ಕಡಬ ತಾಲೂಕಿನ ಕಾಣಿಯೂರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಅಭ್ಯರ್ಥಿ 50 ಕ್ಕೂ ಹೆಚ್ಚು ಜನರನ್ನು ಸೇರಿಸಿ ಪ್ರಚಾರ ಮಾಡಿ ಶಾಸಕರ ಸಂಸದರ ಅನುದಾನಗಳ ಪಟ್ಟಿ ಪ್ರಕಟಿಸಿ ನೀತಿ ಸಂಹಿತೆಯ ಉಲ್ಲಂಘಿಸಿದ ಕಾರಣ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪ್ರಕರಣ ದಾಖಲಾಗಿದೆ.
ಚಾರ್ವಾಕ ಗ್ರಾಮದಲ್ಲಿ ಒಂದೇ ದಿನ 13 ಕೊರೋನಾ ಪ್ರಕರಣ ದಾಖಲಾಗಿದ್ದರು, ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳದೆ 50 ಮಿಕ್ಕಿ ಜನರನ್ನು ಸೇರಿಸಿ ಪ್ರಚಾರ ಮಾಡಿದ್ದು ಹಾಗೂ ಶಾಸಕರು, ಸಂಸದರ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರ ಅನುದಾನಗಳ ಪಟ್ಟಿ ತಯಾರಿಸಿ ಹಂಚಿದ್ದರಿಂದ ಬಿಜೆಪಿ ಬೆಳಂದೂರು ಶಕ್ತಿ ಕೇಂದ್ರ ಅಧ್ಯಕ್ಷ, ಚಾರ್ವಾಕ 1 ನೇ ವಾರ್ಡ್ ನ ಬಿಜೆಪಿಯ ಬೆಂಬಲಿತ ಅಭ್ಯರ್ಥಿ ಗಣೇಶ ಉದನಡ್ಕ ವಿರುದ್ಧ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣ ದಾಖಲಿಸಬೇಕೆಂದು ಹಾಗೂ ನೀತಿಸಂಹಿತೆ ಉಲ್ಲಂಘಿಸಿದರಿಂದ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ ಮಾಡಬೇಕೆಂದು ಪಕ್ಷೇತರ ಅಭ್ಯರ್ಥಿ ಕಾಣಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಇಡ್ಯಡ್ಕ ದೂರು ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ಅಡಿಕೆ ಮಾರುಕಟ್ಟೆಯಲ್ಲಿ ವರ್ತಕರ ಸಿಂಡಿಕೇಟ್ ಮತ್ತು ವಿದೇಶಿ ಆಮದು ಬೆಲೆ ಅಸ್ಥಿರತೆಗೆ ಕಾರಣವಾಗಿವೆ.…
ಭಾರತದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಐತಿಹಾಸಿಕವಾಗಿ 55 ಗಿಗಾವ್ಯಾಟ್ ಹೆಚ್ಚಳವಾಗಿದೆ. ನವೀಕರಿಸಬಹುದಾದ ಇಂಧನ…
ದೇಶದಲ್ಲಿ LPG ವಿತರಣೆ ಸಾಮಾನ್ಯವಾಗಿದ್ದು, ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಿಸಲಾಗಿದೆ.…
ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.…
2026ರ ಮುಂಗಾರು ಸಾಮಾನ್ಯವಾಗಿ ಆರಂಭವಾದರೂ ನಂತರ ಮಳೆಯ ಕೊರತೆ ಸಂಭವಿಸಬಹುದು. ಎಲ್‌ನಿನೋ ಪರಿಣಾಮದಿಂದ…
ಕರ್ನಾಟಕದಲ್ಲಿ ಇನ್ನೂ ಕೆಲ ದಿನಗಳು ಬಿಸಿಲು ತಾಪಮಾನ ಹೆಚ್ಚಾಗಿದ್ದು, ತುಂತುರು ಮಳೆ ಮಾತ್ರ…