Advertisement
ಸುದ್ದಿಗಳು

ಒಡಿಶಾದಲ್ಲಿ ಗುಟ್ಕಾ ನಿಷೇಧದ ನಡುವೆಯೂ ಮುಂದುವರಿದ ವ್ಯಾಪಾರ | ₹2.40 ಕೋಟಿ ಮೌಲ್ಯದ ಗುಟ್ಕಾ ವಶಕ್ಕೆ ಪಡೆದ ಅಧಿಕಾರಿಗಳು

Share

ಒಡಿಶಾದಲ್ಲಿ ಗುಟ್ಕಾ ನಿಷೇಧ ಜಾರಿಯಲ್ಲಿದ್ದರೂ, ಅಕ್ರಮ ವ್ಯಾಪಾರ ಮತ್ತು ತೆರಿಗೆ ತಪ್ಪಿಸುವ ಪ್ರಕರಣದ ಹಿನ್ನೆಲೆಯಲ್ಲಿ ಒಡಿಶಾದ ಸಂಬಲ್ಪುರ್ ಜಿಲ್ಲೆಯಲ್ಲಿ ಜಿಎಸ್ಟಿ ಅಧಿಕಾರಿಗಳು ಸುಮಾರು ₹2.40 ಕೋಟಿ ಮೌಲ್ಯದ ಗುಟ್ಕಾ ಸಾಗಾಟವನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣವು ನಿಷೇಧದ ನಡುವೆಯೂ  ಗುಟ್ಕಾ ವ್ಯಾಪಾರ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

Advertisement
Advertisement

ಅಧಿಕಾರಿಗಳ ಪ್ರಕಾರ, ವಶಕ್ಕೆ ಪಡೆದ ಸರಕುಗಳನ್ನು ಜಿಎಸ್ಟಿ ಪಾವತಿಸದೇ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಗುಟ್ಕಾ ಉತ್ಪನ್ನಗಳಿಗೆ ಸಾಮಾನ್ಯವಾಗಿ 18% ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ. ಆದರೆ, ಈ ತೆರಿಗೆಯನ್ನು ತಪ್ಪಿಸುವ ಉದ್ದೇಶದಿಂದ ವ್ಯಾಪಾರಿಗಳು ದಾಖಲೆಗಳಿಲ್ಲದೇ ಸರಕು ಸಾಗಾಟ ನಡೆಸಿದ್ದಾರೆ ಎನ್ನಲಾಗಿದೆ.

ಒಡಿಶಾದಲ್ಲಿ ಗುಟ್ಕಾ ಮೇಲಿನ ನಿಷೇಧದಿಂದ ಬೇಡಿಕೆ ಕಡಿಮೆಯಾಗಿಲ್ಲ. ಹೀಗಾಗಿ ಅಕ್ರಮ ಮಾರ್ಗಗಳಿಂದ ಸರಕು ಸಾಗಾಟ ಮತ್ತು ಮಾರಾಟ ಮತ್ತಷ್ಟು ಹೆಚ್ಚುತ್ತಿದೆ ಎನ್ನುವುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ.  ಸಾರ್ವಜನಿಕ ಆರೋಗ್ಯವನ್ನು ಮುಂದಿಟ್ಟು ಗುಟ್ಕಾ ನಿಷೇಧ ಮಾಡಲಾಗಿತ್ತು. ಆದರೆ, ಗುಟ್ಕಾ ಅಕ್ರಮವಾಗಿ ಹರಿದಾಡುತ್ತಿದೆ, ಜೊತೆಗೆ ಸರ್ಕಾರಕ್ಕೆ ತೆರಿಗೆ ಆದಾಯದಲ್ಲೂ ದೊಡ್ಡ ನಷ್ಟ ಉಂಟಾಗಿದೆ.

ಜಿಎಸ್ಟಿ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು, ಸರಕು ಸಾಗಾಟದಲ್ಲಿ ಭಾಗಿಯಾದವರನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಅಧಿಕಾರಿಗಳು ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ವ್ಯಾಪಾರಗಳ ಮೇಲೆ ಇನ್ನಷ್ಟು ಕಠಿಣ ನಿಗಾ ವಹಿಸುವುದಾಗಿ ತಿಳಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…

30 minutes ago

ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!

ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…

7 hours ago

ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ

ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…

8 hours ago

ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ

ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…

8 hours ago

ಶುದ್ಧ ಹಿಮಾಲಯವೂ ಸುರಕ್ಷಿತವಲ್ಲ..! ಮರುಭೂಮಿ ಧೂಳಿನೊಂದಿಗೆ ಹರಡುವ ರೋಗಕಾರಕಗಳು

ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…

8 hours ago

ಕೃಷಿ ಆಧಾರಿತ ಕೈಗಾರಿಕೆ ಉತ್ತೇಜನದಿಂದ ರೈತರ ಭವಿಷ್ಯ ರೂಪಾಂತರ

ರಾಜಸ್ಥಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ರೈತರ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು…

8 hours ago