ಆಸ್ತಿ ಉದ್ಯೋಗ ಹಣ ಎಲ್ಲಾ ಇದ್ದೂ ಅದೇನೋ ಕಾರಣದಿಂದಾಗಿ ಇವರೆಲ್ಲರೂ ಬ್ರಹ್ಮಚಾರಿಗಳಾಗೇ ಉಳಿದರು. ವಯಸ್ಸು ವೃದ್ಯಾಪ್ಯ ಎಲ್ಲರನ್ನೂ ಕಾಲನ ಕರೆಗೆ ಓಗೊಟ್ಟು ಒಬ್ಬರ ಹಿಂದೆ ಒಬ್ಬರು ಹೋಗುವಂತಾದರು. ಆ ಮನೆಯಲ್ಲಿ ಈಗುಳಿದವರು ಒಬ್ಬರೇ ಆ ವೃದ್ದೆ… ನಾನು ಆ ಮಾರ್ಗದಲ್ಲಿ ಸಂಚರಿಸುವಾಗ
ಆ ಮನೆಯ ಹಿತ್ತಲಿನಲ್ಲಿ ದೊಡ್ಡ ಒಣ ಹುಲ್ಲಿನ ಬಣವೆ ಕಾಣಿಸುತ್ತಿತ್ತು. ಈ ಬಣವೆ ಯನ್ನು ನಾನು ಇವರ ಮನೆಯ ಹಿತ್ತಲಿನಲ್ಲಿ ಯಾರೋ ಒಣ ಹುಲ್ಲಿನ ವ್ಯಾಪಾರಿಗಳು ಸಂಗ್ರಹಿಸಿಟ್ಟಿರಬಹುದು ಎಂದು ಕೊಂಡಿದ್ದೆ. ಈ ವೃದ್ದೆಯ ಮನೆ ರಖಾವಲೆ ನೋಡುವು ದು ನನ್ನ ಸೋದರಮಾವನ ಮಗ. ಒಮ್ಮೆ ಅವನನ್ನು ಈ ಬಗ್ಗೆ ಕೇಳಿದಾಗ ಒಂದು ಅಚ್ಚರಿ ದಾಯಕ ವಿಚಾರ ತಿಳಿಯಿತು… ಆ ವೃದ್ದೆಯ ಮನೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಶುದ್ಧ ಮಲೆನಾಡು ಗಿಡ್ಡ ತಳಿ ಹಸು ಗಳಿವೆ ಎಂಬ ಸುದ್ದಿ…!!!
ನೋಡಿ…
ನಮ್ಮ ಎಲ್ಲರ ಮನೆಯಲ್ಲಿ ಒಂದು ಕಾಲದಲ್ಲಿ ಸಮೃದ್ಧ ವಾಗಿದ್ದ ಮಲೆನಾಡು ಗಿಡ್ಡ ತಳಿ ಹಸುಗಳು “ಅವು ಹಾಲು ಕೊಡೋದು ಕಮ್ಮಿ, ತುಡುಗು, ಮನೆಯಲ್ಲಿ ನೋಡೋರಿಲ್ಲ ಇಂತಹ ಸಾವಿರ ನೆಪಗಳಿಂದ ಅಮೂಲ್ಯ ಗೋ ಸಂಪತ್ತು ಆಹಾರದ ಹಕ್ಕುಗಳಾಗಿ ಕರಗಿ ಹೋದವು. ಈ ನಡುವೆ ಈ ವೃದ್ದೆ ನಿರ್ವಹಣೆ ಗೆ ಜನಗಳ ಇಟ್ಟುಕೊಂಡು ಇಪ್ಪತ್ತು ಜಾನುವಾರುಗಳ ಸಾಕಿಕೊಂಡಿರುವುದು ಅಮೋಘ ಅತ್ಯದ್ಭುತ ಅಚ್ಚರಿ…. ಚಿಕ್ಕ ಒಳಾಯದ ಕೊಟ್ಟಿಗೆಯ ತುಂಬಿ ತುಳುಕುವ ಹಸು ಕರುಗಳು… ಕೊಟ್ಟಿಗೆಗೆ ದರಗು ಹಾಸುತ್ತಾರೆ…
ನೌಕರರು ಗೋವುಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳು ತ್ತಿದ್ದಾರೆ…
ಬಹುಶಃ ಇನ್ಯಾರೇ ಆಗಿದ್ದರೂ ಈ ವೃದ್ಯಾಪ್ಯದಲ್ಲಿ ಇಷ್ಟು ಹಸುಗಳನ್ನು ಸಾಕಲು ಕನಸಲ್ಲೂ “ಮನಸು” ಮಾಡುತ್ತಿರಲಿಲ್ಲ…!! ಆ ವೃಧ್ದೆಗೆ ನಿಧಾನವಾಗಿ ಜ್ಞಾಪಕ ಶಕ್ತಿ ಕುಂದು ತ್ತಿದೆ. ಕಣ್ಣು ಮಂದವಾಗುತ್ತಿದೆ. ಬೆನ್ನು ಸಂಪೂರ್ಣ ಗೂನವಾಗಿದೆ. ನೆಡೆಯಲೂ ಕಷ್ಟ.. ಊಟ ತಿಂಡಿ ಎದುರಿನ ಮನೆಯಿಂದ ಬರುತ್ತದೆ. ಇಷ್ಟಿದ್ದರೂ ಅವರ ಗೋ ಪ್ರೀತಿ ಅಮೋಘ….. ಈ ಎಲ್ಲವೂ ನೆಪಗಳಲ್ಲ ” ಗಂಭೀರವಾದ ಕಾರಣಗಳು” …!! ಆದರೆ ಈ ಕಾರಣವನ್ನು ಮುಂದೊಡ್ಡದೇ ಆ ಗೋವುಗಳ ಹೊಟ್ಟೆ ತುಂಬಿಸಿ ಸಲಹುವ ಮಮತಾಮಯಿ ಅಂತಃಕರಣ ಆ ವೃದ್ದೆಯದ್ದು.
ಈ ವೃದ್ದೆಯ ನಂತರ ಆ ಗೋವುಗಳು ಸ್ವಾಭಾವಿಕ ವಾಗಿ “ಗೋ ವೃದ್ದಾಶ್ರಮ”(ಗೋ ಶಾಲೆ) ತಲುಪುತ್ತದೆ. ಆದರೆ ಈ ಗೋವುಗಳು ತಮ್ಮ ” ಸುಪ್ತ ಆಶಿರ್ವಾದ ” ದ ಮೂಲಕ ಇನ್ನೂ ಹೆಚ್ಚಿನ ಕಾಲ ಈ ವೃದ್ದೆಗೆ ಆಯಸ್ಸು ವೃದ್ದಿಸಿಕೊಡುತ್ತದೆ …. ಇದು ಸತ್ಯ… ಮಲೆನಾಡು ಗಿಡ್ಡ ತಳಿ ಹಸುಗಳನ್ನು ಪ್ರೀತಿಯಿಂದ ಸಾಕಿದರೆ ಅವು ಸಾಕಿದವರ ಕೈ ಹಿಡಿಯುತ್ತದೆ.. ಇಲ್ಲಿ “ಪ್ರೀತಿ ಮತ್ತು ಅರ್ಪಣಾ ಭಾವ” ಮುಖ್ಯ. ದೇವರನ್ನು ಭಕ್ತಿ ಯಿಂದ ಪೂಜಿಸಿದಂತೆ…. ದೇವರು ಆ ಭಕ್ತಿ ಗೆ ಆ ಭಕ್ತನ ಇಷ್ಟಾರ್ಥ ಕರುಣಿಸಿದಂತೆ…
“ಗೋ ಶಕ್ತಿ ” ಗೆ ಈ ವೃದ್ದೆ ಮತ್ತು ಗೋವುಗಳು ಸಾಕ್ಷಿ…..
ವೃದ್ದೆ ಇನ್ನೂ ಹೆಚ್ಚಿನ ಕಾಲ ಬಾಳಿ ಬದುಕಲಿ.. ಈ ಮನೆಯ ಕೊಟ್ಟಿಗೆಯಲ್ಲಿ ಗೋವುಗಳ “ತಾವು” ಇರಲೆಂದು ಬಯಸೋಣ…. ಆ ನೌಕರ ವರ್ಗ ದ ಗೋ ಸೇವೆಗೆ ಧನ್ಯವಾದಗಳನ್ನ ಹೇಳೋಣ…
ಪ್ರಬಂಧ ಅಂಬುತೀರ್ಥ
9481801869
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…