Advertisement
MIRROR FOCUS

‘ಗ್ರೀನ್ ಕ್ರೈಮ್’ | ಹವಾಮಾನ ಸಂಕಷ್ಟವಲ್ಲ, ಇದು “ಪರಿಸರ ಅಪರಾಧ” | ಮನೋವಿಜ್ಞಾನಿಯ ಪುಸ್ತಕ ಜಗತ್ತಿಗೆ ಎಚ್ಚರಿಕೆ

Share

ಭೂಮಿ ಇಂದು ಭಾರಿ ಪರಿಸರ ಸಂಕಷ್ಟವನ್ನು ಎದುರಿಸುತ್ತಿರುವಾಗ, ಅದನ್ನು ಕೇವಲ ಹವಾಮಾನ ಬದಲಾವಣೆ ಅಥವಾ ಹವಾಮಾನ ಸಂಕಷ್ಟ ಎಂದು ನೋಡುವುದಕ್ಕಿಂತ, ಇದು “ ಪರಿಸರ ಅಪರಾಧ” ಎಂದು ಪರಿಗಣಿಸಬೇಕಾದ ಅಗತ್ಯವಿದೆ ಎಂಬ ಸಂದೇಶವನ್ನು ಹೊಂದಿರುವ ಹೊಸ ಪುಸ್ತಕ “Green Crime: Inside the Minds of the People Destroying the Planet” ನೀಡುತ್ತದೆ.  ಈ ಪುಸ್ತಕವನ್ನು ಮನೋವಿಜ್ಞಾನಿ ಡಾ. ಜೂಲಿಯಾ ಶಾ ರಚಿಸಿದ್ದು, ಪರಿಸರವನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಿಸುವವರ ಮನೋಭಾವವನ್ನು ಈ ಪುಸ್ತಕ ವಿಶ್ಲೇಷಿಸುತ್ತದೆ. ಇದು ಕೇವಲ ಪರಿಸರ ಸಮಸ್ಯೆಗಳ ವಿವರಣೆ ಅಲ್ಲ; “ಯಾರು, ಏಕೆ, ಹೇಗೆ” ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವಾಗಿದೆ.

ಪರಿಸರ ಅಪರಾಧ ಎಂದರೇನು? : ಪರಿಸರಕ್ಕೆ ಹಾನಿ ಮಾಡುವ ಅನೇಕ ಕ್ರಿಯೆಗಳು ಕಾನೂನುಬಾಹಿರವಾಗಿದ್ದು, ಇವುಗಳನ್ನು “Green Crime” ಅಥವಾ “ಪರಿಸರ ಅಪರಾಧ” ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಅಕ್ರಮ ಅರಣ್ಯ ನಾಶ, ವನ್ಯಜೀವಿ ಕಳ್ಳಗಾರಿಕೆ, ಅಕ್ರಮ ಮೀನುಗಾರಿಕೆ, ವಿಷಕಾರಿ ತ್ಯಾಜ್ಯ ವಿಸರ್ಜನೆ,ತೈಲ ಸೋರಿಕೆ ಇವುಗಳು ಮಾನವ ಆರೋಗ್ಯಕ್ಕೂ, ಜೈವ ವೈವಿಧ್ಯತೆಯಿಗೂ ದೊಡ್ಡ ಅಪಾಯವನ್ನು ಉಂಟುಮಾಡುತ್ತವೆ.

ಅಪರಾಧಿಗಳ ಮನೋವಿಜ್ಞಾನ – 6 ಮುಖ್ಯ ಕಾರಣಗಳು : ಈ ಪುಸ್ತಕದಲ್ಲಿ  ಮೂಲಕ ಪರಿಸರ ಅಪರಾಧಿಗಳ ಪ್ರಮುಖ 6 ಮನೋಭಾವವನ್ನು ವಿವರಿಸಲಾಗಿದೆ. ಅವುಗಳಲ್ಲಿ ಸುಲಭ ದಾರಿಗಳು, ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಧೈರ್ಯ , ಲೋಭ , ಸ್ವಯಂ ಸಮರ್ಥನೆ , ಇತರರ ಅನುಕರಣ, ತನ್ನದಲ್ಲ ಎನ್ನುವ ಭಾವನೆ.. ಈ ಅಂಶಗಳನ್ನು ಅರ್ಥಮಾಡಿಕೊಂಡರೆ ಪರಿಸರ ಅಪರಾಧಗಳನ್ನು ತಡೆಯಲು ಸಾಧ್ಯ ಎಂದು ಲೇಖಕಕರು ಹೇಳುತ್ತಾರೆ.

ಜಾಗತಿಕ ಮಟ್ಟದ ದೊಡ್ಡ ಪ್ರಕರಣಗಳು :  ಈ ಪುಸ್ತಕದಲ್ಲಿ ಕೆಲವು ಪ್ರಮುಖ ಪರಿಸರ ಅಪರಾಧಗಳ ಉದಾಹರಣೆಗಳನ್ನು ನೀಡಲಾಗಿದೆ.  ಅವುಗಳಲ್ಲಿ ಅಕ್ರಮ ಪರಿಸರ ವ್ಯಾಪಾರ, ತೈಲ ಸೋರಿಕೆ, ಅಕ್ರಮ ಗಣಿಗಾರಿಕೆ ಮತ್ತು ಮೀನುಗಾರಿಕೆ… ಇವುಗಳು ಕೇವಲ ಪರಿಸರ ಸಮಸ್ಯೆಗಳಲ್ಲ, ದೊಡ್ಡ ಮಟ್ಟದ ಆರ್ಥಿಕ ಮತ್ತು ಸಂಘಟಿತ ಅಪರಾಧಗಳ ಭಾಗವಾಗಿವೆ.

ಪರಿಸರ ಅಪರಾಧದ ಆರ್ಥಿಕ ಪ್ರಮಾಣ : ಜಾಗತಿಕ ಮಟ್ಟದಲ್ಲಿ ಪರಿಸರ ಅಪರಾಧಗಳು ವರ್ಷಕ್ಕೆ ಸುಮಾರು $110 ರಿಂದ $281 ಬಿಲಿಯನ್ ವರೆಗೆ ಲಾಭ ತರುತ್ತವೆ ಎಂದು ಅಂದಾಜಿಸಲಾಗಿದೆ. ಇದು ವಿಶ್ವದ ದೊಡ್ಡ ಅಕ್ರಮ ವ್ಯವಹಾರಗಳಲ್ಲಿ ಒಂದಾಗಿದೆ.

ಪರಿಹಾರ ಏನು? : ಪುಸ್ತಕದ ಮುಖ್ಯ ಸಂದೇಶವೇನೆಂದರೆ, ಪರಿಸರ ನಾಶವು “ಸಾಮಾನ್ಯ ಸಮಸ್ಯೆ” ಅಲ್ಲ, ಅದು “ಅಪರಾಧ” ಎಂದು ಪರಿಗಣೆಯಾಗಬೇಕು. ಅಪರಾಧಿಗಳ ಮನೋಭಾವವನ್ನು ಅರ್ಥಮಾಡಿಕೊಳ್ಳಬೇಕು ಹಾಗೂ ಕಾನೂನು ಜಾರಿಯನ್ನು ಬಲಪಡಿಸಬೇಕು. ವಿಜ್ಞಾನಿಗಳು, ಪೊಲೀಸ್, ವಕೀಲರು ಒಟ್ಟಾಗಿ ಪರಿಸರಕ್ಕಾಗಿ ಕೆಲಸ ಮಾಡಬೇಕು.  ಇದಲ್ಲದೆ, ಪರಿಸರವನ್ನು ರಕ್ಷಿಸುವ ಪರಿಸರ ಪ್ರಿಯರು, ತನಿಖಾಧಿಕಾರಿಗಳು, ವಿಜ್ಞಾನಿಗಳು – ಇವರ ಪಾತ್ರವೂ ಬಹಳ ಮುಖ್ಯವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

The book “Green Crime” by Dr. Julia Shaw explores the psychology behind environmental criminals and explains why people knowingly destroy the planet. It highlights six key factors driving such crimes and examines major global cases like illegal deforestation, oil spills, and wildlife trafficking. The book emphasizes that understanding criminal behavior is key to preventing environmental destruction.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

1 hour ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

1 hour ago

ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಅಭಿಯಾನಕ್ಕೆ ಚಾಲನೆ | ಕೃಷಿ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ

ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಯೋಜನೆ ಆರಂಭಗೊಂಡಿದ್ದು, ರೈತರ ಆದಾಯ ಹೆಚ್ಚಿಸಲು ಮತ್ತು…

10 hours ago

ಹವಾಮಾನ ವರದಿ | 30-03-2026 | ಇವತ್ತಿನ ಮಳೆ ಎಲ್ಲಿ…? ಎಷ್ಟು ದಿನ ಇದೆ ಮಳೆ…?

ಕರ್ನಾಟಕದ ವಿವಿಧ ಭಾಗಗಳಲ್ಲಿ ಮತ್ತೆ ಮಳೆಯ ಚಟುವಟಿಕೆ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಹಾಗೂ…

20 hours ago

ರಾಜ್ಯದ ಹಲವೆಡೆ ಮಳೆ ; ಬೆಂಗಳೂರಿನಲ್ಲಿ ಹಗುರ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗುರ ಮಳೆಯ ಸಾಧ್ಯತೆ…

24 hours ago

ಮಂಗಳವಾರದಿಂದ ರಾಜ್ಯದಲ್ಲಿ ಹೋಟೆಲ್‌ಗಳಿಗೆ ಹೆಚ್ಚಿನ ವಾಣಿಜ್ಯ ಅಡುಗೆ ಸಿಲಿಂಡರ್‌ಗಳ ಸರಬರಾಜು

ರಾಜ್ಯದಲ್ಲಿ ಹೋಟೆಲ್‌ಗಳಿಗೆ ವಾಣಿಜ್ಯ LPG ಕೊರತೆಯನ್ನು ಸರಿಪಡಿಸಲು ಮಂಗಳವಾರದಿಂದ ಹೆಚ್ಚುವರಿ ಸಿಲಿಂಡರ್ ಸರಬರಾಜು…

1 day ago