ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್ ಟಿ ದರವನ್ನು ಶೇಕಡ 12ರಿಂದ 5ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಇದರಿಂದ ಕ್ಯಾನ್ಸರ್ ಔಷಧಿಗಳ ಬೆಲೆ ಇನ್ನಷ್ಟು ಅಗ್ಗವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಅವರು ದೆಹಲಿಯಲ್ಲಿಂದು 54ನೇ ಸರಕು ಮತ್ತು ಸೇವಾ ತೆರಿಗೆ – ಜಿಎಸ್ಟಿ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸ ಮಾತನಾಡಿದರು. ಹಲವು ಲೋಹದ ಅನುಪಯುಕ್ತ ವಸ್ತುಗಳ ಜಿಎಸ್ ಟಿ ದರವನ್ನು 18 ರಿಂದ 12ಕ್ಕೆ ಇಳಿಸಲಾಗಿದೆ ಎಂದರು. ವೈದ್ಯಕೀಯ ಆರೋಗ್ಯ ವಿಮೆ ಮೇಲಿನ ಜಿಎಸ್ ಟಿ ಕಡಿತದ ಕುರಿತು ಸಚಿವರ ತಂಡ ರಚನೆ ಮಾಡಲು ಉದ್ದೇಶಿಸಲಾಗಿದೆ. ಇದೇ ವೇಳೆ ಪರಿಹಾರ ಸೆಸ್ ನೀಡುವ ಸಂಬಂಧ ಮತ್ತೊಂದು ಸಚಿವರ ತಂಡ ರಚಿಸಲು ಮಂಡಳಿ ಸಮ್ಮತಿ ನೀಡಿದೆ. ಈ ತಂಡಗಳಿಗೆ ಅಕ್ಟೋಬರ್ ಅಂತ್ಯದೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಎರಡು ಸಚಿವರ ಗುಂಪಿನ ವರದಿಯನ್ನು ನವೆಂಬರ್ ನಲ್ಲಿ ನಡೆಯಲಿರುವ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಜಿಎಸ್ ಟಿ ದರ ತರ್ಕಬದ್ಧಗೊಳಿಸುವುದು ಹಾಗೂ ರಿಯಲ್ ಎಸ್ಟೇಟ್ ಕುರಿತಂತೆ ರಚಿಸಲಾಗಿದ್ದ ಸಚಿವರ ಗುಂಪು ತನ್ನ ಎರಡು ವರದಿಯನ್ನು ಸಲ್ಲಿಸಿದೆ. ಆನ್ ಲೈನ್ ಗೇಮಿಂಗ್, ಕ್ಯಾಸಿನೊಗಳ ಸ್ಥಿತಿಗತಿಗಳ ಕುರಿತು ಮಂಡಳಿ ಸಭೆಯಲ್ಲಿ ಪ್ರಸ್ತುತ ಪಡಿಸಲಾಗಿದೆ. ಆನ್ ಲೈನ್ ಗೇಮಿಂಗ್ ನಿಂದ ಬರುವ ಆದಾಯವು ಶೇಕಡ 412ರಷ್ಟು ಹೆಚ್ಚಾಗಿದೆ. ಕಳೆದ 6 ತಿಂಗಳಲ್ಲಿ 6 ಸಾವಿರದ 909 ಕೋಟಿ ರೂಪಾಯಿ ಇದರಿಂದ ಸಂಗ್ರಹವಾಗಿದೆ ಎಂದು ಹೇಳಿದರು. ಪರಿಹಾರ ಸೆಸ್ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದ್ದು, 2026ರ ಮಾರ್ಚ್ ವರೆಗೆ ಪರಿಹಾರ ಸೆಸ್ ಸಂಗ್ರಹಿಸಬಹುದಾಗಿದೆ. ಪಡೆದ ಸಾಲವನ್ನು ಮರು ಪಾವತಿಸಲು ಅದರ ಮೇಲಿನ ಬಡ್ಡಿಯನ್ನು 2026ರ ಜನವರಿ ಒಳಗೆ ಪಾವತಿಸಲು ಅನುಕೂಲವಾಗುವಂತೆ ಪರಿಹಾರ ಸೆಸ್ ಸಂಗ್ರಹಿಸಲಾಗುತ್ತಿದೆ ಎಂದರು.
2025ರ ಮಾರ್ಚ್ ವೇಳೆಗೆ 8 ಲಕ್ಷ 66 ಸಾವಿರದ 706 ಕೋಟಿ ರೂಪಾಯಿ ಪರಿಹಾರದ ಸೆಸ್ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ತಿಂಗಳ ಸೆಪ್ಟೆಂಬರ್ 5 ರವರೆಗೆ 6 ಲಕ್ಷ 64 ಸಾವಿರದ 203 ಕೋಟಿ ರೂಪಾಯಿ ಪರಿಹಾರವನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ ಎಂದು ತಿಳಿಸಿದರು. ಸಮಗ್ರ ಸರಕು ಮತ್ತು ಸೇವಾ ತೆರಿಗೆ ವಿಸ್ತರಣೆ ಸೇರಿದಂತೆ ಜಿಎಸ್ ಟಿ ಮಂಡಳಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿತು ಎಂದರು.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…