ಕೊಟ್ಟಿಗೆಯಲಿ ತುಂಬಿ ತುಳುಕುವ ಹಸು ಕರುಗಳು : ವೃದ್ಧಾಪ್ಯದಲ್ಲೂ ಮಲೆನಾಡು ಗಿಡ್ಡ ತಳಿ ಹಸು ಸಾಕುತ್ತಿರುವ ಅಜ್ಜಿ : ಬತ್ತದ ಜೀವನ ಉತ್ಸಾಹ

May 5, 2024
8:45 PM

ನಿನ್ನೆ ನನ್ನ ಬಂಧುಗಳ ಮನೆಯ ಸಮಾರಂಭದಲ್ಲಿ ಭಾಗವಹಿಸಿ ಮನೆಗೆ ಮರಳಿ ಬರುವಾಗ ಮಾರ್ಗ ಮದ್ಯೆ ಮತ್ತೊಬ್ಬ ಬಂಧುಗಳ ಮನೆಗೆ ಬಹುಕಾಲದ ನಂತರ ಹೋಗಿದ್ದೆ. ಆ ಕುಟುಂಬ ಒಂದು ಕಾಲದಲ್ಲಿ ತುಂಬಿದ ಕುಟುಂಬ ಆಗಿತ್ತು. ಆದರೆ ಇಡೀ ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಮದುವೆ ಆಗಿತ್ತು. ಅದರಲ್ಲಿ ಒಬ್ಬರು ಮಾತ್ರ ಸಂಸಾರ ಮಾಡಿ ಮಕ್ಕಳು ಮೊಮ್ಮಕ್ಕಳು ಕಂಡರು. ಇನ್ನೊಬ್ಬ ಹೆಣ್ಣು ಮಗಳು ಆ ಕಾಲದಲ್ಲಿ ಬಾಲ್ಯ ವಿವಾಹ ಆಗಿ ಅವರ ಅತ್ತೆ ಉರಿತ ತಡೆದುಕೊಳ್ಳಲಾಗದೇ ರಾತ್ರೋರಾತ್ರಿ ಅತ್ತೆ ಮನೆಯಿಂದ ಧಿಕ್ಕರಿಸಿ ಮನೆಗೆ ಬಂದವರು ಮತ್ತೆ ಗಂಡನ ಮನೆಗೆ ಹೋಗಲಿಲ್ಲ. ನಾನು ನನ್ನ ಬಾಲ್ಯದಲ್ಲಿ ನೋಡುವಾಗ ಆ ಮನೆಯಲ್ಲಿ ಎರಡು ಜನ ಅಣ್ಣ ತಮ್ಮ ಮತ್ತು ಮೂರು ಜನ ಹೆಣ್ಣು ಮಕ್ಕಳ ಕುಟುಂಬ ಆಗಿತ್ತು.

ಆಸ್ತಿ ಉದ್ಯೋಗ ಹಣ ಎಲ್ಲಾ ಇದ್ದೂ ಅದೇನೋ ಕಾರಣದಿಂದಾಗಿ ಇವರೆಲ್ಲರೂ ಬ್ರಹ್ಮಚಾರಿಗಳಾಗೇ ಉಳಿದರು. ವಯಸ್ಸು ವೃದ್ಯಾಪ್ಯ ಎಲ್ಲರನ್ನೂ ಕಾಲನ ಕರೆಗೆ ಓಗೊಟ್ಟು ಒಬ್ಬರ ಹಿಂದೆ ಒಬ್ಬರು ಹೋಗುವಂತಾದರು. ಆ ಮನೆಯಲ್ಲಿ ಈಗುಳಿದವರು ಒಬ್ಬರೇ ಆ ವೃದ್ದೆ… ನಾನು ಆ ಮಾರ್ಗದಲ್ಲಿ ಸಂಚರಿಸುವಾಗ
ಆ ಮನೆಯ ಹಿತ್ತಲಿನಲ್ಲಿ ದೊಡ್ಡ ಒಣ ಹುಲ್ಲಿನ ಬಣವೆ ಕಾಣಿಸುತ್ತಿತ್ತು. ಈ ಬಣವೆ ಯನ್ನು ನಾನು ಇವರ ಮನೆಯ ಹಿತ್ತಲಿನಲ್ಲಿ ಯಾರೋ ಒಣ ಹುಲ್ಲಿನ ವ್ಯಾಪಾರಿಗಳು ಸಂಗ್ರಹಿಸಿಟ್ಟಿರಬಹುದು ಎಂದು ಕೊಂಡಿದ್ದೆ. ಈ ವೃದ್ದೆಯ ಮನೆ ರಖಾವಲೆ ನೋಡುವು ದು ನನ್ನ ಸೋದರಮಾವನ ಮಗ. ಒಮ್ಮೆ ಅವನನ್ನು ಈ ಬಗ್ಗೆ ಕೇಳಿದಾಗ ಒಂದು ಅಚ್ಚರಿ ದಾಯಕ ವಿಚಾರ ತಿಳಿಯಿತು… ಆ ವೃದ್ದೆಯ ಮನೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಶುದ್ಧ ಮಲೆನಾಡು ಗಿಡ್ಡ ತಳಿ ಹಸು ಗಳಿವೆ ಎಂಬ ಸುದ್ದಿ…!!!
ನೋಡಿ…

Advertisement
Advertisement

ನಮ್ಮ ಎಲ್ಲರ ಮನೆಯಲ್ಲಿ ಒಂದು ಕಾಲದಲ್ಲಿ ಸಮೃದ್ಧ ವಾಗಿದ್ದ ಮಲೆನಾಡು ಗಿಡ್ಡ ತಳಿ ಹಸುಗಳು “ಅವು ಹಾಲು ಕೊಡೋದು ಕಮ್ಮಿ, ತುಡುಗು, ಮನೆಯಲ್ಲಿ ನೋಡೋರಿಲ್ಲ ಇಂತಹ ಸಾವಿರ ನೆಪಗಳಿಂದ ಅಮೂಲ್ಯ ಗೋ ಸಂಪತ್ತು ಆಹಾರದ ಹಕ್ಕುಗಳಾಗಿ ಕರಗಿ ಹೋದವು. ಈ ನಡುವೆ ಈ ವೃದ್ದೆ ನಿರ್ವಹಣೆ ಗೆ ಜನಗಳ ಇಟ್ಟುಕೊಂಡು ಇಪ್ಪತ್ತು ಜಾನುವಾರುಗಳ ಸಾಕಿಕೊಂಡಿರುವುದು ಅಮೋಘ ಅತ್ಯದ್ಭುತ ಅಚ್ಚರಿ…. ಚಿಕ್ಕ ಒಳಾಯದ ಕೊಟ್ಟಿಗೆಯ ತುಂಬಿ ತುಳುಕುವ ಹಸು ಕರುಗಳು… ಕೊಟ್ಟಿಗೆಗೆ ದರಗು ಹಾಸುತ್ತಾರೆ…
ನೌಕರರು ಗೋವುಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳು ತ್ತಿದ್ದಾರೆ…

Advertisement

ಬಹುಶಃ ಇನ್ಯಾರೇ ಆಗಿದ್ದರೂ ಈ ವೃದ್ಯಾಪ್ಯದಲ್ಲಿ ಇಷ್ಟು ಹಸುಗಳನ್ನು ಸಾಕಲು ಕನಸಲ್ಲೂ “ಮನಸು” ಮಾಡುತ್ತಿರಲಿಲ್ಲ…!! ಆ ವೃಧ್ದೆಗೆ ನಿಧಾನವಾಗಿ ಜ್ಞಾಪಕ ಶಕ್ತಿ ಕುಂದು ತ್ತಿದೆ. ಕಣ್ಣು ಮಂದವಾಗುತ್ತಿದೆ. ಬೆನ್ನು ಸಂಪೂರ್ಣ ಗೂನವಾಗಿದೆ. ನೆಡೆಯಲೂ ಕಷ್ಟ.. ಊಟ ತಿಂಡಿ ಎದುರಿನ ಮನೆಯಿಂದ ಬರುತ್ತದೆ. ಇಷ್ಟಿದ್ದರೂ ಅವರ ಗೋ ಪ್ರೀತಿ ಅಮೋಘ….. ಈ ಎಲ್ಲವೂ ನೆಪಗಳಲ್ಲ ” ಗಂಭೀರವಾದ ಕಾರಣಗಳು” …!! ಆದರೆ ಈ ಕಾರಣವನ್ನು ಮುಂದೊಡ್ಡದೇ ಆ ಗೋವುಗಳ ಹೊಟ್ಟೆ ತುಂಬಿಸಿ ಸಲಹುವ ಮಮತಾಮಯಿ ಅಂತಃಕರಣ ಆ ವೃದ್ದೆಯದ್ದು.

ಈ ವೃದ್ದೆಯ ನಂತರ ಆ ಗೋವುಗಳು ಸ್ವಾಭಾವಿಕ ವಾಗಿ “ಗೋ ವೃದ್ದಾಶ್ರಮ”(ಗೋ ಶಾಲೆ) ತಲುಪುತ್ತದೆ. ಆದರೆ ಈ ಗೋವುಗಳು ತಮ್ಮ ” ಸುಪ್ತ ಆಶಿರ್ವಾದ ” ದ ಮೂಲಕ ಇನ್ನೂ ಹೆಚ್ಚಿನ ಕಾಲ ಈ ವೃದ್ದೆಗೆ ಆಯಸ್ಸು ವೃದ್ದಿಸಿಕೊಡುತ್ತದೆ …. ಇದು ಸತ್ಯ… ಮಲೆನಾಡು ಗಿಡ್ಡ ತಳಿ ಹಸುಗಳನ್ನು ಪ್ರೀತಿಯಿಂದ ಸಾಕಿದರೆ ಅವು ಸಾಕಿದವರ ಕೈ ಹಿಡಿಯುತ್ತದೆ.. ಇಲ್ಲಿ “ಪ್ರೀತಿ ಮತ್ತು ಅರ್ಪಣಾ ಭಾವ” ಮುಖ್ಯ. ದೇವರನ್ನು ಭಕ್ತಿ ಯಿಂದ ಪೂಜಿಸಿದಂತೆ…. ದೇವರು ಆ ಭಕ್ತಿ ಗೆ ಆ ಭಕ್ತನ ಇಷ್ಟಾರ್ಥ ಕರುಣಿಸಿದಂತೆ…
“ಗೋ ಶಕ್ತಿ ” ಗೆ ಈ ವೃದ್ದೆ ಮತ್ತು ಗೋವುಗಳು ಸಾಕ್ಷಿ…..

Advertisement

ವೃದ್ದೆ ಇನ್ನೂ ಹೆಚ್ಚಿನ ಕಾಲ ಬಾಳಿ ಬದುಕಲಿ.. ಈ ಮನೆಯ ಕೊಟ್ಟಿಗೆಯಲ್ಲಿ ಗೋವುಗಳ “ತಾವು” ಇರಲೆಂದು ಬಯಸೋಣ…. ಆ ನೌಕರ ವರ್ಗ ದ ಗೋ ಸೇವೆಗೆ ಧನ್ಯವಾದಗಳನ್ನ ಹೇಳೋಣ…‌

ಪ್ರಬಂಧ ಅಂಬುತೀರ್ಥ
9481801869

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ನಕಲಿ ದಾಖಲೆ ಕೊಟ್ಟು ಪಡಿತರ ಚೀಟಿ ಮಾಡಿಸಿದರೆ ಜೋಕೆ : ರಾಜ್ಯದಲ್ಲಿ ಬರೋಬ್ಬರಿ 12 ಲಕ್ಷ ರೇಷನ್ ಕಾರ್ಡ್ ರದ್ದು : ಕಾರಣ ಏನು..?
August 2, 2024
2:13 PM
by: The Rural Mirror ಸುದ್ದಿಜಾಲ
ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳಗೊಂಡ ರಬ್ಬರ್‌ ಬಳಕೆ | ಬೆಳೆಗಾರರಿಗೆ ಧಾರಣೆ ಏರಿಕೆಯ ನಿರೀಕ್ಷೆ |
March 25, 2024
11:10 PM
by: ದ ರೂರಲ್ ಮಿರರ್.ಕಾಂ
ಕಾಳಸರ್ಪ ‘ಯೋಗಾಯೋಗ : ಜ್ಯೋತಿಷ್ಯ ಶಾಸ್ತ್ರ, ಮನೋವಿಜ್ಞಾನಿಗಳು ಹೇಳುವುದು ಒಂದೇ : ಭಯಪೀಡಿತರಾಗ ಬೇಡಿ
March 18, 2024
12:12 PM
by: The Rural Mirror ಸುದ್ದಿಜಾಲ
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಯ್ಕೆ ಗೊಂದಲ | ಪಂಜ ಸೇರಿದಂತೆ ದಕ ಜಿಲ್ಲೆಯ ಮೂರು ದೇವಸ್ಥಾನಗಳ ಆಯ್ಕೆಗೆ ತಾತ್ಕಾಲಿಕ ತಡೆ |
March 17, 2024
10:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror