ಚುನಾವಣಾ ಕಣ | ಕೃಷಿಕರ ಕೋವಿ ಡಿಪಾಸಿಟ್‌ ವಿಚಾರ | ನ್ಯಾಯಾಲಯದ ಮೊರೆ ಹೋದ ಕೃಷಿಕರು | ಬಂದೂಕನ್ನು ಠೇವಣಿ ಇಡುವಂತೆ ಒತ್ತಾಯಿಸದಂತೆ ನಿರ್ದೇಶನ |

April 1, 2024
10:27 PM
ಚುನಾವಣೆಯ ವೇಳೆ ಕೃಷಿಕರು ಕೋವಿ ಡಿಪಾಸಿಟ್‌ ಇರಿಸುವ ಪ್ರಕ್ರಿಯೆಗೆ ತಡೆಯಾಗಬೇಕು ಎಂದು ಕೃಷಿಕರು ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಚುನಾವಣಾ ಸಮಯದಲ್ಲಿ ಕೃಷಿ ರಕ್ಷಣೆಗಾಗಿ ಲೈಸನ್ಸ್‌ ಹೊಂದಿದ ಕೃಷಿಕರ ಬಂದೂಕುಗಳನ್ನು ಠೇವಣಿ ಇಡಬೇಕು ಎನ್ನುವ ಸೂಚನೆಯ ಬಗ್ಗೆ ಈಗಾಗಲೇ ಚರ್ಚೆಯಾಗುತ್ತಿದೆ. ಈ ನಡುವೆ ಕೆಲವು ಕೃಷಿಕರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಬಂದೂಕನ್ನು ಠೇವಣಾತಿ ಇರಿಸಲು ವಿನಾಯಿತಿ ಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ದಾವೆ ಹೂಡಿದ ಕೃಷಿಕರಿಗೆ ಮುಂದಿನ ದಿನಾಂಕದವರೆಗೆ ಬಂದೂಕನ್ನು ಠೇವಣಿ ಇಡುವಂತೆ ಒತ್ತಾಯಿಸದಂತೆ ಇಲಾಖೆಗಳಿಗೆ ನಿರ್ದೇಶಿಸಿದೆ.ಎ.2 ರಂದು ಅರ್ಜಿಯ ವಿಚಾರಣೆ ನಡೆಯಲಿದೆ.

ಚುನಾವಣಾ ಸಮಯದಲ್ಲಿ ಕೃಷಿಕರ ಬಂದೂಕುಗಳನ್ನು ಠೇವಣಿ ಇಡಬೇಕು ಎಂದು ಪ್ರತೀ ಚುನಾವಣೆಯಲ್ಲೂ ಆದೇಶವಾಗುತ್ತದೆ. ಈ ಬಾರಿಯೂ ಈ ಆದೇಶವಾಗಿದೆ. ಕಳೆದ ಚುನಾವಣೆಯಲ್ಲಿ ಹಲವು ಕೃಷಿಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂದರ್ಭ, ಬಂದೂಕು ಠೇವಣಾತಿಗೆ ಕೃಷಿಕರು ಸ್ಕ್ರೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿ ಅಲ್ಲಿಂದ ವಿನಾಯಿತಿ ಪಡೆಯಬೇಕು ಎಂದು ಹೈಕೋರ್ಟ್‌ ಸೂಚನೆ ನೀಡಿತ್ತು. ಈ ಬಾರಿ ಕೃಷಿಕರು ಸ್ಕ್ರೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿದ್ದರೂ ಬಹುಪಾಲು ಎಲ್ಲಾ ಅರ್ಜಿಗಳೂ ತಿರಸ್ಕೃತಗೊಂಡು ಬಂದೂಕು ಠೇವಣಾತಿಗೆ ಸೂಚಿಸಲಾಗಿತ್ತು.

ಹೀಗಾಗಿ ಈ ಬಗ್ಗೆ ಬಂಟ್ವಾಳ ತಾಲೂಕಿನ ಕೃಷಿಕ ಮಾಣಿಮೂಲೆ ಗೋವಿಂದ ಭಟ್‌ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿಯನ್ನು ಪುರಸ್ಕಾರ ಮಾಡಿದ ನ್ಯಾಯಾಲಯವು , ಅರ್ಜಿದಾರರ ಪರ ವಕೀಲರು ಕೃಷಿಕರ ವಿಷಯ ಪ್ರಸ್ತಾಪಿಸಿದ್ದರು. ಸ್ಕ್ರೀನಿಂಗ್ ಕಮಿಟಿಯು ಅಂಗೀಕರಿಸಿದ ಆದೇಶದ ಪ್ರಕಾರ ಅರ್ಜಿದಾರರು ಇನ್ನೂ ಬಂದೂಕನ್ನು ಪೊಲೀಸ್ ಠಾಣೆಗೆ ಜಮಾ ಮಾಡಿಲ್ಲ ಎಂದೂ ಮನವರಿಕೆ ಮಾಡಿದರು. ಈ ಬಗ್ಗೆ ಎ.2 ರಂದು ವಿಚಾರಣೆ ನಡೆಸಲಾಗುತ್ತಿದೆ ಅದುವರೆಗೂ ಅಥವಾ  ಮುಂದಿನ ದಿನಾಂಕದವರೆಗೆ ಬಂದೂಕನ್ನು ಠೇವಣಿ ಇಡುವಂತೆ ಒತ್ತಾಯಿಸದಂತೆ  ನಿರ್ದೇಶನ ನೀಡಿದೆ.

ಈ ನಡುವೆ ಕಳೆದ ಬಾರಿಯ ಚುನಾವಣೆಯ ವೇಳೆ 50 ಕ್ಕೂ ಹೆಚ್ಚು ಕೃಷಿಕರು ಹೈಕೋರ್ಟ್‌ಗೆ ಮನವಿ ಸಲ್ಲಿಸಿ ಕೃಷಿಕರ ಬಂದೂಕು ಠೇವಣಾತಿ ಇರಿಸುವುದಕ್ಕೆ ವಿನಾಯಿತಿ ಬೇಕು ಎಂದು ಮನವಿ ಮಾಡಿದ್ದರು. ಈ ಸಂದರ್ಭ ಬಂದೂಕು ಠೇವಣಾತಿಗೆ ಕೃಷಿಕರು ಸ್ಕ್ರೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿ ಅಲ್ಲಿಂದ ವಿನಾಯಿತಿ ಪಡೆಯಬೇಕು ಎಂದು ಹೈಕೋರ್ಟ್‌ ಸೂಚನೆ ನೀಡಿತ್ತು.  ಇದೇ ಆಧಾರದಲ್ಲಿ ಈ ಬಾರಿ ಸ್ಕ್ರೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸುಳ್ಯ ತಾಲೂಕಿನ ಗುತ್ತಿಗಾರಿನ ಗಂಗಾಧರ ಭಟ್‌ ಪುಚ್ಚಪ್ಪಾಡಿ ಅವರು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಮೈಲ್‌ ಮೂಲಕ ತಿಳಿಸಿದ್ದರು, ಅದರ ಜೊತೆಗೆ ನ್ಯಾಯಾಲಯದ ಆದೇಶವನ್ನೂ ಉಲ್ಲೇಖಿಸಿದ್ದರು. ಈ ಬಗ್ಗೆ ತಕ್ಷಣವೇ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ದ ಕ ಜಿಲ್ಲಾದಿಕಾರಿಯವರಿಗೆ ಸೂಚನೆ ನೀಡಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ
August 11, 2026
7:14 AM
by: ದ ರೂರಲ್ ಮಿರರ್.ಕಾಂ
ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ
August 11, 2026
6:52 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 10.08.2026 | ಕರ್ನಾಟಕದಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆ; ಆಗಸ್ಟ್‌ 12ರಂದು ಕರಾವಳಿಯಲ್ಲಿ ಮಳೆ ಹೆಚ್ಚಳ ಸಾಧ್ಯತೆ
August 10, 2026
3:32 PM
by: ಸಾಯಿಶೇಖರ್ ಕರಿಕಳ
ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ
August 10, 2026
6:20 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror