ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಬಳಿ ಜನರು ಹಾಗೂ ವಿವಿಧ ಗಣ್ಯರ ಸಹಕಾರದೊಂದಿಗೆ ಜನರಿಂದಲೇ ರಚನೆಯಾದ ಗ್ರಾಮಸೇತು ಬಳಿ ದೀಪಾವಳಿ ಆಚರಣೆ ನಡೆಯಿತು. ಸತತವಾಗಿ ಮೂರನೇ ವರ್ಷದ ದೀಪಾವಳಿಯು ಸರಳವಾಗಿ ಆಚರಿಸಲಾಯಿತು. ದೀಪಗಳಿಂದ ಗ್ರಾಮಸೇತು ಕಂಗೊಳಿಸಿತು.
ಗ್ರಾಮಸೇತುವಿನ ಅಕ್ಕಪಕ್ಕದಲ್ಲಿ ಹಣತೆ ಹಚ್ಚಿದ ಗ್ರಾಮಭಾರತ ತಂಡದ ಸದಸ್ಯರು ಹಾಗೂ ನಾಗರಿಕರು ಸಮಸ್ತರಿಗೂ ದೀಪಾವಳಿಯ ಶುಭಾಶಯ ಕೋರಿ ಸಿಹಿ ಹಂಚಿದರು. ಕಳೆದ ಮೂರು ವರ್ಷಗಳಿಂದ ಮೊಗ್ರ- ಏರಣಗುಡ್ಡೆ ಸೇತುವೆ ಬೇಡಿಕೆ ಈಡೇರಿಕೆಗೆ ಒತ್ತಾಯ ನಡೆಯುತ್ತಿದೆ. ಕಳೆದ ವರ್ಷ ಜನರೇ ಕಾಲು ಸಂಕ ರಚಿಸಿದ್ದರು. ಹೀಗಾಗಿ ಕಳೆದ ಎರಡು ವರ್ಷಗಳಿಂದ ಮೊಗ್ರ ಶಾಲೆ ಹಾಗೂ ಆಸುಪಾಸಿನ ಜನರಿಗೆ ತಾತ್ಕಾಲಿಕ ಸಂಪರ್ಕ ಸಾಧ್ಯವಾಗಿದೆ. ಮುಂದೆ ಶಾಶ್ವತ ಸೇತುವೆ ಬೇಡಿಕೆ ಇದೆ. ದೀಪಾವಳಿಯ ಸಂದರ್ಭ ಸೇತುವೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಣತೆ ಬೆಳಗಿ ಗ್ರಾಮದ ಜನರಿಗೆ ಸೇತುವೆ ಬೆಳಕಾಗಲಿ ಎಂದು ಒತ್ತಾಯಿಸುತ್ತಿದ್ದಾರೆ.
ದೀಪ ಬೆಳಗುವ ಕಾರ್ಯಕ್ರಮದ ಸಂದರ್ಭ ಗ್ರಾಮಭಾರತ ತಂಡದ ಅಧ್ಯಕ್ಷರಾಗಿ ಗಂಗಾಧರ ಭಟ್ ಪುಚ್ಚಪ್ಪಾಡಿ, ಸಂಚಾಲಕರಾದ ಸುಧಾಕರ ಮಲ್ಕಜೆ, ಕಾರ್ಯದರ್ಶಿ ಮುಂಜುನಾಥ ಮುತ್ಲಾಜೆ, ಗ್ರಾಪಂ ಸದಸ್ಯ ವಸಂತ ಮೊಗ್ರ ಸೇರಿದಂತೆ ಪ್ರಮುಖರು ಭಾಗವಹಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…