ಆಷಾಢ ಹುಣ್ಣಿಮೆ ಅಂದರೆ ಗುರುಪೂರ್ಣಿಮೆ. ಈ ಪ್ರಯುಕ್ತ ಸೋಮವಾರದಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಗೃಹದಲ್ಲಿ ಗುರುಪೂರ್ಣಿಮಾ ಮಹೋತ್ಸವ ನಡೆಯಿತು. ಮಹೋತ್ಸವದಲ್ಲಿ ಮುಳಿಯ ಜುವೆಲ್ಲರ್ಸ್ ಮಾಲಕರಾದ ಕೇಶವ್ ಪ್ರಸಾದ್ ಮುಳಿಯ ಮತ್ತು ಸನಾತನ ಸಂಸ್ಥೆಯ ಲಕ್ಷ್ಮೀ ಪೈ ಇವರು ಉಪಸ್ಥಿತರಿದ್ದರು.
ಮಹೋತ್ಸವವು ಶ್ರೀ ವ್ಯಾಸಪೂಜೆ ಮತ್ತು ಪ. ಪೂ. ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆಯೊಂದಿಗೆ ಆರಂಭವಾಯಿತು. ನಂತರ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಪ್ರಶಾಂತ್ ಎನ್ಮಾಡಿ ಇವರು ಗುರುಪೂರ್ಣಿಮೆ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂದೇಶವನ್ನು ವಾಚನ ಮಾಡಿದರು. ಧರ್ಮಶಿಕ್ಷಣ ನೀಡುವ ಮತ್ತು ರಾಷ್ಟ್ರ ಜಾಗೃತಿ ಮೂಡಿಸುವ ಫಲಕಗಳು, ಆಧ್ಯಾತ್ಮ, ಧರ್ಮಾಚರಣೆ ಮತ್ತು ಸಾಧನೆ ಇನ್ನಿತರ ವಿಷಯಗಳ ಕುರಿತು ಗ್ರಂಥ ಪ್ರದರ್ಶಿನಿಗಳು ಇದ್ದವು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel