#SwachchBharath | ಪುಟ್ಟ ಹಳ್ಳಿಯ ಸ್ವಚ್ಛತಾ ಅಭಿಯಾನದ ಇಂಪ್ಯಾಕ್ಟ್….‌ | ಇನ್ನೀಗ ಬೇಕಿರುವುದು ಜನರ ಒಲವು… ಆಡಳಿತದ ನೆರವು.. |

July 27, 2023
12:49 PM
ಪುಟ್ಟ ಗ್ರಾಮದ ಸ್ವಚ್ಛತಾ ಅಭಿಯಾನದ ದೊಡ್ಡ ಹೆಜ್ಜೆಯು ಈಗಾಗಲೇ ಎಲ್ಲರ ಗಮನ ಸೆಳೆದಿತ್ತು. ಕಳೆದ 5 ವಾರಗಳಿಂದ ಸ್ವಚ್ಛತಾ ಅಭಿಯಾನ, ಜಾಗೃತಿ ನಡೆಯುತ್ತಿದೆ. ಇದೀಗ ಜಾಗೃತಿ ಅಭಿಯಾನದ ಇಂಪ್ಯಾಕ್ಟ್‌ ಬಗ್ಗೆ ಮಾತುಕತೆ ಆರಂಭವಾಗಿದೆ. ಇನ್ನೀಗ ನಿಯಮಗಳ ಜಾರಿಗೆ, ದಂಡನೆ ಬಗ್ಗೆ ಗ್ರಾಮ ಪಂಚಾಯತ್‌ ಹಾಗೂ ಸ್ಥಳೀಯ ಆಡಳಿತವು ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಗಮನಹರಿಸಬೇಕಿದೆ.

ಸ್ವಚ್ಛತಾ ಅಭಿಯಾನ, ಪ್ಲಾಸ್ಟಿಕ್‌ ಮುಕ್ತ ಗ್ರಾಮ ಈ ಕನಸುಗಳೊಂದಿಗೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಆರಂಭಗೊಂಡ ಟಾಸ್ಕ್‌ ಫೋರ್ಸ್‌ ಕೆಲಸ ಮುಂದುವರಿದಿದೆ. ಕಳೆದ 5 ವಾರಗಳಿಂದ ಪ್ರತೀ ವಾರ ಜಾಗೃತಿ ಅಭಿಯಾನ ನಡೆಸುತ್ತಿತ್ತು. ಇದೀಗ ಈ ಅಭಿಯಾನದ ಪರಿಣಾಮ ಗುತ್ತಿಗಾರಿನ ಪುಟ್ಟ ಹಳ್ಳಿಯಲ್ಲಿ ಕೆಲವು ಅಂಗಡಿಗಳ ಮುಂದೆ ಸ್ವಚ್ಛತೆಯ ಪರಿಣಾಮ ಕಂಡುಬಂದಿದೆ. ಗುತ್ತಿಗಾರಿನ ಬಹುತೇಕ ವರ್ತಕರು ಈ ಅಭಿಯಾನಕ್ಕೆ ಕೆಲಸ ಮೂಲಕ ಬೆಂಬಲ ಸೂಚಿಸಿದ್ದಾರೆ.

Advertisement
Advertisement
ವರ್ತಕರಿಂದಲೇ ಸ್ವಚ್ಛವಾಗಿರುವ ಗುತ್ತಿಗಾರು ಪೇಟೆ
ಹೊಂಬೆಳಕು ತಂಡದಿಂದ ಸ್ವಚ್ಛವಾಗಿರುವ ಬಸ್‌ ತಂಗುದಾಣ

ಗುತ್ತಿಗಾರಿನ ಸಂಜೀವಿನ ಮಹಿಳಾ ಒಕ್ಕೂಟ, ವರ್ತಕ ಸಂಘ ಗುತ್ತಿಗಾರು ಮತ್ತು ಗುತ್ತಿಗಾರು ಗ್ರಾಮ ಪಂಚಾಯತ್‌  ಹಾಗೂ ಇತರ ಎಲ್ಲಾ ಸಂಘಸಂಸ್ಥೆಗಳ ಮೂಲಕ ರಚನೆಗೊಂಡ ಟಾಸ್ಕ್‌ ಫೋರ್ಸ್‌ ಕಳೆದ 5 ವಾರಗಳಿಂದ ಗುತ್ತಿಗಾರು ಪೇಟೆಯಲ್ಲಿ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಸುತ್ತಿತ್ತು. ಪ್ರತೀ ಗುರುವಾರ ಟಾಸ್ಕ್‌ ಫೋರ್ಸ್‌ ತಂಡ ಸದಸ್ಯರು ಗುತ್ತಿಗಾರು ಪೇಟೆಯಲ್ಲಿ ತೆರಳಿ ಅಂಗಡಿಗಳ ಮಾಲೀಕರಿಗೆ ಸ್ವಚ್ಛತಾ ಜಾಗೃತಿ ಬಗ್ಗೆ ತಿಳಿಸುತ್ತಿದ್ದರು. ಪ್ಲಾಸ್ಟಿಕ್‌ ಮುಕ್ತ ಗ್ರಾಮಕ್ಕಾಗಿ ಕೆಲಸ ಮಾಡುತ್ತಿದ್ದರು. ಇದೀಗ 5 ನೇ ವಾರದ ಅಭಿಯಾನದ ವೇಳೆ ಬಹುತೇಕ ವರ್ತಕರು ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಕಂಡುಬಂದಿದೆ. ಅಂಗಡಿಗಳ ಮುಂದೆ ಸ್ವಚ್ಛತೆಯನ್ನು ಕಾಯ್ದುಕೊಂಡಿರುವುದು ಕಂಡುಬಂದಿದೆ. ಸ್ವಚ್ಛ ಗುತ್ತಿಗಾರು ಯೋಜನೆಗೆ ಅಗತ್ಯ ಎನ್ನುವುದನ್ನೂ ಹೇಳುತ್ತಿದ್ದಾರೆ. ಇದೇ ವೇಳೆ ವಿವಿಧ ಸಂಘಸಂಸ್ಥೆಗಳೂ ಸ್ವಚ್ಛತಾ ಅಭಿಯಾನಕ್ಕೆ ಬೆಂಬಲಿಸಿದ್ದಾರೆ. ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸಂಘಟನೆಗಳು ಅವರ ಬಿಡುವಿನ ವೇಳೆ ತಮ್ಮದೇ ಮಾದರಿಯಲ್ಲಿ ಕೆಲಸ ಮಾಡುತ್ತಿವೆ.  ಹೊಂಬೆಳಕು ತಂಡವು ಈಚೆಗೆ ಬಸ್‌ ನಿಲ್ದಾಣ ಸ್ವಚ್ಛತೆಯನ್ನು ಮಾಡಿದ್ದರೆ , ಬಿಎಂಎಸ್‌ ಅಟೋ ಚಾಲಕರ ಸಂಘವು ಕೂಡಾ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿತ್ತು. ಜೀಪು ಚಾಲಕರ ಸಂಘವು ಕೂಡಾ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು.

Advertisement
ವರ್ತಕರಿಂದಲೇ ಸ್ವಚ್ಛವಾಗಿರುವ ಗುತ್ತಿಗಾರು ಪೇಟೆ
ಸ್ವಚ್ಛತಾ ಜಾಗೃತಿ ಪರಿಣಾಮ

ಇನ್ನೀಗ ಸಾರ್ವಜನಿಕರ ನೆರವು ಅತೀ ಅಗತ್ಯವಾಗಿ ಬೇಕಿದೆ. ಸ್ವಚ್ಛ ಗುತ್ತಿಗಾರು ಅಭಿಯಾನಕ್ಕೆ ಸಾರ್ವಜನಿಕರು ನೆರವು ನೀಡಬೇಕಾಗಿದೆ. ಸ್ವಚ್ಛತೆಗಾಗಿ ತಮ್ಮದೇ ಆದ ಕೊಡುಗೆಗಳ ಕಡೆಗೆ ಗಮನಹರಿಸಬೇಕಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ತೊಟ್ಟಿಗಳಲ್ಲಿ ಎಸೆಯುವ ಅಭ್ಯಾಸ ಮಾಡಿಕೊಳ್ಳಬೇಕಿದೆ. ಅದರ ಜೊತೆಗೆ ಪ್ಲಾಸ್ಟಿಕ್‌ ಬದಲಿಗೆ ಬಟ್ಟೆ ಚೀಲಗಳ ಬಳಕೆಯತ್ತ ಮನಸ್ಸು ಮಾಡಬೇಕಿದೆ.

#SwachchBharath | ಸ್ವಚ್ಛತೆಗಾಗಿ ಟಾಸ್ಕ್‌ಫೋರ್ಸ್‌ | ಪ್ಲಾಸ್ಟಿಕ್‌ ಮುಕ್ತ ಜಾಗೃತಿ ಅಭಿಯಾನ | ಸ್ವಚ್ಛತೆಯ ಬಗ್ಗೆ ಅರಿವು | ಪುಟ್ಟ ಗ್ರಾಮದ ದೊಡ್ಡ ಹೆಜ್ಜೆ… |

Advertisement

ಇದರ ಜೊತೆಗೆ ಅತೀ ಮುಖ್ಯವಾಗಿ ಗ್ರಾಮ ಪಂಚಾಯತ್‌ ಆಡಳಿತವು ಸಂಪೂರ್ಣವಾದ ನೆರವು ಈ ಟಾಸ್ಕ್‌ಫೋರ್ಸ್ ಯಾಚಿಸುತ್ತದೆ. 5 ವಾರಗಳ ಅಭಿಯಾನದ ಬಳಿಕ ಕಸ ಎಸೆದರೆ ದಂಡನೆ, ತ್ಯಾಜ್ಯ ಎಸೆಯದಂತೆ ಜಾಗೃತಿ ಫಲಕ, ದಂಡನೆಯ ಎಚ್ಚರಿಕೆ ಇತ್ಯಾದಿಗಳ ಕಾನೂನು ಕ್ರಮಗಳ ಬಗ್ಗೆ ಪಂಚಾಯತ್‌ ಮುತುವರ್ಜಿ ವಹಿಸಬೇಕಿದೆ. ಈ ಮೂಲಕ ದೇಶದ ಒಂದು ಪುಟ್ಟ ಹಳ್ಳಿಯ ಸ್ವಚ್ಛತಾ ಅಭಿಯಾನ, ಸ್ವಚ್ಛತಾ ಉದ್ದೇಶಗಳನ್ನು ಮಾದರಿಯಾಗಿಸುವ ಪಾತ್ರಕ್ಕೆ ಗ್ರಾಮ ಪಂಚಾಯತ್‌ ಹಾಗೂ ಇತರ ಆಡಳಿತಗಳ ನೆರವು ಬೇಕಿದೆ.

Advertisement
ವರ್ತಕರಿಂದಲೇ ಸ್ವಚ್ಛವಾಗಿರುವ ಗುತ್ತಿಗಾರು ಪೇಟೆ
ಗುತ್ತಿಗಾರು ಪೇಟೆಯ ದೃಶ್ಯ
ವರ್ತಕರಿಂದಲೇ ಸ್ವಚ್ಛವಾಗಿರುವ ಗುತ್ತಿಗಾರು ಅಂಗಡಿ

 

Advertisement

#NoPlastic | ಪ್ಲಾಸ್ಟಿಕ್‌ ಬ್ಯಾಗ್‌ ಬಿಡಿ, ಬಟ್ಟೆ ಚೀಲ ಹಿಡಿಯಿರಿ…. | ಮಹಿಳೆಯರು ಆರಂಭಿಸಿದ ಬಟ್ಟೆ ಚೀಲ ಗೃಹೋದ್ಯಮ |

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ | ಬಿಸಿಲು ಜಾಸ್ತಿ ಎಂದು ಜಗಲಿ ಕಟ್ಟೆಯಲ್ಲಿ ಕುಳಿತು ಮಾತನಾಡಿದರೆ ಪ್ರಯೋಜನವಿಲ್ಲ…! |
May 1, 2024
5:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror