ಸ್ವಚ್ಛತಾ ಅಭಿಯಾನ, ಪ್ಲಾಸ್ಟಿಕ್ ಮುಕ್ತ ಗ್ರಾಮ ಈ ಕನಸುಗಳೊಂದಿಗೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಆರಂಭಗೊಂಡ ಟಾಸ್ಕ್ ಫೋರ್ಸ್ ಕೆಲಸ ಮುಂದುವರಿದಿದೆ. ಕಳೆದ 5 ವಾರಗಳಿಂದ ಪ್ರತೀ ವಾರ ಜಾಗೃತಿ ಅಭಿಯಾನ ನಡೆಸುತ್ತಿತ್ತು. ಇದೀಗ ಈ ಅಭಿಯಾನದ ಪರಿಣಾಮ ಗುತ್ತಿಗಾರಿನ ಪುಟ್ಟ ಹಳ್ಳಿಯಲ್ಲಿ ಕೆಲವು ಅಂಗಡಿಗಳ ಮುಂದೆ ಸ್ವಚ್ಛತೆಯ ಪರಿಣಾಮ ಕಂಡುಬಂದಿದೆ. ಗುತ್ತಿಗಾರಿನ ಬಹುತೇಕ ವರ್ತಕರು ಈ ಅಭಿಯಾನಕ್ಕೆ ಕೆಲಸ ಮೂಲಕ ಬೆಂಬಲ ಸೂಚಿಸಿದ್ದಾರೆ.
ಗುತ್ತಿಗಾರಿನ ಸಂಜೀವಿನ ಮಹಿಳಾ ಒಕ್ಕೂಟ, ವರ್ತಕ ಸಂಘ ಗುತ್ತಿಗಾರು ಮತ್ತು ಗುತ್ತಿಗಾರು ಗ್ರಾಮ ಪಂಚಾಯತ್ ಹಾಗೂ ಇತರ ಎಲ್ಲಾ ಸಂಘಸಂಸ್ಥೆಗಳ ಮೂಲಕ ರಚನೆಗೊಂಡ ಟಾಸ್ಕ್ ಫೋರ್ಸ್ ಕಳೆದ 5 ವಾರಗಳಿಂದ ಗುತ್ತಿಗಾರು ಪೇಟೆಯಲ್ಲಿ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಸುತ್ತಿತ್ತು. ಪ್ರತೀ ಗುರುವಾರ ಟಾಸ್ಕ್ ಫೋರ್ಸ್ ತಂಡ ಸದಸ್ಯರು ಗುತ್ತಿಗಾರು ಪೇಟೆಯಲ್ಲಿ ತೆರಳಿ ಅಂಗಡಿಗಳ ಮಾಲೀಕರಿಗೆ ಸ್ವಚ್ಛತಾ ಜಾಗೃತಿ ಬಗ್ಗೆ ತಿಳಿಸುತ್ತಿದ್ದರು. ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕಾಗಿ ಕೆಲಸ ಮಾಡುತ್ತಿದ್ದರು. ಇದೀಗ 5 ನೇ ವಾರದ ಅಭಿಯಾನದ ವೇಳೆ ಬಹುತೇಕ ವರ್ತಕರು ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಕಂಡುಬಂದಿದೆ. ಅಂಗಡಿಗಳ ಮುಂದೆ ಸ್ವಚ್ಛತೆಯನ್ನು ಕಾಯ್ದುಕೊಂಡಿರುವುದು ಕಂಡುಬಂದಿದೆ. ಸ್ವಚ್ಛ ಗುತ್ತಿಗಾರು ಯೋಜನೆಗೆ ಅಗತ್ಯ ಎನ್ನುವುದನ್ನೂ ಹೇಳುತ್ತಿದ್ದಾರೆ. ಇದೇ ವೇಳೆ ವಿವಿಧ ಸಂಘಸಂಸ್ಥೆಗಳೂ ಸ್ವಚ್ಛತಾ ಅಭಿಯಾನಕ್ಕೆ ಬೆಂಬಲಿಸಿದ್ದಾರೆ. ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸಂಘಟನೆಗಳು ಅವರ ಬಿಡುವಿನ ವೇಳೆ ತಮ್ಮದೇ ಮಾದರಿಯಲ್ಲಿ ಕೆಲಸ ಮಾಡುತ್ತಿವೆ. ಹೊಂಬೆಳಕು ತಂಡವು ಈಚೆಗೆ ಬಸ್ ನಿಲ್ದಾಣ ಸ್ವಚ್ಛತೆಯನ್ನು ಮಾಡಿದ್ದರೆ , ಬಿಎಂಎಸ್ ಅಟೋ ಚಾಲಕರ ಸಂಘವು ಕೂಡಾ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿತ್ತು. ಜೀಪು ಚಾಲಕರ ಸಂಘವು ಕೂಡಾ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು.
ಇನ್ನೀಗ ಸಾರ್ವಜನಿಕರ ನೆರವು ಅತೀ ಅಗತ್ಯವಾಗಿ ಬೇಕಿದೆ. ಸ್ವಚ್ಛ ಗುತ್ತಿಗಾರು ಅಭಿಯಾನಕ್ಕೆ ಸಾರ್ವಜನಿಕರು ನೆರವು ನೀಡಬೇಕಾಗಿದೆ. ಸ್ವಚ್ಛತೆಗಾಗಿ ತಮ್ಮದೇ ಆದ ಕೊಡುಗೆಗಳ ಕಡೆಗೆ ಗಮನಹರಿಸಬೇಕಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ತೊಟ್ಟಿಗಳಲ್ಲಿ ಎಸೆಯುವ ಅಭ್ಯಾಸ ಮಾಡಿಕೊಳ್ಳಬೇಕಿದೆ. ಅದರ ಜೊತೆಗೆ ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಚೀಲಗಳ ಬಳಕೆಯತ್ತ ಮನಸ್ಸು ಮಾಡಬೇಕಿದೆ.
ಇದರ ಜೊತೆಗೆ ಅತೀ ಮುಖ್ಯವಾಗಿ ಗ್ರಾಮ ಪಂಚಾಯತ್ ಆಡಳಿತವು ಸಂಪೂರ್ಣವಾದ ನೆರವು ಈ ಟಾಸ್ಕ್‌ಫೋರ್ಸ್ ಯಾಚಿಸುತ್ತದೆ. 5 ವಾರಗಳ ಅಭಿಯಾನದ ಬಳಿಕ ಕಸ ಎಸೆದರೆ ದಂಡನೆ, ತ್ಯಾಜ್ಯ ಎಸೆಯದಂತೆ ಜಾಗೃತಿ ಫಲಕ, ದಂಡನೆಯ ಎಚ್ಚರಿಕೆ ಇತ್ಯಾದಿಗಳ ಕಾನೂನು ಕ್ರಮಗಳ ಬಗ್ಗೆ ಪಂಚಾಯತ್ ಮುತುವರ್ಜಿ ವಹಿಸಬೇಕಿದೆ. ಈ ಮೂಲಕ ದೇಶದ ಒಂದು ಪುಟ್ಟ ಹಳ್ಳಿಯ ಸ್ವಚ್ಛತಾ ಅಭಿಯಾನ, ಸ್ವಚ್ಛತಾ ಉದ್ದೇಶಗಳನ್ನು ಮಾದರಿಯಾಗಿಸುವ ಪಾತ್ರಕ್ಕೆ ಗ್ರಾಮ ಪಂಚಾಯತ್ ಹಾಗೂ ಇತರ ಆಡಳಿತಗಳ ನೆರವು ಬೇಕಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…
ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…
ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ ಜೂನ್ 29 ರಿಂದ, …