Exclusive - Mirror Hunt

Green hero | ದುಬೈನಲ್ಲೂ ಬೆಳೆಯಲಿದೆ ಭಾರತೀಯನ ಕಾಡು…! | ದುಬೈಗೂ ಹೋಗಲಿದೆ ಗೋಮೂತ್ರ‌, ಸೆಗಣಿ…! | ಯಾರು ಈ ಸಾಧಕ…? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದುಬೈನಲ್ಲಿ ಭಾರತೀಯನ ನೇತೃತ್ವದಲ್ಲಿ ಕಾಡು ಬೆಳೆಯಲಿದೆ. ಮಾರ್ಚ್‌ ತಿಂಗಳ ಕೊನೆಗೆ ಈ ಬಗ್ಗೆ ದುಬೈ ಆಡಳಿತದ ಜೊತೆ ಮಾತುಕತೆಯೂ ನಡೆಯಲಿದೆ. ಸುಳ್ಯ ಮೂಲದ ಗುಜರಾತ್‌ನಲ್ಲಿ ಉದ್ಯಮಿಯಾಗಿರುವ ಗ್ರೀನ್‌ ಹೀರೋ ಆಫ್‌ ಇಂಡಿಯಾದ , ಭಾರತದ ಸುಪ್ರಸಿದ್ಧ ಪರಿಸರ ತಜ್ಞ ಡಾ.ಆರ್‌ ಕೆ ನಾಯರ್‌ ಅವರಿಗೆ ದುಬೈನಲ್ಲಿ ಅರಣ್ಯ ಬೆಳೆಸಲು ಕರೆ ಬಂದಿದೆ. ಈ ಬಗ್ಗೆ ದ ರೂರಲ್‌ ಮಿರರ್‌.ಕಾಂ ಅವರ ಜೊತೆ ಮಾತನಾಡಿರುವ ವಿಶೇಷ ಮಾತುಕತೆಯ ಸಾರಾಂಶ ಇಲ್ಲಿದೆ…

Advertisement

ಭಾರತದ 12 ರಾಜ್ಯದಲ್ಲಿ 115 ಕಾಡಗಳನ್ನು ಬೆಳೆಸಿರುವ ಸುಪ್ರಸಿದ್ಧ ಪರಿಸರ ತಜ್ಞ ಡಾ.ಆರ್‌ ಕೆ ನಾಯರ್‌ ಅವರು ಸುಮಾರು 25 ಲಕ್ಷ ಗಿಡಗಳನ್ನು ಈಗಾಗಲೇ ಬೆಳೆಸಿದ್ದಾರೆ. ಭಾರತದ ಭೂಮಿ ವೈವಿಧ್ಯ ನೋಡಿ ಅಲ್ಲಿಗೆ ಬೇಕಾದ ಗಿಡಗಳನ್ನು ಬೆಳೆಸಿದ್ದಾರೆ. ಈ ಮೂಲಕ ಪರಿಸರವನ್ನು ಉಳಿಸುವ ಹಾಗೂ ಬೆಳೆಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಸಮುದ್ರ ತೀರದಲ್ಲೂ ಅರಣ್ಯ ಬೆಳೆಸಿರುವ ಆರ್‌ ಕೆ ನಾಯರಾವರು ಕಚ್‌ ಪ್ರದೇಶದಲ್ಲಿ ಮರಳಿನಲ್ಲೂ ಅರಣ್ಯ ಬೆಳೆಸಿ ಯಶಸ್ಸು ಕಂಡಿದ್ದಾರೆ. ಈ ಅಂಶಗಳನ್ನು ತಿಳಿದು ದುಬೈನಿಂದ ಆರ್‌ ಕೆ ನಾಯರ್‌ ಅವರನ್ನು ಸಂಪರ್ಕಿಸಿ ಕಾಡು ಬೆಳೆಸಲು ಕರೆ ನೀಡಿದ್ದಾರೆ. ಈ ತಿಂಗಳ ಕೊನೆಗೆ ಮಾತುಕತೆಯೂ ನಡೆಯಲಿದೆ. ಈಗಾಗಲೇ ಬೇರೆ ಬೇರೆ ದೇಶಗಳಿಂದ ದುಬೈಗೆ ಆಗಮಿಸಿ ದುಬೈ ಹಸಿರು ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಯಶಸ್ಸು ಕಂಡಿರಲಿಲ್ಲ. ಆದರೆ ವಿವಿಧ ಅನುಭವ ಇರುವ ಕಾರಣದಿಂದ ದುಬೈನಲ್ಲಿ ನಿಶ್ಚಿತವಾಗಿಯೂ ಅರಣ್ಯ ಬೆಳೆಸಬಲ್ಲೆ ಎಂದು ಡಾ.ಆರ್‌ ಕೆ ನಾಯರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದುಬೈನಲ್ಲೂ ಕಾಡು ಮಾಡಲು ಸಾಧ್ಯವಿದೆ, ಇದು ಯಶಸ್ಸಾಗಲೂ ಸಾಧ್ಯವುದೆ. ಇದು  ಭಾರತ ದೇಶಕ್ಕೆಒಂದು ಹೆಮ್ಮೆ, ಬೇರೆ ದೇಶದವರು ಬಂದು ಯಶಸ್ಸಾಗದೆ ಈಗ ಭಾರತದ ಪರಿಸರ ಪ್ರೇಮಿಯೊಬ್ಬ ಕಾಡು ಬೆಳೆಸಿ ಯಶಸ್ಸು ತಂದುಕೊಟ್ಟರೆ ಅದೇ ದೊಡ್ಡ ಯಶಸ್ಸು, ಅದು ಭಾರತದ ಹೆಮ್ಮೆ ಎಂದು ಹೇಳುವ ಡಾ. ಆರ್‌ ಕೆ ನಾಯರ್‌ , ಭಾರತದ ಮಾದರಿಯಲ್ಲಿಯೇ ದುಬೈನಲ್ಲೂ ಸಾವಯವ ಮಾದರಿಯನ್ನೇ ಬಳಸಿ ಗಿಡ ಬೆಳೆಸಲಾಗುತ್ತದೆ. ಭಾರತದಿಂದ ಗಿಡಗಳು, ಗೋಮೂತ್ರ, ಸೆಗಣಿ ಸಹಿತ ಸಾವಯವ ಉತ್ಪನ್ನಗಳನ್ನು ರವಾನೆ ಮಾಡಲಾಗುವುದು ಎಂದು ಹೇಳುತ್ತಾರೆ ಆರ್‌ ಕೆ ನಾಯರ್, ದುಬೈ ಮಣ್ಣಿನ ಗುಣಮಟ್ಟಗಳನ್ನು ಗಮನಿಸಿಕೊಂಡು ಬದಲಾವಣೆ ಮಾಡಬೇಕಾಗಿಯೂ ಬರಬಹುದು. ಆದರೆ ನಿಶ್ಚಿತವಾಗಿಯೂ ಅರಣ್ಯ ಬೆಳೆಸಬಹುದು ಎಂದು ವಿಶ್ವಾಸದಿಂದ ಹೇಳುತ್ತಾರೆ ಆರ್‌ ಕೆ ನಾಯರ್‌.

ಆರಂಭದಲ್ಲಿ ಗುಜರಾತ್‌ನಲ್ಲಿ 1100 ಹೆಕ್ಟೇರ್‌ ಜಮೀನಿನಲ್ಲಿ ಕಾಡು ಬೆಳೆಸಲು ಗುರಿ ಇದೆ. ಆರಂಭದಲ್ಲಿ 500-600 ಎಕ್ರೆ ಪೈಲಟ್‌ ಯೋಜನೆಯಾಗಿ ಮೊದಲ ಮಾತುಕತೆ ನಡೆಯಲಿದೆ.  ಅರಬ್‌ ದೇಶದಲ್ಲಿ ಅರಣ್ಯ ಬೆಳೆಸುವುದು ಎಂದರೆ ಅಚ್ಚರಿಯೇ ಆಗಿದೆ. ಅಲ್ಲಿ ಗಿಡ ಬೆಳೆಸುವು ಸವಾಲು, ಇಲ್ಲೂ ಸವಾಲು ಇದೆ. ಆದರೆ ಈ ಸವಾಲುಗಳನ್ನು ನಿಶ್ಚಿತವಾಗಿಯೂ ತಲಪಿಸಲು ಸಾಧ್ಯವಿದೆ ಎಂದು ಆರ್‌ ಕೆ ನಾಯರ್‌ ಹೇಳುತ್ತಾರೆ.

ಯಾರು ಈ ಸಾಧಕ ಡಾ ಆರ್ ಕೆ ನಾಯರ್..? ಪೆರಿಯ ಕುಂಜಂಬು ನಾಯರ್ ಮತ್ತು ಕಮಲಾಕ್ಷಿ ದಂಪತಿಯ ಪುತ್ರ ಡಾ ಆರ್ ಕೆ ನಾಯರ್ಆ. ರ್ ಕೆ ನಾಯರ್ ನಾಲ್ಕು ವರ್ಷದವನಿದ್ದಾಗ ಕುಟುಂಬ ಕರ್ನಾಟಕದ ಸುಳ್ಯಕ್ಕೆ ಸ್ಥಳಾಂತರಗೊಂಡಿತು. ಸುಳ್ಯದ ಮನೆಯೊಂದರಲ್ಲಿ ರಬ್ಬರ್‌ ಕೆಲಸಕ್ಕೆಂದು ಬಂದ ಕುಟುಂಬದ ಹೀರೋ ಇಂದು ದೇಶ ಮಾತ್ರವಲ್ಲ ವಿದೇಶದಲ್ಲೂ ಹೆಸರುವಾಸಿಯಾಗಿದ್ದಾರೆ. ಸುಳ್ಯದಲ್ಲೇ ಬಹುಪಾಲು ಬೆಳೆದಿರುವ ಆರ್‌ ಕೆ ನಾಯರ್‌ ಅವರು ಭಾರತದಲ್ಲಿ ಏಳು ರಾಜ್ಯಗಲ್ಲಿ 40 ಕಾಡುಗಳನ್ನು ಸೃಷ್ಟಿಸಿದ್ದಕ್ಕಾಗಿ  ಗ್ಲೋರಿ ಆಫ್ ಇಂಡಿಯಾ ಪ್ರಶಸ್ತಿ ಸ್ವೀಕರಿಸಿದ್ದಾರೆ.  ಮೂರು ಗಾರ್ಮೆಂಟ್ ಕಂಪನಿಗಳನ್ನು ನಡೆಸುತ್ತಿರುವ ಉದ್ಯಮಿ,  ಗುಜರಾತ್‌ನಲ್ಲಿ ಮನೆ ಇದೆ.  ಹುಟ್ಟಿದ ಊರು ಕೇರಳ, ಬೆಳೆದ ಊರು ಸುಳ್ಯ.

ರಾಧಾಕೃಷ್ಣನ್ ನಾಯರ್  ಅವರು ಪಿಯುಸಿವರೆಗೆ ಓದಿದರು. ನಂತರ 70 ರ ದಶಕದಲ್ಲಿಉದ್ಯೋಗವನ್ನು ಹುಡುಕಿಕೊಂಡು ಮುಂಬೈಗೆ ತೆರಳಿದರು. ಮೆಡಿಕಲ್‌ ಸ್ಟೋರ್‌ನಲ್ಲಿ ಸೇಲ್ಸ್‌ಮ್ಯಾನ್‌,  ಹೋಟೆಲ್‌ ಮತ್ತು ನಂತರ ಗಾರ್ಮೆಂಟ್‌ ಶಾಪ್‌ನಲ್ಲಿ ಸೂಪರ್‌ವೈಸರ್‌ ಆಗಿ ಕೆಲಸ ಮಾಡುತ್ತಿದ್ದರು. ಫ್ಯಾಕ್ಟರಿ ಮ್ಯಾನೇಜರ್ ಆಗಿ ಬಡ್ತಿ ಹೊಂದಿದರು. ನಂತರ ಅವರು ಗುಜರಾತ್‌ಗೆ ತೆರಳಿದರು.ಅಲ್ಲಿಂದಲೇ  ಸಾಮಾಜಿಕವಾಗಿ ಸಕ್ರಿಯರಾಗಿ ಕೆಲಸ ಮಾಡಲು ಆರಂಭಿಸಿದರು. ಮೂರು ಕಾರ್ಖಾನೆಗಳಲ್ಲಿ ಸುಮಾರು 450 ಉದ್ಯೋಗಿಗಳು ಇದ್ದಾರೆ.

ಗುಜರಾತಿನಲ್ಲಿ ರಸ್ತೆ ಯೋಜನೆಯೊಂದರ ಸಂದರ್ಭದಲ್ಲಿ 175 ಮರಗಳನ್ನು ಕಡಿಯುತ್ತಿರುವುದನ್ನು ಮತ್ತು ಪುಟ್ಟ ಮರಿ ಹಕ್ಕಿಗಳು ನೆಲಕ್ಕೆ ಬಿದ್ದ ಹಕ್ಕಿ ಗೂಡನ್ನು ನೋಡಿದಾಗ ಆರ್‌ಕೆ ನಾಯರ್‌ಗೆ ಮರಗಳ ಮೇಲಿನ ಪ್ರೀತಿ ಪ್ರಾರಂಭವಾಗಿತ್ತು.ಅಂದಿನಿಂದ ಪರಿಸರದ ಕಡೆಗೆ ಆಸಕ್ತರಾಗಿ ಅಕಿರಾ ಮಿಯಾವಾಕಿಯ ಜಪಾನೀ ವಿಧಾನವನ್ನು ಬಳಸಿ  ಭೂಮಿಯನ್ನು ಖರೀದಿಸಿ  1500 ಮರಗಳನ್ನು ಬೆಳೆಸಿದರು. ಅಂದಿನಿಂದ ಪರಿಸರದ ಯಾತ್ರೆ ಆರಂಭವಾಯಿತು.ಇಂದು ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಹೆಸರುವಾಸಿಯಾಗಿದ್ದಾರೆ ಡಾ.ಆರ್‌ ಕೆ ನಾಯರ್.‌ ಇವರು ಸುಳ್ಯದಲ್ಲಿ ಬೆಳೆದವರು, ಕರ್ನಾಟಕದ ಹೆಮ್ಮೆ.

Green Horo from India RK Nair will go to Dubai to plant more than 500 acres of land.

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಕೃಷಿ ಸಖಿಯರ ಪ್ರಥಮ ಪ್ರಗತಿ ಪರಿಶೀಲನಾ ಸಭೆ | ವಿವಿಧ ತರಕಾರಿ ಬೀಜಗಳ ವಿತರಣೆ | ತರಕಾರಿ ಬೆಳೆಸುವ ವಿಧಾನಗಳ ಬಗ್ಗೆ ಮಾಹಿತಿ |

ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ…

6 hours ago

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಎರಡು ದಿನ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ವಿವಿಧೆಡೆ ಇಂದು ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ರಾಜಧಾನಿ ಬೆಂಗಳೂರಿನಲ್ಲಿ ಮಳೆ…

10 hours ago

ಹೆಚ್ಚಿದ ತಾಪಮಾನ | ರಾಜ್ಯದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಯ ಕೆಲಸದ ಅವಧಿ ಬದಲಾವಣೆ ಆದೇಶ

ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚಿದ ತಾಪಮಾನ ಹಿನ್ನೆಲೆಯಲ್ಲಿ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ…

10 hours ago

ಹವಾಮಾನ ವರದಿ | 03-04-2025 | ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ | ಎ.4 ರಿಂದ ಮಳೆ ಪ್ರಮಾಣ ಕಡಿಮೆ

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.ಎಪ್ರಿಲ್ 4ರಿಂದ ವ್ಯಾಪ್ತಿ ಹಾಗೂ ಪ್ರಮಾಣ…

12 hours ago

ಪುಟ್ಟ ಕಿಂಡಿಯಿಂದ ದೊಡ್ಡ ಕಿಟಕಿಯತ್ತ

ಮಹಿಳೆಯ ಸುರಕ್ಷಾ ವಲಯವೆಂದರೆ ಅದು ಅಡುಗೆ ಕೋಣೆ. ಈ ಅಡುಗೆ ಕೋಣೆಯೇ ಎಲ್ಲವೂ.…

22 hours ago

“ಅಮ್ಮ” ಒಳಗೇನು ಮಾಡುತ್ತಿದ್ದಾರೆ…? ನೋಡಿದ್ದೀರಾ..?

ಮನೆಯ ಒಡತಿ ಎನ್ನುವ "ಅಮ್ಮ" ದಿನವೂ ಏನು ಮಾಡುತ್ತಾರೆ..? ಅವಳ ಪಾತ್ರ ಏನು…

22 hours ago