ಸಮಾಜದಲ್ಲಿ ಸ್ನೇಹಮಯ ವಾತಾವರಣ ಇದ್ದಾಗ ಮಾತ್ರವೇ ಭಗವಂತ ಆಲಯಗಳಲ್ಲಿ ನೆಲೆಸಲು ಸಾಧ್ಯ. ಧರ್ಮಗಳ ಒಳಗೆ ಸಂಘರ್ಷ, ಸಮಾಜದಲ್ಲಿ ಸಂಘರ್ಷ ಇದ್ದಾಗ ಯಾವತ್ತೂ ಶಾಂತಿ ಇರಲು ಸಾಧ್ಯವಿಲ್ಲ. ಶಾಂತಿ ಇಲ್ಲದ ಕಡೆಗಳಲ್ಲಿ ಭಗವಂತ ನೆಲೆಸಲು ಸಾಧ್ಯವಿಲ್ಲ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ರೆ.ಫಾ.ಡಾ. ಲಾರೆನ್ಸ್ ಎಂ ಟಿ ಹೇಳಿದರು.
ಅವರು ಗುತ್ತಿಗಾರಿನ ಸಂತ ಮೆರೀಸ್ ಚರ್ಚ್ ನ ಸಭಾಭವನದಲ್ಲಿ ಭಾನುವಾರ ಸಂಜೆ ನಡೆದ ಸೌಹಾರ್ದ ಕೂಟದಲ್ಲಿ ಮಾತನಾಡಿದರು. ವಿವಿಧ ಗಣ್ಯರು ಈ ಸೌಹಾರ್ದ ಸಭೆಯಲ್ಲಿ ಭಾಗವಹಿಸಿದ್ದರು. ಸಮಾಜದಲ್ಲಿ ಸಾಮರಸ್ಯ ಮತ್ತು ಐಕ್ಯತೆ ಮೂಡಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭೆಯಲ್ಲಿ ಗಣ್ಯರು ಮಾತನಾಡಿ, ಕ್ರೈಸ್ತ ಸಮುದಾಯದ ಕೊಡುಗೆ ಹಾಗೂ ಸಮಾಜದಲ್ಲಿ ಕ್ರೈಸ್ತರು ಬೆಸೆದುಕೊಂಡಿರುವ ರೀತಿಯ ಬಗ್ಗೆ ಹೇಳಿದರು.
ಬಳಿಕ ಮಾತನಾಡಿದ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ರೆ.ಫಾ.ಡಾ. ಲಾರೆನ್ಸ್ ಎಂ ಟಿ, ಶಾಂತಿ, ಸೌಹಾದರ್ತೆ ನೆಲೆಯಾದರೆ ಮಾತ್ರವೇ ಸಮಾಜದಲ್ಲಿ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯವಿದೆ. ಯಾವುದೇ ಕಾರಣಕ್ಕೂ ಅಶಾಂತಿಗಳು ಸೃಷ್ಟಿಯಾಗಬಾರದು. ಭಗವಂತನೂ ಕೂಡಾ ಇದೇ ವಾತಾವರಣವನ್ನು ಬಯಸುತ್ತಾರೆ. ಎಲ್ಲಾ ಧರ್ಮಗಳಲ್ಲೂ ಕೆಲವೊಮ್ಮೆ ಅಚಾತುರ್ಯಗಳು, ತಪ್ಪುಗಳಾಗಬಹುದು. ಅದನ್ನು ತಕ್ಷಣವೇ ಸರಿಪಡಿಸಿಕೊಳ್ಳುವ ನೇತೃತ್ವವನ್ನು ಧರ್ಮಗುರುಗಳು ವಹಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಗುತ್ತಿಗಾರು ಸಂತ ಮೆರೀಸ್ ಚರ್ಚ್ ಧರ್ಮಗುರು ಫಾ.ಆದರ್ಶ್ ಜೋಸೆಫ್, ಗುತ್ತಿಗಾರು ಮಸೀದಿಯ ಉಸ್ತಾದ್ ಅಬ್ದುಲ್ ನಝರ್, ಮುಖಂಡರಾದ ಭರತ್ ಮುಂಡೋಡಿ, ಪಿ ಸಿ ಜಯರಾಮ, ವೆಂಕಟ್ ದಂಬೆಕೋಡಿ, ಡಾ.ಯು ಪಿ ಶಿವಾನಂದ, ವೆಂಕಟ್ ವಳಲಂಬೆ, ಲಕ್ಷ್ಮೀಶ ಗಬ್ಲಡ್ಕ, ಅಬ್ಬಾಸ್ ವಳಲಂಬೆ, ಪ್ರವೀಣ್ ಮುಂಡೋಡಿ, ಮಹೇಶ್ ಪುಚ್ಚಪ್ಪಾಡಿ ಹಾಗೂ ಚರ್ಚ್ ಆಡಳಿತ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.
ಬಿಟ್ಟಿ ನೆಡುನೀಲಂ ಸ್ವಾಗತಿಸಿ ನಿರೂಪಿಸಿದರು.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…