ಸುದ್ದಿಗಳು

ಶಕ್ತಿ ವಸತಿ ಶಾಲೆಯಲ್ಲಿ ಗುರು ಪೂರ್ಣಿಮೆ | ದೇವರು ಹಾಗೂ ಗುರು ಇಬ್ಬರೂ ಪೂಜೆಗೆ ಯೋಗ್ಯ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ದೇವರು ಹಾಗೂ ಗುರು ಇಬ್ಬರೂ ಪೂಜೆಗೆ ಯೋಗ್ಯರಾದವರು. ತಂದೆಯನ್ನು ದೇವರಿಗೆ ಹೋಲಿಸಿದರೆ ತಾಯಿಯನ್ನು ಗುರುವಿಗೆ ಹೋಲಿಸಲಾಗುತ್ತದೆ. ಮಕ್ಕಳಲ್ಲಿ ಇರುವ ಎಲ್ಲಾ ಲೋಪದೋಷಗಳನ್ನು ತಿದ್ದಿ ಈ ಸಮಾಜಕ್ಕೆ ಒಬ್ಬ ಉತ್ತಮ ಪ್ರಜೆಯನ್ನು ನೀಡುವುದು ಅಮ್ಮ ಹಾಗೂ ಗುರು ಎಂದು ಹೊಸದಿಗಂತ ಪತ್ರಿಕೆಯ ಸಿಇಓ ಪಿ ಎಸ್ ಪ್ರಕಾಶ್‍ ಹೇಳಿದರು.

Advertisement
Advertisement

ಅವರು ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಸತಿ ಶಾಲೆಯಲ್ಲಿಗುರು ಪೂರ್ಣಿಮೆ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.  ಬರೀ ಸರ್ಟಿಫಿಕೇಟ್‍ಗೋಸ್ಕರ ಶಾಲೆಗೆ ಬಂದರೆ ಅದು ನಿಜವಾದ ವಿದ್ಯೆ ಆಗೋದಿಲ್ಲ, ಸರ್ಟಿಫಿಕೇಟ್‍ ಜೊತೆಗೆ ನಮ್ಮ ಜೀವನಕ್ಕೆ ಬೇಕಾದ ಒಂದು ಉತ್ತಮ ಮೌಲ್ಯ, ಸಂಸ್ಕಾರವನ್ನು ಕೂಡ ನಾವು ಶಿಕ್ಷಣದಿಂದ ಪಡೆಯುವಂತಾಗಬೇಕು. ಅಂತಹ ಒಳ್ಳೆಯ ಮೌಲ್ಯ ಸಂಸ್ಕಾರವನ್ನು ಈ ಶಕ್ತಿ ಶಾಲೆಯು ಇಲ್ಲಿನ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಇಡೀ ಜಗತ್ತಿಗೆ ಭಾರತದ ಮೌಲ್ಯ ಮಾದರಿಯಾಗಬೇಕು. ಹಾಗೆ ಆಗಬೇಕಾದರೆ ಇಂತಹ ಶಾಲೆಯಲ್ಲಿ ಕಲಿತ ಒಳ್ಳೆಯ ಸಂಸ್ಕಾರಭರಿತ ಮಕ್ಕಳಿಂದ ಮಾತ್ರ ಸಾಧ್ಯಎಂದರು. ನಾಗರಿಕ ಶಿಷ್ಟಾಚಾರದ ಪಾಲನೆಯನ್ನು ನಾವು ಮಾಡಬೇಕು, ಪ್ರಕೃತಿಯ ರಕ್ಷಣೆ ದೇಶರಕ್ಷಣೆಯ ಮೊದಲ ಹೆಜ್ಜೆ, ಹಾಗಾಗಿ ನಾವು ನಮ್ಮ ಪ್ರಕೃತಿಯ ರಕ್ಷಣೆಯನ್ನು ಮಾಡಬೇಕು ಎಂದರು.

ಶಕ್ತಿ ಶಾಲೆಯ ಸಂಸ್ಕೃತ  ಶಿಕ್ಷಕಿ  ಸಾರಿಕಾ ಗುರುಪೂರ್ಣಿಮೆಯ ಮಹತ್ವದ ಬಗ್ಗೆ ತಿಳಿಸಿದರು. ನಂತರ ಮುಖ್ಯ ಅತಿಥಿಗಳಾದ  ಪಿ ಎಸ್ ಪ್ರಕಾಶ್‍ ಅವರಿಗೆ ಪಾದಪೂಜೆಯನ್ನು ಮಾಡುವ ಮೂಲಕ ಗುರುಪೂಜೆಯನ್ನು ನೆರವೇರಿಸಲಾಯಿತು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿಯಾಗಿರುವ ಡಾ. ಕೆ ಸಿ ನಾಯ್ಕ್ ಅವರು ವಿದ್ಯಾರ್ಥಿಗಳಿಗೆ ಆಶೀರ್ವಾದವನ್ನು ಮಾಡಿದರು. ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರರಾಗಿರುವ‌  ರಮೇಶ್ ಕೆ, ಉಪ ಪ್ರಾಂಶುಪಾಲರಾದ  ನಟೇಶ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಮೇಶ್ ಕೆ  ಸ್ವಾಗತಿಸಿ , ಶಕ್ತಿ ಶಾಲೆಯ ಶಿಕ್ಷಕ ಶರಣಪ್ಪಕಾರ್ಯಕ್ರಮವನ್ನು ನಿರೂಪಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಎರಡು ದಿನಗಳಿಂದ ಸಾಮಾನ್ಯ ಮಳೆ | ಗಾಳಿಯೊಂದಿಗೆ ಮಳೆ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು ಹಾಗೂ…

4 hours ago

ಕಾಡಾನೆ ಹಾವಳಿ | ಆನೆಗಳನ್ನು ಕಾಡಿಗಟ್ಟಲು  ಅರಣ್ಯಾಧಿಕಾರಿಗಳು ತುರ್ತು ಕ್ರಮವಹಿಸುವಂತೆ ಸೂಚನೆ

ಮಾನವ-ವನ್ಯಜೀವಿ ಸಂಘರ್ಷ ಇರುವ ವಲಯಗಳಲ್ಲಿ ಉನ್ನತಾಧಿಕಾರಿಗಳು ಸತತ ನಿಗಾ ಇಟ್ಟು, ಜನರ ಅಮೂಲ್ಯ…

4 hours ago

ಮಾಂಗಲ್ಯ ದೋಷದ ಭೀತಿ | ವಿವಾಹ ಜೀವನದ ರಕ್ಷಣೆಗೆ ಜ್ಯೋತಿಷ್ಯ ಉಪಾಯಗಳು | ಮಾಂಗಲ್ಯ ದೋಷದ ಜ್ಯೋತಿಷ್ಯ ಮಹತ್ವ

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾಂಗಲ್ಯ ದೋಷ ಅಥವಾ ಮಾಂಗಲಿಕ ದೋಷ ಎಂಬುದು ಒಂದು…

5 hours ago

ಜಾನುವಾರುಗಳನ್ನು ಅರಣ್ಯದಲ್ಲಿ ಮೇವು | ಆದೇಶವನ್ನು ಹಿಂಪಡೆಯುವಂತೆ ರೈತರು ಒತ್ತಾಯ

ರೈತರ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸುವ ವಿಚಾರವಾಗಿ ಹೊರಡಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಶಿವಮೊಗ್ಗ…

13 hours ago

ರಾಜ್ಯದಲ್ಲಿ ಅರಣ್ಯ ಇಲಾಖೆಯಿಂದ 11.50 ಕೋಟಿ ಸಸಿ ನೆಡುವ ಗುರಿ

ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 11 ಕೋಟಿ 50…

13 hours ago

ರಾಮನ ಆದರ್ಶ ಸರ್ವಕಾಲಿಕ : ರಾಘವೇಶ್ವರ ಶ್ರೀ

ರಾಮ ಎಂದರೆ ಧರ್ಮ; ಸಮಾಜದ ಪ್ರತಿಯೊಬ್ಬರು ರಾಮನ ಅನುಶಾಸನಕ್ಕೆ ಒಳಪಡಬೇಕು ಎಂಬ ಭಾವದಿಂದ…

14 hours ago