ಹಾಡುವ ಹಕ್ಕಿ ಹಾಡುತೈತೆ ಮನುಸಾ ಅಂತ ನಟ ನಿರ್ದೇಶಕ(director) ಸಂದೇಶ್ ಶೆಟ್ಟಿ ಆಜ್ರಿ(Sandesh sherry Ajri) ಮತ್ತೆ ಸ್ಯಾಂಡಲ್ ವುಡ್(Sandalwood) ನಲ್ಲಿ ತಮ್ಮ ಹೊಸ ಚಿತ್ರ(movie) ಮೂಲಕ ಹೆಜ್ಜೆ ಇಟ್ಟಿದ್ದಾರೆ. ವಿಭಿನ್ನ ಮತ್ತು ವಿಶಿಷ್ಟವಾಗಿರುವ ಕಥಾಹಂದರದ ಮೂಲಕ ಚಿತ್ರರಸಿಕರನ್ನು ಮನರಂಜಿಸುವ ನಿರ್ದೇಶಕ ಸಂದೇಶ ಶೆಟ್ಟಿ ಈ ಬಾರಿ ಕಲಾತ್ಮಕ ಚಿತ್ರದ(Art movie) ಕಡೆ ಮನಸ್ಸು ಮಾಡಿದ್ದಾರೆ. ಅಳಿಸಿ ಹೋಗುತ್ತಿರುವ ಒಂದು ಸಮುದಾಯದ ಸಂಸ್ಕೃತಿಯನ್ನು(culture) ಉಳಿಸುವ ಕಥಾಹಂದರದ ಮೂಲಕ ನಿರ್ದೇಶಕ ಸಂದೇಶ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ…
ಹೌದು ಕರಾವಳಿ ಎಂದಾಕ್ಷಣ ಅಲ್ಲಿ ಪ್ರತಿಭೆಗಳ ಸಾಗರವೇ ಇದೆ ಎಂದರೆ ಅತೀಶಯೋಕ್ತಿ ಆಗಲಾರದು. ಇಂದು ಸಿನೆಮಾರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಮತ್ತು ಮಾಡುತ್ತಿರುವ ಬಹುತೇಕ ಪ್ರತಿಭೆಗಳು ಕರಾವಳಿಯಿಂದಲೇ ಬಂದಿದ್ದು ಎಂದರೆ ತಪ್ಪಾಗಲಾರದು. ಅಂದಿನ ಹಿಂದಿ ಚಿತ್ರನಟ ಗುರುದತ್ ಇಂದ ಹಿಡಿದು ಇಂದಿನ ರಿಷಬ್ ಶೆಟ್ಟಿ ವರೆಗೂ ಕರಾವಳಿಯಿಂದ ಬಂದು ತಮ್ಮ ವಿಭಿನ್ನ ಶೈಲಿಯ ಮೂಲಕ ಸಿನಿ ರಸಿಕರನ್ನ ರಂಜಿಸಿದವರೇ. ಈ ಸಾಲಿಗೆ ಸೇರ್ಪಡೆಯಾಗುವ ಮತ್ತೊರ್ವ ಪ್ರತಿಭೆ ಎಂದರೆ ಅದು ನಟ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ. 2018ರಲ್ಲಿ ಕತ್ತಲೆ ಕೋಣೆ ಹೆಸರಿನ ಸೈಕಾಲಜಿಕಲ್ ಥ್ರಿಲ್ಲರ್ ಮೂವಿಯನ್ನು ತೆರೆಯ ಮೇಲೆ ತಂದಿದ್ದ ಸಂದೇಶ ಶೆಟ್ಟಿ, ಇತ್ತೀಚಿಗೆ ಇನಾಮ್ದಾರ್ ಎನ್ನುವ ಎರಡು ಜನಾಂಗದ ಕಥೆಯನ್ನ ತೆರೆಯ ಮೇಲೆ ತಂದಿದ್ದರು. ಎರಡು ಚಿತ್ರಗಳನ್ನು ಕೂಡ ಕಮರ್ಷಿಯಲ್ ಉದ್ದೇಶದಿಂದ ತೆರೆಯ ಮೇಲೆ ತಂದಿದ್ದ ನಿರ್ದೇಶಕರಾಗಿ ಸಂದೇಶ್ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಈ ಬಾರಿ ಕಮರ್ಷಿಯಲ್ ಚಿತ್ರದಿಂದ ಹೊರಬಂದು ಒಂದು ಕಲಾತ್ಮಕ ಚಿತ್ರ ಗುಂಮ್ಟಿ ಮೂಲಕ ಮತ್ತೆ ವಿಭಿನ್ನ ಶೈಲಿಯ ಕಥೆಯನ್ನು ಹೇಳಲು ಹೊರಟಿದ್ದಾರೆ. ಇಂದು ಗುಂಮ್ಟಿ ಚಿತ್ರದ ಮೆಹಬೂಬ್ ಸಾಬ್ ಹಾಡುವ ಹಕ್ಕಿ ಹಾಡುತೈತಿ ಮನುಸ ಬಿಡುಗಡೆ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ನಡೆಯಿತು. ಈ ಸಂದರ್ಭ ನಟ ನಿರ್ದೇಶಕ ಸಂದೇಶಕ್ಕೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಪೋರ್ಚುಗೀಸರ ದಬ್ಬಾಳಿಕೆಯ ಹಿನ್ನೆಲೆ, ಗೋವಾ ರಾಜ್ಯದಿಂದ ಆಶ್ರಯವನ್ನು ಅರಸಿ ಬಂದ ಒಂದು ಸಮುದಾಯದ ಕಥೆಯನ್ನು ಈ ಬಾರಿ ಸಂದೇಶ್ ತೆರೆಯ ಮೇಲೆ ತಂದಿದ್ದಾರೆ. ರಾಜ್ಯ ಬಿಟ್ಟು ರಾಜ್ಯಕ್ಕೆ ಬಂದರು, ತಮ್ಮ ಸಂಸ್ಕೃತಿ ಸಂಪ್ರದಾಯವನ್ನು ಮರೆಯದ ಆ ಸಮುದಾಯದ ಆಚರಣೆ ಪದ್ಧತಿ ಉಳಿಸುವ ನಿಟ್ಟಿನಲ್ಲಿ ನಾಯಕ ಹೋರಾಡುವ ಕಥೆ ಈ ಚಿತ್ರದ್ದು. ಕಲಾತ್ಮಕ ಚಿತ್ರ ಎಂದ ಕ್ಷಣ ಪ್ರತಿ ದೃಶ್ಯದಿಂದ ದೃಶ್ಯಕ್ಕೂ ವಿಭಿನ್ನತೆ ಬೇಕು, ಇನ್ನು ಸಂಗೀತವಂತು ಪ್ರೇಕ್ಷಕರನ್ನ ಹಿಡಿದು ಕುಳಿತುಕೊಳ್ಳುವಂತೆ ಮಾಡುವಂತಿರಬೇಕು. ಈ ನಿಟ್ಟಿನಲ್ಲಿ ಸಂದೇಶ್ ತಮ್ಮ ಮೊದಲ ಚಿತ್ರದಿಂದಲೂ ಕೂಡ ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದವರು. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಓರ್ವ ಅಂದ ಕಲಾವಿದ ಮೆಹಬೂಬ್ ಸಾಬ್ ಅವರಿಂದ ಸಿನಿಮಾ ಗೀತೆ ಹಾಡಿಸುವ ಮೂಲಕ ಅವಕಾಶ ನೀಡಿದ್ದ ಸಂದೇಶ್ ಈ ಬಾರಿ ತಮ್ಮ ಮೂರನೇ ಚಿತ್ರಕ್ಕೆ ಮತ್ತೆ ಮೆಹಬೂಬ್ ಸಾಬ್ ಅವರನ್ನು ಕರೆತಂದಿದ್ದಾರೆ. ಚಿತ್ರಕ್ಕೆ ಜ್ಯೋತಿ ಪ್ರೊಡಕ್ಷನ್ ಬಂಡವಾಳ ಹಾಕಿದ್ದು, ಸಂದೇಶ್ ಶೆಟ್ಟಿ ಆಜ್ರಿ ನಾಯಕನಾಗಿ, ವೈಷ್ಣವಿ ನಾಡಿಗ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಹಿರಿಯ ಕಿರಿಯ ಚಲನಚಿತ್ರ ನಟರಿದ್ದು, ಅನಿಶ್ ಡಿಸೋಜ ಕ್ಯಾಮೆರಾ ಹಿಡಿದಿದ್ದಾರೆ, ಮೋಹನ್ ದುಂಡಿ ಸಂಗೀತ ನೀಡಿದ್ದು ತಸ್ಮೈ ಪ್ರೊಡಕ್ಷನ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿದೆ.
ಇನ್ನು ಚಿತ್ರ ಕೆಲವೇ ದಿನಗಳಲ್ಲಿ ಆಯ್ದ ಚಿತ್ರಮಂದಿರಗಳಲ್ಲಿ ತೆರೆಯ ಮೇಲೆ ಬರಲಿದೆ. ಕಮರ್ಷಿಯಲ್ ಚಿತ್ರ ನಿರ್ದೇಶನ ಮಾಡುತ್ತಿದ್ದ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಅವರ ಕಲಾತ್ಮಕತೆಯ ಚಿತ್ರದ ಚಿತ್ರಣ ಗುಂಮ್ಟಿ ಮೂಲಕ ನಿಮ್ಮ ಮುಂದೆ ಬರಲಿದೆ.
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…