ಚುನಾವಣಾ ಸಮಯದಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು
ಜಿಲ್ಲಾಡಳಿತ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದನ್ನು ಪುರಸ್ಕರಿಸಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಅರ್ಜಿದಾರರ ಪರ ಆದೇಶ ಮಾಡಿರುತ್ತದೆ.
ಕಳೆದ ಕೆಲವು ವರ್ಷಗಳಿಂದ ಚುನಾವಣಾ ಸಮಯದಲ್ಲಿ ಕೃಷಿಕರು ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ಕಡ್ಡಾಯವಾಗಿ ಠೇವಣಾತಿ ಇಡುವ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪರವಾನಿಗೆ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಠೇವಣಿ ಇಡಲು ಈ ಬಾರಿಯ ಚುನಾವಣೆಯ ವೇಳೆಯೂ ಜಿಲ್ಲಾ ದಂಡಾಧಿಕಾರಿಗಳಿಂದ ಆದೇಶವಾಗಿತ್ತು. ಅನಿವಾರ್ಯ ಇರುವ ಪರವಾನಿಗೆದಾರರು ವಿನಾಯಿತಿ ಕೋರಿ ಅರ್ಜಿ ಸಲ್ಲಿಸಬಹುದೆಂದು ಘೋಷಿಸಲ್ಪಟ್ಟಿತ್ತು. ಆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪರವಾನಿಗೆದಾರರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಬಹುತೇಕ ಅರ್ಜಿಗಳು ತಿರಸ್ಕರಿಸಲ್ಪಟ್ಟಿತ್ತು. ಈ
ನಿರಾಕರಣ ಆದೇಶ ಮತ್ತು ಪ್ರತಿ ಚುನಾವಣೆಗೆ ಠೇವಣಿ ಇಡುವ ವಿಚಾರ ಪರವಾನಿಗೆದಾರರ ಆಕ್ರೋಶಕ್ಕೆ ಗುರಿಯಾಗಿದೆ.
ಈ ನಡುವೆ ಜಿಲ್ಲಾಡಳಿತದ ಈ ನಿಲುವನ್ನು ಪ್ರಶ್ನಿಸಿ ಮೊದಲ ಹಂತದಲ್ಲಿ ರ್ನಾಟಕ ಉಚ್ಚ ನ್ಯಾಯಾಲಯಲ್ಲಿ ಬೆಳ್ಳಾರೆಯ ಜಯಪ್ರಸಾದ್ ಜೋಶಿ, ಎಂ. ಗೋವಿಂದ ಭಟ್ ಮಾಣಿಮೂಲೆ, ಪುರುಷೋತ್ತಮ ಗೌಡ ಮಲ್ಕಜೆ, ಎಂ. ಸುದರ್ಶನ ಕುಮಾರ್, ಗಿರಿಜಾ ಶಂಕರ್ ಕೆ ಅವರ ರಿಟ್ ಅರ್ಜಿಗಳು ಸಲ್ಲಿಕೆಯಾಗಿತ್ತು.
ಪ್ರಥಮ ಹಂತದಲ್ಲಿ ಸಲ್ಲಿಕೆಯಾದ 5 ರಿಟ್ ಅರ್ಜಿಗಳು ನ್ಯಾಯಾಧೀಶ ಸಚಿನ್ ಶಂಕರ್ ಮುಗದಮ್
ಅವರ ನ್ಯಾಯ ಪೀಠದ ಮುಂದೆ ಬಂದಿದ್ದು ಅವುಗಳನ್ನು ಜಂಟಿಯಾಗಿ ತನಿಖೆ ನಡೆಸಿದ್ದರು. ಆಗ ಜಿಲ್ಲಾಡಳಿತ ಈ 5
ರಿಟ್ ಅರ್ಜಿಗಳ 9 ಅರ್ಜಿದಾರರುಗಳಿಗೆ ವಿನಾಯಿತಿ ನೀಡಿದ್ದಲ್ಲದೆ ಠೇವಣಿ ಇಟ್ಟ ಆಯುಧಗಳನ್ನು ಹಿಂದೆ ಕೊಡುವರೇ
ನ್ಯಾಯಾಲಯದ ಮುಂದೆ ಒಪ್ಪಿಕೊಂಡಿತ್ತು. ಸರಕಾರಿ ವಕೀಲರು ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದವರಿಗೆ ವಿನಾಯಿತಿ ಆದೇಶ
ನೀಡಿದ ಕಾರಣ ಪ್ರಕರಣವನ್ನು ಅಷ್ಟಕ್ಕೇ ವಿಲೆವಾರಿ ಆದೇಶವಾಗುವಂತೆ ಕೋರಿದ್ದರೂ ಅರ್ಜಿದಾರರುಗಳ ವಕೀಲರುಗಳು
ಹಲವಾರು ಕಾನೂನಿನ ಅಂಶಗಳನ್ನು ಉಲ್ಲೇಖಿಸಿ ವಿನಾಯಿತಿ ನೀಡಿದ ಮಾತ್ರಕ್ಕೆ ಪ್ರಕರಣವನ್ನು ಅಂತಿಮಗೊಳಿಸಬಾರದು
ಎಂದು ವಾದ ಮಂಡಿಸಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಆದೇಶಕ್ಕೆ ಕಾದಿರಿಸಿದ್ದರು.
ಆ ಪ್ರಕಾರ ಎ.25 ರಂದು ಗೌರವಾನ್ವಿತ ನ್ಯಾಯಾಧೀಶ ಸಚಿನ್ ಶಂಕರ್ ಮುಗದಮ್ ಅವರ ನ್ಯಾಯ
ಪೀಠ ಪ್ರಥಮ 5 ರಿಟ್ ಅರ್ಜಿದಾರರ ವಾದವನ್ನು ಪುರಸ್ಕರಿಸಿ ವಿಸ್ತ್ರತ ಆದೇಶ ಮಾಡಿದೆ. ಅಲ್ಲದೆ ಈ ಕುರಿತಾಗಿ
ಅನುಸರಿಸಲು ಸರಕಾರಕ್ಕೆ ನಿರ್ದಿಷ್ಟ ನಿರ್ದೇಶನಗಳನ್ನು ನೀಡಿರುತ್ತದೆ.
ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳಿಂದ ನೂರಾರು ಪರವಾನಿಗೆದಾರರು ವಿವಿಧ ವಕೀಲರುಗಳ ಮೂಲಕ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳು ನ್ಯಾಯಾಧೀಶ ನಾಗಪ್ರಸನ್ನ ಅವರ ನ್ಯಾಯ ಪೀಠದ ಮುಂದೆ ಬಂದಿದ್ದು ಹಲವು ರಿಟ್ ಅರ್ಜಿಗಳನ್ನು ಎ. 24 ರಂದು ವಿನಾಯಿತಿ ಆದೇಶದ ಹಿನ್ನಲೆಯಲ್ಲಿ ವಿಲೇವಾರಿ ಮಾಡಿದ್ದು ಇನ್ನು ಕೆಲವು ರಿಟ್ ಪಿಟಿಷನ್‍ಗಳು ಮುಂದಿನ ವಾಯಿದೆ ಮೇ 27
ಮುಂದೂಡಲ್ಪಟ್ಟಿದೆ. ಈ ಎಲ್ಲಾ ರಿಟ್ ಅರ್ಜಿಗಳ ಅಂತಿಮ ಆದೇಶದ ನಂತರ ಮುಂದಿನ ಚುನಾವಣೆಗೆ ಬಂದೂಕು ಠೇವಣಿ ಇಡಬೇಕಾದ ಬಗ್ಗೆ ಒಂದು ಚಿತ್ರಣ ಲಭಿಸಬಹುದಾಗಿದೆ.
ಜಯಪ್ರಸಾದ್ ಜೋಶಿ ಪರವಾಗಿ ಶ್ರೀಹರಿ. ಕೆ ಲೆಕ್ಸ್ ಜಸ್ಟಿಸಿಯಾ, ಪುರುಷೋತ್ತಮ ಗೌಡ ಮಲ್ಕಜೆ ಪರ ಕೆ. ರವಿಶಂಕರ್, ಎಂ. ಸುದರ್ಶನ ಕುಮಾರ್ ಪರ ರವಿಶಂಕರ್ ಶಾಸ್ತ್ರಿ, ಎಂ. ಗೋವಿಂದ ಭಟ್ ಮಾಣಿಮೂಲೆ ಪರ ಸುಬ್ರಹ್ಮಣ್ಯ ಭಟ್, ಗಿರಿಜಾ ಶಂಕರ್ ಕೆ ಪರ ಶ್ರೀಹರಿ. ಕೆ ನ್ಯಾಯವಾದಿಗಳಾಗಿ ವಾದಿಸಿದ್ದರು.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…