Advertisement
MIRROR FOCUS

ರಾಜಕೀಯ ದ್ವೇಷಕ್ಕೆ ಮಕ್ಕಳ ಯಕ್ಷಗಾನ ಅರ್ಧಕ್ಕೆ ನಿಲ್ಲಿಸಿದ ಆ ಮಹಾಶಯ ಯಾರು..? | ಕಲೆಯ ಮೇಲೂ ರಾಜಕೀಯ ವಕ್ರದೃಷ್ಠಿ..!

Share

ಕಲೆಗೆ ಎಲ್ಲೆ ಇಲ್ಲ. ಅದು ಯಾರ ಸೊತ್ತು ಅಲ್ಲ. ಅದರಲ್ಲೂ ಕಲೆಯನ್ನು ಉಳಿಸಬೇಕಾದವರು ನಮ್ಮ ಮುಂದಿನ ಮಕ್ಕಳು(Children). ಅವರಿಗೆ ಈಗಿನಿಂದಲೇ ಅದರ ಬಗ್ಗೆ ಪರಿಚಯ, ಅಭಿನಯ, ತಾಲೀಮು ಮಾಡಿಸಿದರಷ್ಟೇ ಅವರು ಅದನ್ನು ಮುಂದುವರೆಸಿಕೊಂಡು ಹೋಗಲು ಸಾಧ್ಯ. ಅದಕ್ಕೆ ಮುಖ್ಯವಾಗಿ ಬೇಕಾದದ್ದು ಹಿರಿಯರ ಸಹಕಾರ. ಆದರೆ ಇಲ್ಲೊಂದು ಕಡೆ ರಾಜಕೀಯ(political) ವೈಷಮ್ಯಕ್ಕೆ ಕಲೆಯನ್ನೇ ನುಂಗಿ ಹಾಕಿ ಸಣ್ಣ ಮಕ್ಕಳಿಗೆ, ಕಲಾವಿದರಿಗೆ(Artists), ಕಲಾಭಿಮಾನಿಗಳಿಗೆ ಅವಮಾನ ಮಾಡಿದ ಘಟನೆ ನಡೆದಿದೆ.

ಕುಂದಾಪುರ(Kundapura) ತಾಲೂಕು ಹೇರಿಕುದ್ರುನಲ್ಲಿ ನಡೆಯುತ್ತಿದ್ದ ಮಕ್ಕಳ ಯಕ್ಷಗಾನವನ್ನು(Yakshagana) ನಿಲ್ಲಿಸಿದ ರಾಜಕೀಯ ಕಾರ್ಯಕರ್ತರು. ರಾಜಕೀಯವನ್ನು ಇಂತಹ ವಿಚಾರದಲ್ಲಿ ತರುವುದು ಸರಿಯೇ? ಮಕ್ಕಳ ಹಾಗೂ ಅವರ ಕುಟುಬದವರಿಗೆ ಎಸ್ಟು ನೋವಾಗಿರಬಹುದು.? ಆರಕ್ಷಕರು ಉದಯ ಪೂಜಾರಿ ಹೆರಿಕುದ್ರು  ದೂರು ಬಂದಿರುವುದಾಗಿ ತಿಳಿಸಿದರು. ಮಹಾಂಕಲಿ ದೇವಸ್ಥಾನದ ಅರ್ಚಕ ಸ್ಥಾನದಲ್ಲಿರುವ ಇವರು ಇಂತ ಹೀನ ಕೆಲಸ ಮಾಡುವುದು ಸರಿಯೇ?

ರಾಜಕೀಯ ವೈಷಮ್ಯ ಹಿನ್ನೆಲೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಕ್ಕಳ ಯಕ್ಷಗಾನ ಅರ್ಧಕ್ಕೆ ನಿಲ್ಲಿಸಿರುವಂತಹ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಹೇರಿಕುದ್ರುವಿನಲ್ಲಿ ನಡೆದಿದೆ. ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಮಕ್ಕಳ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುಂದಾಪುರ ಪೊಲೀಸ್ ಠಾಣೆಗೆ ಆನೆಗಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ ಪೂಜಾರಿ ದೂರು ನೀಡಿದ್ದರು. ದೂರಿನ ಹಿನ್ನಲೆ ಪೊಲೀಸರು ಮಕ್ಕಳ ಯಕ್ಷಗಾನವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ರಾತ್ರಿ 10:30 ರ ವರೆಗೆ ಯಕ್ಷಗಾನ ನಡೆಸಲು ಸಮಿತಿ ಅನುಮತಿ ಪಡೆದಿದ್ದು, ಆದರೆ ಸಮಯ ಮೀರುತ್ತಿದ್ದಂತೆ ಉದಯ ಪೂಜಾರಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಯಕ್ಷಗಾನದಲ್ಲಿ ಭಾಗವಹಿಸಬೇಕಿದ್ದ ಭಾಗವತರ ಅನಾರೋಗ್ಯದಿಂದ ವಿಳಂಬವಾಗಿದ್ದು, ಒಂದು ಗಂಟೆ ತಡವಾಗಿ ಕಾರ್ಯಕ್ರಮ ಪ್ರಾರಂಭವಾಗಿದೆ. ಅವಧಿ ಮುಗಿದ ಬಳಿಕ ಯಕ್ಷಗಾನ ನಡೆಸುತ್ತಿರುವ ಕುರಿತು ಉದಯ ಪೂಜಾರಿಯಿಂದ ದೂರು ನೀಡಿದ್ದು, ರಾಜಕೀಯ ಪ್ರೇರಿತವಾಗಿ ಯಕ್ಷಗಾನ ನಿಲ್ಲಿಸುವ ಯತ್ನ ನಡೆಯುತ್ತಿರುವ ಕುರಿತು ಆಯೋಜಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕಲೆಯನ್ನು ಉಳಿಸುವಲ್ಲಿ ಎಲ್ಲರು ಸಹಕರಿಸಬೇಕು. ನಮ್ಮ ಮಕ್ಕಳು ಇಂಮಥ ಕಲೆಯನ್ನು ಅಭಿನಯಿಸುತ್ತಿರುವಾಗ ಅದಕ್ಕೆ ಅಡ್ಡಿ ಪಡಿಸಿರುವುದು ಖೇದಕರ ಸಂಗತಿ. ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಬೆಳೆಸಲು ನಾವೇ ಮುಂದು ಬರದಿದ್ದರೆ ಮುಂದೆ ನಮ್ಮ ಕಲೆ ಬೆಳೆಯುವುದಿಲ್ಲ. ಇಂತವರು ಇರುವವರೆಗೆ ನಾಟಕ, ಯಕ್ಷಗಾನ ಮಾಡುವುದು ಬಹಳ ಕಷ್ಟ ಇದೆ ಎಂದು ಈ ಕುರಿತು ಬೇಸರ ವ್ಯಕ್ತಪಡಿಸಿದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

15 hours ago

ಕೂದಲಿಗೆ ಬಳಸುವ ಎಣ್ಣೆಯ ಪ್ರಯೋಜನ

ಚಳಿಗಾಲ ಎಂದರೆ ಒಂದು ರೀತಿಯಲ್ಲಿ ಕಿರಿಕಿರಿ. ವಯಸ್ಸಾದವರಂತೆ ಚರ್ಮ ಸುಕ್ಕು ಕಟ್ಟುವುದು, ಆರೋಗ್ಯದಲ್ಲಿ…

21 hours ago

ಚಳಿಗಾಲದಲ್ಲಿ ಹೃದಯದ ಕಾಳಜಿಯ ಬಗ್ಗೆ ನಿರ್ಲಕ್ಷ್ಯ ಬೇಡ- ಎಚ್ಚರಿಕೆ ಇರಲಿ

ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತದೆ. ಆದರಲ್ಲೂ ಹೃದಯದ ಸಮಸ್ಯೆಗಳ ಬಗ್ಗೆ ಕಾಳಜಿ…

21 hours ago

ಮಹಿಳೆಯರಿಗಾಗಿ ಉಚಿತ ಆರಿ ವರ್ಕ್ಸ್ ತರಬೇತಿ

ಮಹಿಳೆಯರು ಸಹ ಉದ್ಯೋಗವನ್ನು ಮಾಡಬೇಕೆಂದು ಸರ್ಕಾರವು ಅನೇಕ ರೀತಿಯ ಯೋಜನೆಯನ್ನು ಜಾರಿಗೊಳಿಸಿದ್ದು, ಟ್ರೈಲರಿಂಗ್…

21 hours ago

ಮೊಟ್ಟೆಯಲ್ಲಿ ಅಪಾಯಕಾರಿ ಕ್ಯಾನ್ಸರ್ ಅಂಶ ಪತ್ತೆ ಎಂಬ ಊಹಪೋಹಗಳಿಗೆ ಬ್ರೇಕ್

ಮೊಟ್ಟೆಗಳು ಉತ್ತಮ ಗುಣಮಟ್ಟದ ಪ್ರೋಟೀನ್ ಅಂಶ ವಾಗಿದ್ದು, ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ನೀಡುತ್ತಿದ್ದರು.…

21 hours ago

ಗೃಹಲಕ್ಷ್ಮಿ ಸಹಕಾರ ಬ್ಯಾಂಕ್ ಕಡಿಮೆ ಬಡ್ಡಿಯಲಿ ಸಾಲ ಪಡೆಯಿರಿ

ಹಣದ ಅವಶ್ಯಕತೆಯಿರುವ ಎಲ್ಲರೂ ಬ್ಯಾಂಕ್ ಗಳಲ್ಲಿ ಸಾಲಕ್ಕೆ ಮೊರೆ ಹೋಗಿ ಅಧಿಕ ಬಡ್ಡಿಯನ್ನು…

21 hours ago