ ಮಕ್ಕಳಲ್ಲಿ ಚಿಂತನೆ ಮತ್ತು ಶಿಸ್ತು ಬೆಳೆಸುವ ಶಕ್ತಿ ಹೊಂದಿದೆ. ಸರ್ಕಾರಿ ಶಾಲೆಗಳಿಗೆ ಇದು ದೊಡ್ಡ ಅವಕಾಶ,” –  ಅಮರಶ್ರೀ ಆಳ್ವ, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಚೆಸ್‌ ಎಸೋಸಿಯೇಶನ್

ಗ್ರಾಮೀಣ ಸಮುದಾಯದ ಮಕ್ಕಳಿಗೆ ಸಾಮಾನ್ಯವಾಗಿ ತರಬೇತಿ ಹಾಗೂ ತೆರೆದುಕೊಳ್ಳುವ  ಅವಕಾಶ ಕಡಿಮೆ. ಆದರೆ ಇಂತಹ ಕಾರ್ಯಕ್ರಮಗಳ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೂ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ವೇದಿಕೆಗೆ ತಯಾರಾಗುವ ಅವಕಾಶ ಸಿಗುತ್ತದೆ.  ಚೆಸ್ ಕಲಿಯುವುದು ಮಕ್ಕಳನ್ನು ಕೇವಲ ಆಟಗಾರರನ್ನಾಗಿ ಅಲ್ಲ, ಚಿಂತಕರನ್ನಾಗಿ ರೂಪಿಸುವ ಶಕ್ತಿ ಹೊಂದಿದೆ.‌ ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ …… ಮುಂದೆ ಓದಿ……

Rural Mirror ಒಳನೋಟ
ಗ್ರಾಮೀಣ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಸಾಮಾನ್ಯವಾಗಿ ತರಬೇತಿ ಮತ್ತು ತೆರೆದುಕೊಳ್ಳುವ ಅವಕಾಶಗಳು ಕಡಿಮೆ. ಆದರೆ “ಚೆಸ್ ಇನ್ ಸ್ಕೂಲ್” ಎಂಬ ಕಾರ್ಯಕ್ರಮಗಳು ಶಿಕ್ಷಣದ ವ್ಯಾಪ್ತಿಯನ್ನು ಪಾಠ ಪುಸ್ತಕದಾಚೆಗೆ ವಿಸ್ತರಿಸುತ್ತವೆ.  ಚೆಸ್ ಕಲಿಯುವುದು ಮಕ್ಕಳನ್ನು ಕೇವಲ ಆಟಗಾರರನ್ನಾಗಿ ಮಾತ್ರವಲ್ಲ, ಚಿಂತಕರನ್ನಾಗಿ, ತಂತ್ರಜ್ಞರನ್ನಾಗಿ ಮತ್ತು ನಿರ್ಧಾರಶೀಲ ವ್ಯಕ್ತಿಗಳನ್ನಾಗಿ ರೂಪಿಸುವ ಶಕ್ತಿ ಹೊಂದಿದೆ.  ಇಂತಹ ಪ್ರಯೋಗಗಳು ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲೂ ಪ್ರತಿಭೆ ಬೆಳೆಸಲು ಅನಂತ ಅವಕಾಶಗಳಿವೆ ಎಂಬುದನ್ನು ತೋರಿಸುತ್ತವೆ. ಗ್ರಾಮೀಣ ಸಮುದಾಯದ ಮಕ್ಕಳಿಗೂ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ವೇದಿಕೆಗೆ ತಯಾರಾಗುವ ಹೊಸ ದಾರಿ ಇದರಿಂದ ತೆರೆದುಕೊಳ್ಳುತ್ತಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!

ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…

10 hours ago

ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ

ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…

11 hours ago

ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ

ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…

11 hours ago

ಶುದ್ಧ ಹಿಮಾಲಯವೂ ಸುರಕ್ಷಿತವಲ್ಲ..! ಮರುಭೂಮಿ ಧೂಳಿನೊಂದಿಗೆ ಹರಡುವ ರೋಗಕಾರಕಗಳು

ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…

11 hours ago

ಕೃಷಿ ಆಧಾರಿತ ಕೈಗಾರಿಕೆ ಉತ್ತೇಜನದಿಂದ ರೈತರ ಭವಿಷ್ಯ ರೂಪಾಂತರ

ರಾಜಸ್ಥಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ರೈತರ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು…

11 hours ago

7.12 ಲಕ್ಷ ಮಲೆನಾಡು ಗಿಡ್ಡ ಗೋವುಗಳ ದಾಖಲೆ | ರಾಜ್ಯದ ದೇಶೀ ತಳಿ ಸಂರಕ್ಷಣೆಗೆ ಹೊಸ ಒತ್ತು

ಕರ್ನಾಟಕದ ಮಲೆನಾಡು ಭಾಗದ ವಿಶಿಷ್ಟ ದೇಶೀಯ ತಳಿ “ಮಲೆನಾಡು ಗಿಡ್ಡ ಗೋವು” ಸಂರಕ್ಷಣೆ…

19 hours ago