ಗ್ರಾಮೀಣ ಭಾರತ ನಿರ್ಮಾಣವಾಗಲಿ | ಮಹಾತ್ಮ ಗಾಂಧೀಜಿಯವರ ಮಾತು ಗ್ರಾಮೀಣ ಭಾರತ ನಿಜವಾದ ಭಾರತ | ಧರ್ಮಗುರು ಫಾ.ಆದರ್ಶ್ ಜೋಸೆಫ್ ಬರೆಯುತ್ತಾರೆ…|

Advertisement
 ಆಜಾದಿ ಕಾ ಅಮೃತಮಹೋತ್ಸವ ಹಾಗೂ ಗ್ರಾಮೀಣ ಭಾರತದ ಬಗ್ಗೆ ಕಲ್ಪನೆಯ ಬಗ್ಗೆ ಸುಳ್ಯ ತಾಲೂಕಿನ ಗುತ್ತಿಗಾರಿನ ಸೈಂಟ್ ಮೇರಿಸ್ ಚರ್ಚ್ ಧರ್ಮಗುರು  ಫಾ. ಆದರ್ಶ್ ಜೋಸೆಫ್ ಅವರು ಬರೆದಿದ್ದಾರೆ. ಸಾಮಾಜಿಕ ಕಾರ್ಯಕರ್ತರೂ ಆಗಿರುವ ಆದರ್ಶ್‌ ಜೋಸೆಫ್‌ ಅವರು ಗ್ರಾಮೀಣ ಭಾರತದ, ಸಾಮಾಜಿಕ ಕಾರ್ಯಗಳ ಹಿನ್ನೆಲೆಯಲ್ಲಿ ಬರೆದಿದ್ದಾರೆ.

ನಮ್ಮ ದೇಶದ ಪ್ರಧಾನ ಮಂತ್ರಿಯಾಗಿದ್ದ ಇಂದಿರಾಗಾಂಧಿಯವರು ಭಾರತೀಯ ಬಾಹ್ಯಕಾಶ ಯಾತ್ರಿಕನಾದ  ರಾಕೇಶ್ ಶರ್ಮಾ ಅವರು ಬಾಹ್ಯಕಾಶದಲ್ಲಿ ಇದ್ದಾಗ… ಮೇಲಿಂದ ನಮ್ಮ ಭಾರತ ಹೇಗೆ ಕಾಣುತ್ತದೆ ಎಂಬ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರವಾಗಿ ರಾಕೇಶ್ ಶರ್ಮಾ ಹೇಳಿದರು… ಸಾರೇ ಜಹಾಂ ಸೇ ಅಚ್ಚಾ ಹಿಂದೂಸ್ತಾನ್ ಹಮಾರಾ…

Advertisement

ಅಜಾದಿ ಕಾ ಅಮೃತ್ ಮಹೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಜಾತಿ, ಧರ್ಮ, ರಾಜಕೀಯ ಭಾವ ಭೇದ ವಿಲ್ಲದೆ ಪ್ರತಿಯೊಬ್ಬ ನಾಗರೀಕನು  ಭಾರತ ಸಂಸ್ಕೃತಿ ಮತ್ತು ನಮ್ಮ ದೇಶದ ಸಂವಿಧಾನ ವನ್ನು ಎತ್ತಿ ಹಿಡಿಯುವ ಮೂಲಕ ದೇಶವನ್ನು ಅಭಿವೃದ್ಧಿಯ ಪಥದತ್ತ ಚಲಾಯಿಸಬೇಕು. ಒಂದೊಂದು ಗ್ರಾಮದಲ್ಲಿ ಭಾರತ ನಿರ್ಮಾಣವಾಗಬೇಕು. ಗ್ರಾಮ ಭಾರತ ಎಂಬ ಆಶಯದೊಂದಿಗೆ ಗ್ರಾಮ ಮಟ್ಟದ, ಸಾಮಾನ್ಯ ಜನರ ಮೂಲಭೂತ ಕೊರತೆಯನ್ನು ( ರಸ್ತೆ, ಸೇತುವೆ, ವಸತಿ, ವಿದ್ಯುತ್, ನೆಟ್ ವರ್ಕ್, ನಿರುದ್ಯೋಗ ಉದ್ಯೋಗ ವಿಲ್ಲದೆ ಯುವಕರು ಕಂಗಲಾಗಿದೆ ಇತ್ಯಾದಿ ಸಮಸ್ಯೆ ) ನೀಗಿಸುವಲ್ಲಿ ಜನಪ್ರತಿನಿದಿಗಳು, ಅಧಿಕಾರಿಗಳು ನಿಸ್ವಾರ್ಥ ಸೇವೆ ಮಾಡುವ ಮೂಲಕ ಆಯಾ ಗ್ರಾಮವನ್ನು ಗ್ರಾಮ ಭಾರತ ಮಾಡಬಹುದು.ಅಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ದೇಶದ ಹಳ್ಳಿ ಗಳನ್ನು, ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಕೊಡುಗೆ ನಮ್ಮ ಪ್ರದಾನ ಮಂತ್ರಿ  ನರೇಂದ್ರ ಮೋದಿ ಅವರು ನೀಡುತ್ತೇವೆ ಎಂಬುವುದು ನಮ್ಮ ಭರವಸೆ .

Advertisement
Advertisement
Advertisement

ಭಾರತ ನನ್ನ ದೇಶ, ಎಲ್ಲಾ ಭಾರತೀಯರು ನನ್ನ ಸಹೋದರ, ಸಹೋದರಿಯರು….. ಸಾಮರಸ್ಯ ದಿಂದ ಮುಂದೆ ಸಾಗೋಣ. ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿದರೆ ಮಾತ್ರ ಸ್ವಾತಂತ್ರ್ಯ. ಪ್ರಜಾಪ್ರಭುತ್ವ ಇಲ್ಲದ ದೇಶದಲ್ಲಿ ಸ್ವಾತಂತ್ರ್ಯ ಇಲ್ಲ.ಪ್ರತಿಯೊಬ್ಬ ನಾಗರೀಕನು ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಲು ಬದ್ಧನಾಗಿರಬೇಕು.

ದೇಶದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ನಮಿಸುತ್ತಾ… ಜೈ ಭಾರತ… ಸಾರೇ ಜಹಾಂ ಸೇ ಅಚ್ಚಾ, ಹಿಂದೂಸ್ತಾನ್ ಹಮಾರಾ…

Advertisement
Advertisement
ಬರಹ :
ಫಾ. ಆದರ್ಶ್ ಜೋಸೆಫ್ ಧರ್ಮಗುರುಗಳು ಹಾಗೂ ಸಾಮಾಜಿಕ ಕಾರ್ಯಕರ್ತರು, ಸೈಂಟ್ ಮೇರಿಸ್ ಚರ್ಚ್, ಗುತ್ತಿಗಾರು
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಗ್ರಾಮೀಣ ಭಾರತ ನಿರ್ಮಾಣವಾಗಲಿ | ಮಹಾತ್ಮ ಗಾಂಧೀಜಿಯವರ ಮಾತು ಗ್ರಾಮೀಣ ಭಾರತ ನಿಜವಾದ ಭಾರತ | ಧರ್ಮಗುರು ಫಾ.ಆದರ್ಶ್ ಜೋಸೆಫ್ ಬರೆಯುತ್ತಾರೆ…|"

Leave a comment

Your email address will not be published.


*