ರಾಜ್ಯದಲ್ಲಿ ದೀರ್ಘಕಾಲಿಕ ಕೆಮ್ಮು ಹಾಗೂ ಜ್ವರ ಲಕ್ಷಣದ H3N2 ಸೋಂಕು ಉಲ್ಬಣದ ಆತಂಕದ ಹಿನ್ನೆಲೆಯಲ್ಲಿ ಸೋಮವಾರ ಆರೋಗ್ಯ ಸಚಿವ ಡಾ. ಸುಧಾಕರ್ ತಜ್ಞರ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ದೇಶದಲ್ಲಿ H3N2 ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ. H3N2 ಸೋಂಕಿನ ಬಗ್ಗೆ ಯಾರೂ ಗಾಬರಿಪಡಬೇಕಿಲ್ಲ. ಎಲ್ಲಾ ಆರೋಗ್ಯ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಂದಿನಿಂದಲೇ ಆರೋಗ್ಯ ಸಿಬ್ಬಂದಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ರಾಜ್ಯದಲ್ಲಿ H3N2 ಪ್ರಕರಣಗಳು ಪತ್ತೆಯಾಗಿದೆ. ಇದುವರೆಗೆ 26 ಸೋಂಕು ಪತ್ತೆಯಾಗಿವೆ. ಮಕ್ಕಳು ಹಾಗೂ ಗರ್ಭಿಣಿಯರು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.
ದೀರ್ಘಕಾಲದಿಂದ ಕೆಮ್ಮು ಹಾಗೂ ಜ್ವರದ ಲಕ್ಷಣ ಇದ್ದರೆ H3N2 ವೈರಸ್ ಕಾರಣವಾಗಿರಬಹುದು. ದೇಶಾದ್ಯಂತ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ರೋಗಲಕ್ಷಣ ಉಂಟಾದರೆ ಪರೀಕ್ಷೆ ನಡೆಸಿ ಔಷಧಿ ಪಡೆಯುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಎಚ್ಚರಿಕೆ ನೀಡಿದೆ.
ಬೇಸಿಗೆ ಪ್ರವೇಶದಿಂದ ತಾಪಮಾನ ಏರಿಕೆಯ ಕಾರಣದಿಂದ ಬಿಸಿಗಾಳಿಗೆ ಸಾಕಷ್ಟು ಜನರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಸಿಲಿನಲ್ಲಿ ಓಡಾಟ ಕಡಿಮೆ ಮಾಡಿ. ಹೆಚ್ಚು ನೀರನ್ನು ಪ್ರತಿನಿತ್ಯ ಕುಡಿಯಬೇಕು ಎಂದು ಮನವಿ ಮಾಡಿದರು. H3N2 ಇದು ಅಪಾಯಕಾರಿ ಅಲ್ಲ, ಕೋವಿಡ್ ಬಂದವರಿಗೆ ಸ್ವಲ್ಪ ದೀರ್ಘ ಕಾಲದ ಕೆಮ್ಮು ಇರುತ್ತದೆ. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಆದರೆ ಸಾಂಕ್ರಾಮಿಕ ಹರಡುವ ಅಪಾಯ ಇದೆ ಎಂದು ಹೇಳಿದರು.
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ "ಮಹಿಳಾ ಗ್ರಾಮಸಭೆ" ಯು ಈಚೆಗೆ…
ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ನಡೆದ ಕಲಾ ಸ್ಪರ್ಧೆಯಲ್ಲಿ ಸಂಸ್ಕೃತಿಯ ಚಲನೆ ಎನ್ನುವ ಕಲಾ…