ಭಾರತದಲ್ಲಿ ಈಗ ತೆಂಗಿನಕಾಯಿ ರಾಜಧಾನಿ ಬದಲಾಗುತ್ತಿದೆ. ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಹೆಚ್ಚಿನ ಸಂಖ್ಯೆಯ ತೆಂಗಿನಕಾಯಿಯನ್ನು ಪೂರೈಸುವಲ್ಲಿ ಗುಜರಾತ್ ಮುಂದಾಗಿದೆ. ತೆಂಗಿನಕಾಯಿಗಳಿಂದ ತುಂಬಿದ ಟೆಂಪೋಗಳು ಹೆಚ್ಚಾಗಿ ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಯುಪಿ ಗೆ ಹೋಗುವುದನ್ನು ಕಾಣಬಹುದು. ಸೋಮನಾಥ್, ಜುನಾಗಢ್, ವಲ್ಸಾದ್ ಮತ್ತು ಭಾವನಗರದ ಮೂಲಕ ಹಾದುಹೋಗುವ NH-51 ರ ಪ್ರದೇಶವನ್ನು ಈಗ ತೆಂಗಿನ ಹೆದ್ದಾರಿ ಎಂದು ಹೇಳಲಾಗುತ್ತಿದೆ.
ಕಳೆದ ಐದು ವರ್ಷಗಳಲ್ಲಿ ಗುಜರಾತ್ ನಲ್ಲಿ ಹೆಚ್ಚು ಹೆಕ್ಟೇರ್ ಪ್ರದೇಶಗಳಲ್ಲಿ ತೆಂಗು ಬೆಳೆ ಆರಂಭವಾಗಿದೆ. ಸ್ವಲ್ಪ ಸಿಹಿಯಾಗಿರುವ ತೆಂಗಿನಕಾಯಿ ಈಗ ತಮ್ಮ ಕರಾವಳಿ ಪ್ರದೇಶದ ಪ್ರಮುಖ ಬೆಳೆ ಎಂದು ರೈತರು ಹೇಳುತ್ತಾರೆ. ಈಗ ತೆಂಗು ಆದಾಯದ ಬೆಳೆಯಾಗಿದ್ದು, ರೈತರಿಗೆ ಲಾಭವೂ ಉತ್ತಮವಾಗಿದೆ.
ಗುಜರಾತ್ ನಲ್ಲಿ ತೆಂಗು ದಿನಾಚರಣೆ: ಸೆಪ್ಟೆಂಬರ್ 2ರಂದು ವಿಶ್ವ ತೆಂಗು ದಿನವಾಗಿ ಗುಜರಾತ್ ನಲ್ಲಿ ಸಂಭ್ರಮದ ದಿನವೂ ಆಗುತ್ತದೆ. ಈ ವರ್ಷ, ರಾಜ್ಯ ಕೃಷಿ ಸಚಿವ ರಾಘವ್ ಜಿ ಪಟೇಲ್ 2025ರಿಂದ ಗುಜರಾತ್ ನಲ್ಲಿ ತೆಂಗು ಕೃಷಿಯ ಪ್ರದೇಶವು ಸಮಾರು 26% ರಷ್ಟು ಹೆಚ್ಚಾಗಿದೆ ಎಂದು ಹೇಳಿದರು. ಪ್ರಸ್ತುತ ಗುಜರಾತ್ ಪ್ರತಿ ವರ್ಷ 260.09 ಮಿಲಿಯನ್ ತೆಂಗಿನಕಾಯಿಗಳನ್ನು ಉತ್ಪಾದಿಸುತ್ತದೆ. ಅವುಗಳಲ್ಲಿ ಇಪ್ಪತ್ತು ಪ್ರತಿಶತವನ್ನು ಕೊಯ್ದು ಮಾರಾಟ ಮಾಡಲಾಗುತ್ತದೆ. ಸುಮಾರು 40% ತೆಂಗಿನಕಾಯಿಗಳು ಉತ್ತರ ಭಾರತದ ಪ್ರದೇಶಗಳಲ್ಲಿ ಮಾರಾಟವಾಗುತ್ತವೆ. ಸಾರಿಗೆ ವೆಚ್ಚ ಅಗ್ಗವಾಗಿರುವುದರಿಂದ ಉತ್ತರ ಭಾರತದ ಖರೀದಿದಾರರು ಗುಜರಾತ್ ನಿಂದ ತೆಂಗಿನಕಾಯಿಯನ್ನು ಬಯಸುತ್ತಾರೆ.
ಇದು ಹೀಗೆ ಮುಂದುವರಿದರೆ, ಗುಜರಾತ್ ತೆಂಗಿನಕಾಯಿ ಉತ್ಪಾದನೆಯಲ್ಲಿ ದಕ್ಷಿಣ ರಾಜ್ಯಗಳಿಗೆ ಪ್ರತಿಸ್ಪರ್ಧಿಯಾಗಬಹುದು. ಎಳನೀರು ಉತ್ಪಾದಿಸುವ ರಾಜ್ಯಗಳು ಅಷ್ಟಾಗಿ ಇಲ್ಲ, ಮತ್ತು ಗುಜರಾತ್ ಈ ಅವಕಾಶವನ್ನು ಪಡೆದುಕೊಂಡು ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡಿದೆ ಎಂದು ಮಾಹಿತಿ ತಿಳಿಸಿದೆ.
ಕೋವಿಡ್ ಬಂದಾಗ , ದೇಶಾದ್ಯಂತ ಅನೇಕ ವೈದ್ಯರು ರೋಗಿಗಳಿಗೆ ತಂಪು ಪಾನೀಯಗಳ ಬದಲಿಗೆ ತೆಂಗಿನ ನೀರನ್ನು ಕುಡಿಯಲು ಸೂಚಿಸಲು ಪ್ರಾರಂಭಿಸಿದರು. ಈಗ ಆ ಅಭ್ಯಾಸವು ಹಾಗೆಯೇ ಉಳಿಯಿತು. ತೆಂಗಿನ ನೀರು ಅನೇಕರಿಗೆ ನೆಚ್ಚಿನ ಪಾನೀಯವಾಯಿತು ಮತ್ತು ಬೇಡಿಕೆ ಹೆಚ್ಚಾಯಿತು. ಇದರಿಂದ ಕರವಾಳಿಯಲ್ಲಿ ತೆಂಗಿನ ಕೃಷಿಯನ್ನು ಮಾಡಲು ಗುಜರಾತ್‌ನಲ್ಲಿ ಮುಂದಾದರು.
ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ…
ಪ್ರಕೃತಿಯಲ್ಲಿ ಇರುವ ಡಿಎನ್‌ಎ, ಪ್ರೋಟೀನ್‌ಗಳಂತೆ ಪ್ಲಾಸ್ಟಿಕ್‌ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ…
2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು…
ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)…
ಗ್ರಾಮೀಣ ವಿದ್ಯುದ್ದೀಕರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಉಪಯುಕ್ತತೆ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಬಳಸಿದ ರೈತರಿಗೆ…
ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಬಿಟ್ಟರೆ ಅಂದರೆ ನಿಯಂತ್ರಣ ತಪ್ಪಿದರೆ ವಿವಿಧ ಸಮಸ್ಯೆ ಉಂಟಾಗುತ್ತದೆ. ಮನುಷ್ಯನ…