ಆಮೆನಡಿಗೆಯ ಕಾಮಗಾರಿ | ಗುತ್ತಿಗಾರಿನಲ್ಲಿ ಮಹಿಳೆಯ ನೇತೃತ್ವದಲ್ಲಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ…..! | ಮಹಿಳೆಯ ಕಾಳಜಿಗೆ ಶ್ಲಾಘನೆ |

July 22, 2021
10:42 PM
ಅನೇಕ ಸಮಯಗಳಿಂದ ಆಮೆ ನಡಿಗೆಯಲ್ಲಿ ಗುತ್ತಿಗಾರಿನಲ್ಲಿ  ಮುಖ್ಯ ರಸ್ತೆಯ ಮೋರಿ ರಚನೆಯ ಕಾರ್ಯ ನಡೆಯುತ್ತಿತ್ತು. ದಿನವೂ ಸಾಕಷ್ಟು ಸಂಖ್ಯೆಯಲ್ಲಿ  ಜನರ ಓಡಾಟ ಇತ್ತು. ಈಚೆಗೆ ಅಪಘಾತಗಳು ನಡೆದವು. ಹೀಗಿದ್ದರೂ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳಲೇ ಇಲ್ಲ. ಸಾರ್ವಜನಿಕರು ಮನವಿ ಮಾಡಿದರೂ ಕೆಲಸ ಆಗಿಲ್ಲ. ಕಳೆದ ಎರಡು ದಿನಗಳ ಹಿಂದೆ ಮತ್ತೊಂದು ಸಣ್ಣ ಅಪಘಾತವಾಗಿತ್ತು. ಇದೀಗ ಅಲ್ಲೇ ಪಕ್ಕದಲ್ಲಿ  ಕಬ್ಬಿಣದ  ಕೆಲಸ ಮಾಡುವ ಅಂಗಡಿ ಹೊಂದಿದ್ದ ಲೀಲಾ ಎಂಬವರ ನೇತೃತ್ವದಲ್ಲಿ  ಗುಂಡಿಗೆ ಕಲ್ಲು ಹಾಕುವ ಮೂಲಕ ತಾತ್ಕಾಲಿಕ ದುರಸ್ತಿ ಮಾಡಿದ್ದಾರೆ. ಇಲಾಖೆಗಳು ಎಚ್ಚರವಾಗಿದ್ದರೆ ತಕ್ಷಣವೇ ಸುರಕ್ಷತೆಯ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕಿದೆ. ಜನಪ್ರತಿನಿಧಿಗಳೂ ಗಮನಿಸಬೇಕಿದೆ.
ಕಬ್ಬಣದ ಕೆಲಸ ಮಾಡುತ್ತಿದ್ದ ಸಾಮಾನ್ಯ ಮಹಿಳೆಯೊಬ್ಬರು  ತನ್ನ ಅಂಗಡಿ ಪಕ್ಕದಲ್ಲಿ ಅನೇಕ ದಿನಗಳಿಂದ ರಸ್ತೆಯ ಅವ್ಯವಸ್ಥೆ ಕಂಡು , ಅಪಘಾತದ ಸುದ್ದಿ ಕೇಳಿ, ಮಾಧ್ಯಮಗಳಲ್ಲಿನ ವರದಿ ಗಮನಿಸಿ ಗುರುವಾರ ಸಂಜೆ ಸ್ವತಃ ದುರಸ್ತಿ ಕಾರ್ಯ ಮಾಡಿದರು. ಸ್ಥಳೀಯ ಜನರೂ ಸಹಕಾರ ನೀಡಿದರು. ಮಹಿಳೆಯ ಈ ಮಾದರಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು
May 3, 2026
8:17 AM
by: ದ ರೂರಲ್ ಮಿರರ್.ಕಾಂ
ಅಡಿಕೆಯಲ್ಲಿ ಎಲೆ ಚುಕ್ಕೆ ರೋಗದ ಸಮಗ್ರ ನಿರ್ವಹಣೆ ಹೇಗೆ..? ತಜ್ಞರಿಂದ ಸಮಗ್ರ ನಿರ್ವಹಣಾ ಮಾರ್ಗಸೂಚಿ – ಸಲಹೆ
May 1, 2026
7:06 PM
by: ಮಿರರ್‌ ಡೆಸ್ಕ್
ಅಡಿಕೆ ಮಾರುಕಟ್ಟೆಯ ಸ್ಥಿತಿಗತಿ ಮತ್ತು ಬೆಳೆಗಾರರ ಅಭಿಪ್ರಾಯ : ಸಮೀಕ್ಷಾ ವರದಿ
April 13, 2026
7:45 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಇಳುವರಿ ಕುಸಿತ | ಮಿಶ್ರ ತೋಟಗಳಲ್ಲಿ ಹೆಚ್ಚು ಸಮಸ್ಯೆ…! ಯಾವ ತಳಿ ಆಯ್ಕೆ ಮಾಡಿದ್ದಾರೆ…? | ಅಡಿಕೆ ಇಳುವರಿ ಕುಸಿತದ ವಿಶ್ಲೇಷಣೆ
March 13, 2026
10:48 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror