ಕ್ಯಾನ್ಸರ್ ಔಷಧಿಗಳ ಜಿಎಸ್ ಟಿ ದರ ಶೇ. 5ಕ್ಕೆ ಇಳಿಕೆ | ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ |

September 10, 2024
8:21 PM

ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್ ಟಿ ದರವನ್ನು ಶೇಕಡ 12ರಿಂದ 5ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಇದರಿಂದ ಕ್ಯಾನ್ಸರ್ ಔಷಧಿಗಳ ಬೆಲೆ ಇನ್ನಷ್ಟು ಅಗ್ಗವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಅವರು ದೆಹಲಿಯಲ್ಲಿಂದು 54ನೇ ಸರಕು ಮತ್ತು ಸೇವಾ ತೆರಿಗೆ – ಜಿಎಸ್ಟಿ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸ ಮಾತನಾಡಿದರು. ಹಲವು ಲೋಹದ ಅನುಪಯುಕ್ತ ವಸ್ತುಗಳ ಜಿಎಸ್ ಟಿ ದರವನ್ನು 18 ರಿಂದ 12ಕ್ಕೆ ಇಳಿಸಲಾಗಿದೆ ಎಂದರು. ವೈದ್ಯಕೀಯ ಆರೋಗ್ಯ ವಿಮೆ ಮೇಲಿನ ಜಿಎಸ್ ಟಿ ಕಡಿತದ ಕುರಿತು ಸಚಿವರ ತಂಡ ರಚನೆ ಮಾಡಲು ಉದ್ದೇಶಿಸಲಾಗಿದೆ. ಇದೇ ವೇಳೆ ಪರಿಹಾರ ಸೆಸ್ ನೀಡುವ ಸಂಬಂಧ ಮತ್ತೊಂದು ಸಚಿವರ ತಂಡ ರಚಿಸಲು ಮಂಡಳಿ ಸಮ್ಮತಿ ನೀಡಿದೆ. ಈ ತಂಡಗಳಿಗೆ ಅಕ್ಟೋಬರ್ ಅಂತ್ಯದೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಎರಡು ಸಚಿವರ ಗುಂಪಿನ ವರದಿಯನ್ನು ನವೆಂಬರ್ ನಲ್ಲಿ ನಡೆಯಲಿರುವ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಜಿಎಸ್ ಟಿ ದರ ತರ್ಕಬದ್ಧಗೊಳಿಸುವುದು ಹಾಗೂ ರಿಯಲ್ ಎಸ್ಟೇಟ್ ಕುರಿತಂತೆ ರಚಿಸಲಾಗಿದ್ದ ಸಚಿವರ ಗುಂಪು ತನ್ನ ಎರಡು ವರದಿಯನ್ನು ಸಲ್ಲಿಸಿದೆ. ಆನ್ ಲೈನ್ ಗೇಮಿಂಗ್, ಕ್ಯಾಸಿನೊಗಳ ಸ್ಥಿತಿಗತಿಗಳ ಕುರಿತು ಮಂಡಳಿ ಸಭೆಯಲ್ಲಿ ಪ್ರಸ್ತುತ ಪಡಿಸಲಾಗಿದೆ. ಆನ್ ಲೈನ್ ಗೇಮಿಂಗ್ ನಿಂದ ಬರುವ ಆದಾಯವು ಶೇಕಡ 412ರಷ್ಟು ಹೆಚ್ಚಾಗಿದೆ. ಕಳೆದ 6 ತಿಂಗಳಲ್ಲಿ 6 ಸಾವಿರದ 909 ಕೋಟಿ ರೂಪಾಯಿ ಇದರಿಂದ ಸಂಗ್ರಹವಾಗಿದೆ ಎಂದು ಹೇಳಿದರು. ಪರಿಹಾರ ಸೆಸ್ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದ್ದು, 2026ರ ಮಾರ್ಚ್ ವರೆಗೆ ಪರಿಹಾರ ಸೆಸ್ ಸಂಗ್ರಹಿಸಬಹುದಾಗಿದೆ. ಪಡೆದ ಸಾಲವನ್ನು ಮರು ಪಾವತಿಸಲು ಅದರ ಮೇಲಿನ ಬಡ್ಡಿಯನ್ನು 2026ರ ಜನವರಿ ಒಳಗೆ ಪಾವತಿಸಲು ಅನುಕೂಲವಾಗುವಂತೆ ಪರಿಹಾರ ಸೆಸ್ ಸಂಗ್ರಹಿಸಲಾಗುತ್ತಿದೆ ಎಂದರು.

2025ರ ಮಾರ್ಚ್ ವೇಳೆಗೆ 8 ಲಕ್ಷ 66 ಸಾವಿರದ 706 ಕೋಟಿ ರೂಪಾಯಿ ಪರಿಹಾರದ ಸೆಸ್ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ತಿಂಗಳ ಸೆಪ್ಟೆಂಬರ್ 5 ರವರೆಗೆ 6 ಲಕ್ಷ 64 ಸಾವಿರದ 203 ಕೋಟಿ ರೂಪಾಯಿ ಪರಿಹಾರವನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ ಎಂದು ತಿಳಿಸಿದರು. ಸಮಗ್ರ ಸರಕು ಮತ್ತು ಸೇವಾ ತೆರಿಗೆ ವಿಸ್ತರಣೆ ಸೇರಿದಂತೆ ಜಿಎಸ್ ಟಿ ಮಂಡಳಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿತು ಎಂದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ
September 13, 2026
9:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?
September 13, 2026
12:16 PM
by: ಸಾಯಿಶೇಖರ್ ಕರಿಕಳ
ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು
September 13, 2026
8:13 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror