ಚುನಾವಣೆ ಘೋಷಣೆಯಾದ ತಕ್ಷಣವೇ ಕೃಷಿ ರಕ್ಷಣೆಯ ಬಂದೂಕು ಡಿಪಾಸಿಟ್ ಇಡಲು ಪೊಲಿಸ್ ಇಲಾಖೆಯಿಂದ ಕೃಷಿಕರಿಗೆ ಸೂಚನೆ ಬರುತ್ತಿದೆ. ಕೃಷಿ ರಕ್ಷಣೆಯ ಬಂದೂಕುಗಳನ್ನು ಠೇವಣಿ ಇಡುವುದಕ್ಕೆ ವಿನಾಯಿತಿ ನೀಡಬೇಕು ಎಂದು ಕೃಷಿಕರು ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಪ್ರಜಾಪ್ರಭುತ್ವ ದೇಶದಲ್ಲಿ ವರ್ಷ ವರ್ಷವೂ ಒಂದಲ್ಲ ಒಂದು ಚುನಾವಣೆ ಇದೆ. ಪ್ರತಿ ಬಾರಿಯೂ ಚುನಾವಣೆ ನಡೆಯುವ ಹಂತದಲ್ಲಿ ಠೇವಣಿ ಇಟ್ಟಲ್ಲಿ ನಮ್ಮ ಬೆಳೆರಕ್ಷಣಾ ಉದ್ದೇಶಕ್ಕೆ ಕೊಟ್ಟ ಕೋವಿಯಿಂದ ಪ್ರಯೋಜನವೇನು? ಬೆಳೆ ರಕ್ಷಣೆ ಬಿಟ್ಟು ಇನ್ನು ಯಾವುದೇ ಉದ್ದೇಶಕ್ಕೆ ತನ್ನ ಬಂದೂಕನ್ನು ಬಳಸಬಾರದೆಂಬ ಸ್ಪಷ್ಟ ಕಲ್ಪನೆಯೂ, ಜವಾಬ್ದಾರಿಯೂ ಕೃಷಿಕರಲ್ಲಿದೆ. ಹಾಗೊಂದು ವೇಳೆ ಅಪರಾಧಿ ಹಿನ್ನೆಲೆ ಇದ್ದವರಿಗೆ, ಅಥವಾ ಅಪರಾಧಕ್ಕೆ ಬಳಸಿಕೊಂಡವರಿಗೆ ಈ ಮಾನದಂಡ ಅಳವಡಿಸಿದ್ದರೆ ಅದಕ್ಕೊಂದು ಅರ್ಥವಿದೆ, ಆದರೆ ಪರವಾನಗಿದಾರ ರೈತರೆಲ್ಲರೂ ಚುನಾವಣಾ ಅಪರಾಧಕ್ಕೆ ತನ್ನ ಬಂದೂಕನ್ನು ಬಳಸುತ್ತಾರೆ ಎಂಬಂತೆ ಘೋಷಣೆಯಾದ ದಿನವೇ ಬಂದೂಕನ್ನು ಠೇವಣಿ ಇರಿಸುವ ಸೂಚನೆಯನ್ನು ಹೊರಡಿಸುವುದು ಸರಿಯಲ್ಲ ಎಂಬುದು ಕೃಷಿಕರ ಬೇಡಿಕೆ.
ಯಾವ ಕಾರಣಕ್ಕೂ ಬೆಳೆ ರಕ್ಷಣೆಗೆ ನೀಡಿದ ಬಂದೂಕನ್ನು ಠೇವಣಿ ಇಡಲು ಹೇಳಬೇಡಿ. ರೈತರದ ನಾವು ಬೆಳೆ ರಕ್ಷಣೆಗಲ್ಲದೆ ಯಾವುದೇ ಅಪರಾಧ ಪ್ರಕ್ರಿಯೆಗೆ ಬಳಸುವುದಿಲ್ಲ ಮತ್ತು ಬಳಸಬಾರದೆಂಬ ಎಂಬ ಸಂಪೂರ್ಣ ಎಚ್ಚರಿಕೆ ನಮಗಿದೆ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ. ಬಂದೂಕು ಠೇವಣಿ ಇಡುವ ಮತ್ತೆ ತರುವ ಈ ಎಲ್ಲಾ ಸಮಸ್ಯೆಗಳಿಂದ ಪಾರು ಮಾಡಿ ಎಂದು ಮನವಿ ಮಾಡಿದ್ದಾರೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…