‌ಕೋವಿ ಠೇವಣಾತಿ | ಸುಳ್ಯದಲ್ಲಿ ಕೃಷಿಕರ ಸಭೆ | ಕೋವಿ ಠೇವಣಾತಿಯಿಂದ ವಿನಾಯಿತಿಗೆ ಮನವಿ |

March 21, 2024
12:58 PM
ಕೋವಿ ಠೇವಣಾತಿಯಿಂದ ಕೃಷಿಕರಿಗೆ ಆಗುವ ಹಲವು ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಇಲಾಖೆಗಳು ಈ ಬಗ್ಗೆ ಗಂಭೀರವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಚುನಾವಣೆ ಘೋಷಣೆಯಾಗುವ ಜೊತೆಗೇ ಕೃಷಿಕರಿಗೆ ಪ್ರತೀ ಬಾರಿಯೂ ಕೋವಿ ಡಿಪಾಸಿಟ್‌ ಬಗ್ಗೆ ಕಿರಿಕಿರಿ. ಕಳೆದ ಕೆಲವು ಸಮಯಗಳಿಂದ ಈ ಬಗ್ಗೆ ಕೃಷಿಕರ ವಿರೋಧ ಕೇಳಿಬರುತ್ತಿತ್ತು. ಹಾಗಿದ್ದರೂ ಯಾವುದೇ ಪರಿಹಾರ ಮಾರ್ಗಗಳು ದೊರೆತಿಲ್ಲ. ಇದೀಗ ಕೃಷಿಕರೆಲ್ಲರು ಸಭೆ ಸೇರಿ ಕೋವಿ ಠೇವಣಾತಿಯಿಂದ ವಿನಾಯಿತಿ ಸಿಗಬೇಕು ಎಂದು ಒತ್ತಾಯ ಮಂಡಿಸಿದ್ದಾರೆ.

ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಅನೇಕ ಕೃಷಿಕರು ಭಾಗವಹಿಸಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರತಿ ಚುನಾವಣೆಯ ಸಂದರ್ಭದಲ್ಲೂ ಕೋವಿ ಡೆಪಾಸಿಟ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಿ ಪೊಲೀಸ್ ಇಲಾಖೆ ಒತ್ತಡ ಹೇರುವುದು ನಡೆಯುತ್ತದೆ. ಆದರೆ ನಮ್ಮ ಕೃಷಿ ಹಾನಿಯಾದರೆ ಇದಕ್ಕೆ ಏನು ಪರಿಹಾರ ಎಂಬುದಕ್ಕೆ ಯಾರಿಂದಲೂ ಉತ್ತರ ಇಲ್ಲ. ಚುನಾವಣೆಯ ಹೆಸರಿನಲ್ಲಿ ಒಂದೆರಡು ತಿಂಗಳುಗಳ ಕಾಲ ರೈತರು ತಮ್ಮ ಕೋವಿಗಳನ್ನು ಡೆಪಾಸಿಟ್ ಮಾಡಬೇಕಾದ ಪರಿಸ್ಥಿತಿ ಬರುತ್ತಿದ್ದು, ಇದರಿಂದ ಕಾಡುಪ್ರಾಣಿಗಳ ಹಾವಳಿ ಉಂಟಾಗಿ ರೈತರಿಗೆ ತೀವ್ರ ನಷ್ಟ ಉಂಟಾಗುತ್ತಿದೆ ಎಂದು ಹಲವು ಕೃಷಿಕರು ಹೇಳಿದರು. ಇಲಾಖೆಗಳಿಂದ ಇದಕ್ಕೆ ಯಾವುದೇ ರೀತಿಯ ಪರಿಹಾರವೂ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯ ಬಳಿಕ ಸುಳ್ಯ ತಹಶೀಲ್ದಾರ್‌ ಮೂಲಕ ಕೋವಿ ಠೇವಣಾತಿ ವಿನಾಯಿತಿಗೆ ಮನವಿ ನೀಡಲು ನಿರ್ಧರಿಸಲಾಯಿತು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ
August 30, 2026
10:38 PM
by: ದ ರೂರಲ್ ಮಿರರ್.ಕಾಂ
ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ
August 30, 2026
10:18 PM
by: ದ ರೂರಲ್ ಮಿರರ್.ಕಾಂ
ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ
August 30, 2026
10:09 PM
by: ದ ರೂರಲ್ ಮಿರರ್.ಕಾಂ
ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?
August 30, 2026
11:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror