ಚುನಾವಣಾ ಸಮಯದಲ್ಲಿ ಕೃಷಿ ರಕ್ಷಣೆಗಾಗಿ ಲೈಸನ್ಸ್ ಹೊಂದಿದ ಕೃಷಿಕರ ಬಂದೂಕುಗಳನ್ನು ಠೇವಣಿ ಇಡಬೇಕು ಎನ್ನುವ ಸೂಚನೆಯ ಬಗ್ಗೆ ಈಗಾಗಲೇ ಚರ್ಚೆಯಾಗುತ್ತಿದೆ. ಈ ನಡುವೆ ಕೆಲವು ಕೃಷಿಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬಂದೂಕನ್ನು ಠೇವಣಾತಿ ಇರಿಸಲು ವಿನಾಯಿತಿ ಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದಾವೆ ಹೂಡಿದ ಕೃಷಿಕರಿಗೆ ಮುಂದಿನ ದಿನಾಂಕದವರೆಗೆ ಬಂದೂಕನ್ನು ಠೇವಣಿ ಇಡುವಂತೆ ಒತ್ತಾಯಿಸದಂತೆ ಇಲಾಖೆಗಳಿಗೆ ನಿರ್ದೇಶಿಸಿದೆ.ಎ.2 ರಂದು ಅರ್ಜಿಯ ವಿಚಾರಣೆ ನಡೆಯಲಿದೆ.
ಚುನಾವಣಾ ಸಮಯದಲ್ಲಿ ಕೃಷಿಕರ ಬಂದೂಕುಗಳನ್ನು ಠೇವಣಿ ಇಡಬೇಕು ಎಂದು ಪ್ರತೀ ಚುನಾವಣೆಯಲ್ಲೂ ಆದೇಶವಾಗುತ್ತದೆ. ಈ ಬಾರಿಯೂ ಈ ಆದೇಶವಾಗಿದೆ. ಕಳೆದ ಚುನಾವಣೆಯಲ್ಲಿ ಹಲವು ಕೃಷಿಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂದರ್ಭ, ಬಂದೂಕು ಠೇವಣಾತಿಗೆ ಕೃಷಿಕರು ಸ್ಕ್ರೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿ ಅಲ್ಲಿಂದ ವಿನಾಯಿತಿ ಪಡೆಯಬೇಕು ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ಈ ಬಾರಿ ಕೃಷಿಕರು ಸ್ಕ್ರೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿದ್ದರೂ ಬಹುಪಾಲು ಎಲ್ಲಾ ಅರ್ಜಿಗಳೂ ತಿರಸ್ಕೃತಗೊಂಡು ಬಂದೂಕು ಠೇವಣಾತಿಗೆ ಸೂಚಿಸಲಾಗಿತ್ತು.
ಹೀಗಾಗಿ ಈ ಬಗ್ಗೆ ಬಂಟ್ವಾಳ ತಾಲೂಕಿನ ಕೃಷಿಕ ಮಾಣಿಮೂಲೆ ಗೋವಿಂದ ಭಟ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ಪುರಸ್ಕಾರ ಮಾಡಿದ ನ್ಯಾಯಾಲಯವು , ಅರ್ಜಿದಾರರ ಪರ ವಕೀಲರು ಕೃಷಿಕರ ವಿಷಯ ಪ್ರಸ್ತಾಪಿಸಿದ್ದರು. ಸ್ಕ್ರೀನಿಂಗ್ ಕಮಿಟಿಯು ಅಂಗೀಕರಿಸಿದ ಆದೇಶದ ಪ್ರಕಾರ ಅರ್ಜಿದಾರರು ಇನ್ನೂ ಬಂದೂಕನ್ನು ಪೊಲೀಸ್ ಠಾಣೆಗೆ ಜಮಾ ಮಾಡಿಲ್ಲ ಎಂದೂ ಮನವರಿಕೆ ಮಾಡಿದರು. ಈ ಬಗ್ಗೆ ಎ.2 ರಂದು ವಿಚಾರಣೆ ನಡೆಸಲಾಗುತ್ತಿದೆ ಅದುವರೆಗೂ ಅಥವಾ ಮುಂದಿನ ದಿನಾಂಕದವರೆಗೆ ಬಂದೂಕನ್ನು ಠೇವಣಿ ಇಡುವಂತೆ ಒತ್ತಾಯಿಸದಂತೆ ನಿರ್ದೇಶನ ನೀಡಿದೆ.
ಈ ನಡುವೆ ಕಳೆದ ಬಾರಿಯ ಚುನಾವಣೆಯ ವೇಳೆ 50 ಕ್ಕೂ ಹೆಚ್ಚು ಕೃಷಿಕರು ಹೈಕೋರ್ಟ್‌ಗೆ ಮನವಿ ಸಲ್ಲಿಸಿ ಕೃಷಿಕರ ಬಂದೂಕು ಠೇವಣಾತಿ ಇರಿಸುವುದಕ್ಕೆ ವಿನಾಯಿತಿ ಬೇಕು ಎಂದು ಮನವಿ ಮಾಡಿದ್ದರು. ಈ ಸಂದರ್ಭ ಬಂದೂಕು ಠೇವಣಾತಿಗೆ ಕೃಷಿಕರು ಸ್ಕ್ರೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿ ಅಲ್ಲಿಂದ ವಿನಾಯಿತಿ ಪಡೆಯಬೇಕು ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ಇದೇ ಆಧಾರದಲ್ಲಿ ಈ ಬಾರಿ ಸ್ಕ್ರೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸುಳ್ಯ ತಾಲೂಕಿನ ಗುತ್ತಿಗಾರಿನ ಗಂಗಾಧರ ಭಟ್ ಪುಚ್ಚಪ್ಪಾಡಿ ಅವರು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಮೈಲ್ ಮೂಲಕ ತಿಳಿಸಿದ್ದರು, ಅದರ ಜೊತೆಗೆ ನ್ಯಾಯಾಲಯದ ಆದೇಶವನ್ನೂ ಉಲ್ಲೇಖಿಸಿದ್ದರು. ಈ ಬಗ್ಗೆ ತಕ್ಷಣವೇ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ದ ಕ ಜಿಲ್ಲಾದಿಕಾರಿಯವರಿಗೆ ಸೂಚನೆ ನೀಡಿದ್ದಾರೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…