ದೀಪಾವಳಿ | ದೀಪಗಳಿಂದ ಕಂಗೊಳಿಸಿದ ಜನರ ಸೇತುವೆ | ಸೇತುವೆಯ ಮೂಲಕ ಶಾಶ್ವತ ಬೆಳಕಿನ ಆಶಯ |

October 24, 2022
10:55 PM

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಬಳಿ ಜನರು ಹಾಗೂ ವಿವಿಧ ಗಣ್ಯರ ಸಹಕಾರದೊಂದಿಗೆ ಜನರಿಂದಲೇ ರಚನೆಯಾದ ಗ್ರಾಮಸೇತು ಬಳಿ ದೀಪಾವಳಿ ಆಚರಣೆ ನಡೆಯಿತು. ಸತತವಾಗಿ ಮೂರನೇ ವರ್ಷದ ದೀಪಾವಳಿಯು ಸರಳವಾಗಿ ಆಚರಿಸಲಾಯಿತು. ದೀಪಗಳಿಂದ ಗ್ರಾಮಸೇತು ಕಂಗೊಳಿಸಿತು.

Advertisement
Advertisement

ಗ್ರಾಮಸೇತುವಿನ ಅಕ್ಕಪಕ್ಕದಲ್ಲಿ ಹಣತೆ ಹಚ್ಚಿದ ಗ್ರಾಮಭಾರತ ತಂಡದ ಸದಸ್ಯರು ಹಾಗೂ ನಾಗರಿಕರು ಸಮಸ್ತರಿಗೂ ದೀಪಾವಳಿಯ ಶುಭಾಶಯ ಕೋರಿ ಸಿಹಿ ಹಂಚಿದರು. ಕಳೆದ ಮೂರು ವರ್ಷಗಳಿಂದ ಮೊಗ್ರ- ಏರಣಗುಡ್ಡೆ ಸೇತುವೆ ಬೇಡಿಕೆ ಈಡೇರಿಕೆಗೆ ಒತ್ತಾಯ ನಡೆಯುತ್ತಿದೆ. ಕಳೆದ ವರ್ಷ ಜನರೇ ಕಾಲು ಸಂಕ ರಚಿಸಿದ್ದರು. ಹೀಗಾಗಿ ಕಳೆದ ಎರಡು ವರ್ಷಗಳಿಂದ ಮೊಗ್ರ ಶಾಲೆ ಹಾಗೂ ಆಸುಪಾಸಿನ ಜನರಿಗೆ ತಾತ್ಕಾಲಿಕ ಸಂಪರ್ಕ ಸಾಧ್ಯವಾಗಿದೆ. ಮುಂದೆ ಶಾಶ್ವತ ಸೇತುವೆ ಬೇಡಿಕೆ ಇದೆ.  ದೀಪಾವಳಿಯ ಸಂದರ್ಭ ಸೇತುವೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಣತೆ ಬೆಳಗಿ ಗ್ರಾಮದ ಜನರಿಗೆ ಸೇತುವೆ ಬೆಳಕಾಗಲಿ ಎಂದು ಒತ್ತಾಯಿಸುತ್ತಿದ್ದಾರೆ.

ದೀಪ ಬೆಳಗುವ ಕಾರ್ಯಕ್ರಮದ ಸಂದರ್ಭ ಗ್ರಾಮಭಾರತ ತಂಡದ ಅಧ್ಯಕ್ಷರಾಗಿ ಗಂಗಾಧರ ಭಟ್‌ ಪುಚ್ಚಪ್ಪಾಡಿ, ಸಂಚಾಲಕರಾದ ಸುಧಾಕರ ಮಲ್ಕಜೆ, ಕಾರ್ಯದರ್ಶಿ ಮುಂಜುನಾಥ ಮುತ್ಲಾಜೆ, ಗ್ರಾಪಂ ಸದಸ್ಯ‌ ವಸಂತ ಮೊಗ್ರ ಸೇರಿದಂತೆ ಪ್ರಮುಖರು ಭಾಗವಹಿಸಿದರು.

Advertisement

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ
July 26, 2025
8:18 AM
by: ದ ರೂರಲ್ ಮಿರರ್.ಕಾಂ
ಗಂಡ-ಹೆಂಡತಿ ಸಂಬಂಧವು ಜೀವನದ ಅತ್ಯಂತ ಗಾಢವಾದ ಮತ್ತು ಆಧ್ಯಾತ್ಮಿಕ ಬಂಧ
July 26, 2025
7:38 AM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಹಲಸಿನ ಬೀಜದ ಖಾರದ ಕಡ್ಡಿ
July 26, 2025
7:27 AM
by: ದಿವ್ಯ ಮಹೇಶ್
ಮರಳು ಖರೀದಿ, ಸಾಗಾಟಕ್ಕೆ  ಆ್ಯಪ್  ಚಾಲನೆ
July 25, 2025
11:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group