ಸುಳ್ಯ ತಾಲೂಕಿನಲ್ಲಿ ಹೀಗೇಕೆ ? | ಕೊನೆಗೂ ರಸ್ತೆ ಹಾಳಾಯಿತು | ಸಚಿವರು-ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ….!! |

July 11, 2021
3:39 PM
ಈ ಸರಕಾರಗಳು, ಈ ಅಧಿಕಾರಿಗಳು, ಈ ಸ್ಥಳೀಯ ಜನಪ್ರತಿನಿಧಿಗಳು ಯಾರನ್ನು ರಕ್ಷಣೆ ಮಾಡುವವರು ? ಜನಸಾಮಾನ್ಯನೊಬ್ಬ ಪರಿ ಪರಿಯಾಗಿ ರಸ್ತೆ ಕಾಮಗಾರಿ ಬಗ್ಗೆ ಹೇಳಿದರೂ ಕೇಳಲಿಲ್ಲ. ಕೊನೆಗೂ ರಸ್ತೆ ಹಾಳಾಗಿದೆ. ಇನ್ನು ಅನುಭವಿಸುವುದೇ ದಾರಿ…!. ಯಾವುದೋ ವಾಟ್ಸಪ್‌ ಗ್ರೂಪಲ್ಲಿ ಪ್ರಧಾನಿಗಳ ಯೋಜನೆಯನ್ನು , ಪ್ರಧಾನಿಗಳ ಕಾರ್ಯವನ್ನು, ಚೌಕೀದಾರನ ಹೆಸರನ್ನು ಹೇಳಿಕೊಳ್ಳುವ, ದೇಶದ ಉದ್ಧಾರ ಎನ್ನುವ ಮೆಸೇಜ್  ದಾಟಿಸುವ ಮಂದಿ ಜನಸಾಮಾನ್ಯರು ಕಾಳಜಿಯಿಂದ ಹೇಳುವ ಸಂಗತಿಗಳು ಏಕೆ ಗಾಳಿಯಲ್ಲಿ  ತೂರಿ ಹೋಗುತ್ತದೆ ? ಸುಳ್ಯ ತಾಲೂಕಿನಲ್ಲಿ ಕಳೆದ ಹಲವು ಸಮಯಗಳಿಂದ ಇಂತಹದ್ದೇ ಘಟನೆಗಳು ಪದೇ ಪದೇ ನಡೆಯುತ್ತಿದೆ. ಈಗಲೂ ಅಂತಹದ್ದೇ ಘಟನೆ ನಡೆದಿದೆ. ಏನಿದು  ಕತೆ ಇಲ್ಲಿ ಓದಿ.

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಗುತ್ತಿಗಾರು-ಬಳ್ಳಕ್ಕ-ಪಂಜ ರಸ್ತೆ ಅದು. ಅನೇಕ ವರ್ಷಗಳ ಬಳಿಕ ಮರು ಡಾಮರೀಕರಣವಾಯಿತು. ಎರಡು ಹಂತದಲ್ಲಿ ಇಬ್ಬರು ಗುತ್ತಿಗೆದಾರರ ಮೂಲಕ ಡಾಮರೀಕರಣ ನಡೆಯಿತು. ಅನುದಾನಗಳು ಬಂದಾಗ ಸಹಜವಾಗಿಯೇ ಜನರಿಗೆ ಸಂತಸವಾಯಿತು, ಜನಪ್ರತಿನಿಧಿಗಳೂ ಹೆಮ್ಮೆ ಪಟ್ಟರು. ಕಾಮಗಾರಿ ನಡೆಯುವ ವೇಳೆ ಅನೇಕರ ಮಾತುಗಳು ಮೌನವಾದವು, ಕಾಮಗಾರಿ ಸರಿಯಾಗುತ್ತಿಲ್ಲ ಎಂದು ಜನರು ಮಾತನಾಡಿದರೂ ಯಾರೊಬ್ಬರೂ ಮಾತನಾಡಿಲ್ಲ. ಈ ಸಂದರ್ಭದಲ್ಲಿ  ನ್ಯಾಯವಾದಿ ಅನಿಲ್‌ ಹುಲಿಕೆರೆ ಎಂಬ ಯುವಕ ನಾಗರಿಕರ ಪರವಾಗಿ ಕಾಮಗಾರಿ ಸರಿಯಾಗುತ್ತಿಲ್ಲ ಎಂಬ ಅನುಮಾನವನ್ನು ಬಹಿರಂಗವಾಗಿ ವ್ಯಕ್ತ ಪಡಿಸಿದರು.

Advertisement
Advertisement
ಅನಿಲ್‌ ಹುಲಿಕೆರೆ

ಗ್ರಾಮಮಟ್ಟದಲ್ಲಿ ಪಂಚಾಯತ್‌ ಮೂಲಕ ರಚನೆಯಾದ ವ್ಯಾಟ್ಸಪ್‌ ಗ್ರೂಪುಗಳಲ್ಲೂ ತಿಳಿಸಿದ್ದರು.  ಸರಕಾರವೇ ಸೂಚಿಸಿದಂತೆ ಗ್ರಾಮ ಮಟ್ಟದಲ್ಲಿ ರಚನೆಯಾದ ವ್ಯಾಟ್ಸಪ್‌ ಗ್ರೂಪುಗಳಲ್ಲಿ ನೀಡಿದ ಇಂತಹ  ಮಾಹಿತಿಗಳ ಬಗ್ಗೆ ತಕ್ಷಣವೇ ಕ್ರಮವಾಗಬೇಕು. ಹಾಗಿದ್ದರೂ ಯಾವುದೇ ಕ್ರಮ ಆಗಿರಲಿಲ್ಲ ಎನ್ನುತ್ತಾರೆ ಅನಿಲ್.

Advertisement

 

 

Advertisement

 

Advertisement

ಈ ಸಂದರ್ಭ ಸ್ಥಳೀಯರು ಸರಿಯಾಗಿ ಸ್ಪಂದನೆ ಮಾಡಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ದಾಖಲೆ ಸಹಿತ ಅನಿಲ್‌ ಹುಲಿಕೆರೆ ವಾಟ್ಸಪ್‌ ಸಂದೇಶ ಮಾಡಿದರು. ಆಧುನಿಕ ಜಾಲತಾಣವನ್ನು  ರಚನಾತ್ಮಕವಾಗಿ ಬಳಸಿಕೊಂಡ ಯುವಕನಿಗೆ ಸಚಿವರು ಸ್ಪಂದಿಸಿದರು. ಪುತ್ತೂರು ಸಹಾಯಕ ಕಮೀಶನರ್‌ ಸ್ಪಂದಿಸಿದರು. ತಕ್ಷಣವೇ ಕಾಮಗಾರಿ ಸರಿಯಾಗಿ ನಡೆಸಬೇಕು ಎಂದು  ಸೂಚನೆ ನೀಡಿದರು. ಹಾಗಿದ್ದರೂ ಸ್ಥಳೀಯವಾಗಿ ಯಾವುದೇ ಸರಿಯಾದ ಸ್ಪಂದನೆ ಇರಲಿಲ್ಲ ಎನ್ನುತ್ತಾರೆ ಯುವಕ ಅನಿಲ್.‌

Advertisement

ಇದೀಗ ಗುತ್ತಿಗಾರು-ಚಣಿಲ ರಸ್ತೆಯ ಅಲ್ಲಲ್ಲಿ ರಸ್ತೆಯಲ್ಲಿ  ಗುಂಡಿ ಬಿದ್ದಿದೆ. ಕೊನೆಗೂ ಕಾಮಗಾರಿ ಸರಿಯಾಗುತ್ತಿಲ್ಲ ಎಂದು ಪದೇ ಪದೇ ಹೇಳಿರುವ ಯುವಕನ ಸಾಮಾಜಿಕ ಕಾಳಜಿಗೆ ಜನಪ್ರತಿನಿಧಿಗಳು ಧ್ವನಿಯಾಗಲಿಲ್ಲ, ಅಧಿಕಾರಿಗಳೂ ಮೌನವಾದರು. ಇದೀಗ ರಸ್ತೆ ಗುಂಡಿ ಬಿದ್ದಿದೆ. ಈಗ ಮಾತನಾಡುವವರು ಯಾರು ಎನ್ನುವುದೇ ಪ್ರಶ್ನೆಯಾಗಿದೆ. ಪ್ರಧಾನಿಗಳು ಹೇಳುವ ಚೌಕೀದಾರ್‌  ಎನ್ನುವುದು ಈಗ  ಪದೇ ಪದೇ ಇಂತಹ ರಸ್ತೆಗಳ ಮುಂದೆ ಬಂದು ನಿಲ್ಲುತ್ತದೆ.

 

Advertisement

 

 

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :
May 19, 2024
5:57 PM
by: The Rural Mirror ಸುದ್ದಿಜಾಲ
ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?
May 19, 2024
5:28 PM
by: The Rural Mirror ಸುದ್ದಿಜಾಲ
ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?
May 19, 2024
5:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror