ಅಕ್ಕ-2024ರ ಸಮ್ಮೇಳನಕ್ಕೆ ಅದ್ಧೂರಿ ಸಿದ್ದತೆ | 3 ದಿನಗಳ ಕಾಲ ಅಮೇರಿಕಾದ ರಿಚ್ಮಂಡ್ ನಗರದಲ್ಲಿ ಕನ್ನಡ ಡಿಂಡಿಮ

August 27, 2024
3:29 PM

ಅಮೇರಿಕಾ ಕನ್ನಡ ಕೂಟಗಳ ಆಗರ (ಅಕ್ಕ)ʼ 2024 ರ ಸಮ್ಮೇಳನಕ್ಕೆ(AKKA conference 2024) ಅದ್ಧೂರಿ ಸಿದ್ದತೆ ನಡೆಸಲಾಗಿದೆ. ಅಮೇರಿಕಾದ(America) 50 ಕ್ಕೂ ಹೆಚ್ಚು ರಾಜ್ಯಗಳ ಕನ್ನಡ ಸಂಘಗಳು(Kannada sangha) ಒಟ್ಟಾಗಿ ಸೇರಿ ಪ್ರತೀ ಎರಡು ವರ್ಷಗಳಿಗೊಮ್ಮೆ ಈ ಸಮ್ಮೇಳನವನ್ನು ಆಯೋಜಿಸುತ್ತವೆ. ಕೋವಿಡ್ ಕಾರಣದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಮುಂದೂಡಲಾಗಿದ್ದ ಈ ಸಮ್ಮೇಳನ ಈ ಬಾರಿ ಅಮೇರಿಕಾದ ವರ್ಜೀನಿಯಾ ರಾಜ್ಯದ ರಿಚ್ಮಂಡ್ ನಗರದಲ್ಲಿ(Richmond city) ಇದೇ ಆಗಸ್ಟ್ 30, 31 ಮತ್ತು ಸೆಪ್ಟಂಬರ್ 1, 2024 ರಂದು ನಡೆಯಲಿದೆ.

Advertisement

ಈ ಸಮ್ಮೇಳನಕ್ಕಾಗಿ 6 ರಿಂದ 8 ಸಾವಿರ ಕನ್ನಡಿಗರು ನೊಂದಾಯಿಸಿಕೊಂಡಿದ್ದು, ಮೂರು ದಿನಗಳ ಕಾಲ ಕನ್ನಡ ಡಿಂಡಿಮ ರಿಚ್ಮಂಡ್ ನಗರದಲ್ಲಿ ಪ್ರತಿಧ್ವನಿಸಲಿದೆ. ಕಾರ್ಯಕ್ರಮದ ಆಕರ್ಷಣೆಗಳಾಗಿ ಜಾನಪದ ಗೀತಗಾಯನ, ನಾಟಕ, ನೃತ್ಯ, ಫ್ಯಾಷನ್ ಷೋ, ಆರ್ಟ್ ಫೆಸ್ಟಿವಲ್, ಕ್ರೀಡಾ ಚಟುವಟಿಕೆಗಳು, ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಫಿಲ್ಮ್ ಫೆಸ್ಟಿವಲ್, ಬುಸಿನೆಸ್ ಫೋರಂ, ಅಪ್ಪು ನೈಟ್, ವಿಧ್ಯಾಭೂಷಣರ ಸಂಗೀತ, ನವೀನ್ ಸಜ್ಜು ಮತ್ತು ತಂಡದವರಿಂದ ಜಾನಪದ ಗೀತೆ, ಗುರುಕಿರಣ್ ನೈಟ್ ಹಾಗು ಕರ್ನಾಟಕದ ಕಲಾವಿದರಿಂದ ವಿವಿಧ ಜಾನಪದ ಕಾರ್ಯಕ್ರಮಗಳು ನಡೆಯಲಿವೆ.

ಕರ್ನಾಟಕದಿಂದ ವಿಶೇಷ ಆಹ್ವಾನಿತರಾಗಿ ಶ್ರೀ ನಿರ್ಮಲಾನಂದ ಸ್ವಾಮೀಜಿ, ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಶಿವರಾಜ್ ತಂಗಡಗಿ, ಕೃಷಿ ಸಚಿವರಾದ ಶ್ರೀ ಚೆಲುವರಾಯಸ್ವಾಮಿ ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ವರ್ಷದ ಸಮ್ಮೇಳನವು ಕನ್ನಡಿಗರಿಗೆ ಒಂದು ಸಂಭ್ರಮದ ಹಬ್ಬವಾಗಿದ್ದು, ಕನ್ನಡ ಮತ್ತು ಕರ್ನಾಟಕದ ಸಂಸ್ಕೃತಿಯನ್ನು ಅಮೇರಿಕಾದ ಕನ್ನಡಿಗರಿಗೆ ಮತ್ತೊಮ್ಮೆ ಸವಿಯುವಂತಹ ಒಂದು ಅಪೂರ್ವ ಅವಕಾಶವಾಗಿದೆ.
– ರವಿ ಬೋರೆಗೌಡ, ಅಧ್ಯಕ್ಷರು, ಅಕ್ಕ, ಅಮೇರಿಕಾ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗೇರು ಹಣ್ಣು ಸೇವನೆಯಿಂದ ಪೌಷ್ಠಿಕಾಂಶದ ಕೊರತೆ ನಿವಾರಣೆ
March 27, 2025
10:57 AM
by: ದ ರೂರಲ್ ಮಿರರ್.ಕಾಂ
ಆಹಾರ ಕಲಬೆರಕೆ ವಿರುದ್ಧ ಕಠಿಣ ಕ್ರಮ | ಸಚಿವ ಪ್ರಲ್ಹಾದ್  ಜೋಷಿ ಸ್ಪಷ್ಟನೆ
March 27, 2025
10:43 AM
by: The Rural Mirror ಸುದ್ದಿಜಾಲ
ಜಲ ಸಂರಕ್ಷಿತ ಗ್ರಾಮಗಳ ರೂಪಿಸಲು ಜಿಲ್ಲಾ ಮಟ್ಟದಲ್ಲಿ ನೀಲನಕ್ಷೆ ತಯಾರಿಸುವಂತೆ ಸೂಚನೆ
March 27, 2025
8:30 AM
by: The Rural Mirror ಸುದ್ದಿಜಾಲ
ಕೊಡಗು ಜಿಲ್ಲೆ | ಬೇಸಿಗೆ  ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಕ್ರಮಕ್ಕೆ ಸೂಚನೆ
March 27, 2025
7:35 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group