Advertisement
ಹೊಸರುಚಿ-ಅಡುಗೆ

ಹೊಸರುಚಿ | ಗುಜ್ಜೆ ಮಂಚೂರಿ – ಕರಾವಳಿಯ ಸಾಂಪ್ರದಾಯಿಕ ರುಚಿಗೆ ಚೈನೀಸ್ ಟ್ವಿಸ್ಟ್

Share

ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ದೊರೆಯುವ “ಗುಜ್ಜೆ” (ಎಳೆ ಹಲಸು) ಬಳಸಿ ಮಾಡುವ ವಿಶೇಷ ಖಾದ್ಯಗಳಲ್ಲಿ ಗುಜ್ಜೆ ಮಂಚೂರಿ ಒಂದು ವಿಭಿನ್ನ ರುಚಿಯ ಫ್ಯೂಷನ್ ಡಿಶ್ ಆಗಿದೆ. ಸಾಂಪ್ರದಾಯಿಕ ಗುಜ್ಜೆ ರುಚಿಗೆ ಚೈನೀಸ್ ಶೈಲಿಯ ಮಂಚೂರಿ ಸಾಸ್ ಸೇರಿಸಿದಾಗ ಈ ತಿನಿಸು ಹೆಚ್ಚು ರುಚಿಕರವಾಗುತ್ತದೆ. ಮನೆಮದ್ದಿನ ಸರಳ ವಿಧಾನದಲ್ಲಿ ತಯಾರಿಸಬಹುದಾದ ಈ ಖಾದ್ಯ, ಸ್ಟಾರ್ಟರ್ ಆಗಿಯೂ, ಸಂಜೆ ಸ್ನ್ಯಾಕ್ ಆಗಿಯೂ ಬಹಳ ಜನಪ್ರಿಯವಾಗಿದೆ.

ಬೇಕಾಗುವ ಸಾಮಗ್ರಿಗಳು :

ಗುಜ್ಜೆ – 1 (ಕತ್ತರಿಸಿ ಕ್ಲೀನ್ ಮಾಡಿದದ್ದು),
ಉಪ್ಪು – ರುಚಿಗೆ ತಕ್ಕಷ್ಟು,
ನೀರು – ಅಗತ್ಯವಷ್ಟು,

ಕಾರ್ನ್ ಫ್ಲೋರ್ – ½ ಕಪ್,
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1½ ಚಮಚ,
ಕಾಳುಮೆಣಸಿನ ಪುಡಿ – ಸ್ವಲ್ಪ,

ಎಣ್ಣೆ – 3 ಚಮಚ,
ಬಿಳಿ ಎಳ್ಳು – 1 ಚಮಚ,
ಈರುಳ್ಳಿ – 1 (ಚಿಕ್ಕದಾಗಿ ಕತ್ತರಿಸಿದದ್ದು),
ಕರಿಬೇವಿನ ಸೊಪ್ಪು – ಸ್ವಲ್ಪ,
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ½ ಚಮಚ,

ವಿನೆಗರ್ – 1 ಚಮಚ,
ಸೋಯಾ ಸಾಸ್ – 1 ಚಮಚ,
ಚಿಲ್ಲಿ ಸಾಸ್ – 1 ಚಮಚ,
ರೆಡ್ ಚಿಲ್ಲಿ ಸಾಸ್ – 1 ಚಮಚ,
ಟೊಮೆಟೊ ಸಾಸ್ – ¼ ಕಪ್,
ಜೇನುತುಪ್ಪ – 1 ಚಮಚ,
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ : ಮೊದಲು ಗುಜ್ಜೆಯನ್ನು ತುಂಡುಗಳಾಗಿ ಕತ್ತರಿಸಿ ಸ್ವಚ್ಛವಾಗಿ ತೊಳೆದು ಕುಕ್ಕರ್‌ನಲ್ಲಿ ಉಪ್ಪು ಮತ್ತು ನೀರಿನೊಂದಿಗೆ ಬೇಯಿಸಬೇಕು. ಬೇಯಿಸಿದ ನಂತರ ಅದನ್ನು ಸೋಸಿ ನೀರನ್ನು ಬೇರ್ಪಡಿಸಿಕೊಳ್ಳಬೇಕು. ನಂತರ ಬೇಯಿಸಿದ ಗುಜ್ಜೆಗೆ ಕಾರ್ನ್ ಫ್ಲೋರ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿದು ತೆಗೆಯಬೇಕು.

ಮುಂದೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಬಿಳಿ ಎಳ್ಳು, ಈರುಳ್ಳಿ ಹಾಗೂ ಕರಿಬೇವಿನ ಸೊಪ್ಪು ಹಾಕಿ ಫ್ರೈ ಮಾಡಬೇಕು. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸ್ವಲ್ಪ ಹೊತ್ತು ಹುರಿಯಬೇಕು. ಇದಕ್ಕೆ ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್, ರೆಡ್ ಚಿಲ್ಲಿ ಸಾಸ್, ಟೊಮೆಟೊ ಸಾಸ್ ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು.

ಈ ಸಾಸ್‌ಗೆ ಫ್ರೈ ಮಾಡಿದ ಗುಜ್ಜೆ ತುಂಡುಗಳನ್ನು ಸೇರಿಸಿ ಚೆನ್ನಾಗಿ ಕಲಸಿ, ಕೊತ್ತಂಬರಿ ಸೊಪ್ಪು ಹಚ್ಚಿ ಸ್ಟವ್ ಆಫ್ ಮಾಡಬೇಕು. ಹೀಗೆ ಸಿದ್ಧವಾದ ಗುಜ್ಜೆ ಮಂಚೂರಿ ಬಿಸಿ ಬಿಸಿ ಸರ್ವ್ ಮಾಡಿದರೆ ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ.

ಸಾಂಪ್ರದಾಯಿಕ ಪದಾರ್ಥವನ್ನು ಹೊಸ ಶೈಲಿಯಲ್ಲಿ ತಯಾರಿಸುವುದು ಇಂದಿನ ಕಾಲದ ಟ್ರೆಂಡ್ ಆಗಿದ್ದು, ಗುಜ್ಜೆ ಮಂಚೂರಿ ಅದಕ್ಕೆ ಉತ್ತಮ ಉದಾಹರಣೆ. ಮನೆಮಂದಿಗೆ ಹೊಸ ರುಚಿ ಪರಿಚಯಿಸಲು ಮತ್ತು ಅತಿಥಿಗಳಿಗೆ ವಿಭಿನ್ನ ಖಾದ್ಯ ನೀಡಲು ಇದು ಸೂಕ್ತ ಆಯ್ಕೆಯಾಗಿದೆ. ಕರಾವಳಿಯ ಸುವಾಸನೆ ಮತ್ತು ಚೈನೀಸ್ ಟಚ್ ಒಟ್ಟಿಗೆ ಸೇರಿದ ಈ ತಿನಿಸು ಎಲ್ಲರಿಗೂ ಖಂಡಿತ ಇಷ್ಟವಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Gujje Manchurian is a fusion dish made using breadfruit combined with Indo-Chinese flavors. This easy homemade recipe blends traditional coastal ingredients with Manchurian sauces, making it a perfect snack or starter.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಭಯದಲ್ಲಿ ಕೇರಳದ ರಬ್ಬರ್ ರೈತರು – ತೋಟಗಾರಿಕೆಗೆ ಮುಂದೆ ಏನು?

ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…

6 hours ago

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…

14 hours ago

ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?

ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್‌…

15 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…

15 hours ago

ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…

1 day ago

ಹವಾಮಾನ ವರದಿ | 29-09-2026 | ಅ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…

1 day ago