ಗುತ್ತಿಗಾರು : ವಸಂತ ವೇದ ಶಿಬಿರ ಉದ್ಘಾಟನೆ

April 17, 2022
11:08 AM

ಗುತ್ತಿಗಾರಿನ ಅನೂಚಾನ ವಿದ್ಯಾ ಪ್ರತಿಷ್ಟಾನ  ಹಾಗೂ  ಗುತ್ತಿಗಾರು ಹವ್ಯಕ ವಲಯ ಇದರ ಆಶ್ರಯದಲ್ಲಿ  ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ವಸಂತ ವೇದ ಶಿಬಿರ ಮತ್ತು ಗಾಯತ್ರೀ ಯಜ್ಞ ಪ್ರಾರಂಭವು ನಡೆಯಿತು. ವೇ.ಮೂ.ಕರುವಜೆ ಕೇಶವ ಜೋಯಿಸರು ಶಿಬಿರವನ್ನು ಉದ್ಘಾಟಿಸಿದರು.

ವೇದ ಪರಂಪರೆ ಹಾಗೂ ಭಾರತೀಯ ಪರಂಪರೆಯ ಉಳಿವಿನ ಉದ್ದೇಶದೊಂದಿಗೆ ಕಳೆದ ಹಲವು ವರ್ಷಗಳಿಂದ ವಳಲಂಬೆಯಲ್ಲಿ ನಡೆದುಕೊಂಡು ಬರುತ್ತಿರುವ ವಸಂತ ವೇದ ಶಿಬಿರವು ಶುಕ್ರವಾರ ವಳಲಂಬೆಯಲ್ಲಿ ಉದ್ಘಾಟನೆಗೊಂಡಿತು. ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಸಹಕಾರದೊಂದಿಗೆ ಗುತ್ತಿಗಾರಿನ ಅನೂಚಾನ ವಿದ್ಯಾಪ್ರತಿಷ್ಟಾನ  ಹಾಗೂ  ಗುತ್ತಿಗಾರು ಹವ್ಯಕ ವಲಯ ಇದರ ಆಶ್ರಯದಲ್ಲಿ 20  ದಿನಗಳ ಕಾಲ ನಡೆಯುವ ವಸಂತ ವೇದ ಶಿಬಿರವನ್ನು  ಉದ್ಘಾಟಿಸಿದ ವೇ.ಮೂ.ಕರುವಜೆ ಕೇಶವ ಜೋಯಿಸರು, ಶ್ರದ್ಧಾ, ಮೇಧ, ಪ್ರಜ್ಞಾ ಶಕ್ತಿಯನ್ನು ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳುವ ಮೂಲಕ ಅಂತ:ಶಕ್ತಿ, ಚೈತನ್ಯವನ್ನು ವೃದ್ಧಿಸಿಕೊಳ್ಳಬೇಕು. ಈ ಮೂಲಕ ಜಗತ್ತಿಗೆ ಒಳಿತಾಗುವಂತಹ ಕಾರ್ಯಗಳನ್ನು ಮಾಡಬೇಕಾಗಿದೆ. ವೇದದ ಅಧ್ಯಯನ ಹಾಗೂ ಪಠಣದ ಮೂಲಕ, ನಿತ್ಯಾನುಷ್ಟಾನಗಳ ಮೂಲಕ ಮಾನಸಿಕವಾದ ದೃಢತೆಯನ್ನು , ಚೈತನ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಅನೂಚಾನ ವಿದ್ಯಾಪ್ರತಿಷ್ಟಾನ ಅಧ್ಯಕ್ಷ ಕೃಷ್ಣ ಭಟ್‌ ಗುಂಡಿಮಜಲು ಮಾತನಾಡಿ, ಕೊರೋನಾ ನಂತರ ಎರಡು ವರ್ಷಗಳ ಕಾಲ ವೇದ ಶಿಬಿರದ ಆಯೋಜನೆ ಸಾಧ್ಯವಾಗಿರಲಿಲ್ಲ. ಸಮಾಜದ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ವೇದಿಕೆಯಲ್ಲಿ ಅನೂಚಾನ ವಿದ್ಯಾಪ್ರತಿಷ್ಟಾನದ ಪ್ರಾಚಾರ್ಯ ವೇ.ಮೂ.ಮಹಾಬಲೇಶ್ವರ ಭಟ್‌ ಉಪಸ್ಥಿತರಿದ್ದರು.  ಪ್ರತಿಷ್ಟಾನದ ಕಾರ್ಯದರ್ಶಿ ಶಿವರಾಮ ಕರುವಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ವೇ.ಮೂ.ಕರುವಜೆ ಕೇಶವ ಜೋಯಿಸರ ನೇತೃತ್ವದಲ್ಲಿ ಗಾಯತ್ರೀ  ಯಜ್ಞದ ಮಹಾಸಂಕಲ್ಪ ನೆರವೇರಿತು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror