ಕಲಬುರಗಿ, ಬೀದರ್, ರಾಯಚೂರು, ವಿಜಯಪುರ, ಕೋಲಾರ, ತುಮಕೂರು ಸೇರಿ ರಾಜ್ಯದ ವಿವಿಧೆಡೆ ಆಲಿಕಲ್ಲು ಮಳೆಯಾಗಿದೆ. ರಾಜಧಾನಿಯಲ್ಲೂ ರಾತ್ರಿ ವರ್ಷದ ಮೊದಲ ಮಳೆಯಾಗಿದೆ. ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪೆರದಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಗಡಿ ಭಾಗದ ಗ್ರಾಮದಲ್ಲಿ ಮೊದಲ ಮಳೆ ಜೊತೆ ಆಲಿಕಲ್ಲು ಮಳೆ ಸುರಿದಿದೆ.
ಗುರುವಾರ ಸುರಿದ ಆಲಿಕಲ್ಲು ಮಳೆ ತಂಪೆರೆದಿದೆ. ಬೇಸಿಗೆಯ ಆರಂಭದಿಂದಲೇ ಪ್ರಖರ ಬಿಸಿಲಿನಿಂದ ಬಸವಳಿದಿದ್ದ. ಗಡಿ ಗ್ರಾಮಗಳಲ್ಲಿ ಮಧ್ಯಾಹ್ನ ಆಲಿಕಲ್ಲು ಮಳೆಯಾಗಿದೆ. ಗ್ರಾಮಗಳಲ್ಲಿ ಮಂಜಿನಹಾಸಿನಂತೆ ಅಲಿಕಲ್ಲುಗಳು ರಾಶಿಯಾಗಿದ್ದವು.
ಬೀದರ್ ಜಿಲ್ಲೆಯ ವಿವಿಧೆಡೆ ಗುಡುಗು–ಮಿಂಚಿನ ಆರ್ಭಟ ಇತ್ತು. ಕೆಲವೆಡೆ ಆಲಿಕಲ್ಲುಗಳು ಬಿದ್ದಿವೆ. ವಿಜಯಪುರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಆಲಿಕಲ್ಲು ಸಹಿತ ಕೋಲಾರ ಜಿಲ್ಲೆ ಕೋಲಾರ, ಮಾಲೂರು, ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲೂಕುಗಳಲ್ಲಿ ಮಳೆಯಾಗಿದೆ. ಹಲವೆಡೆ ಆಲಿಕಲ್ಲು ಬಿದ್ದಿರುವುದು ವರದಿಯಾಗಿದೆ.

ದಿ ರೂರಲ್ ಮಿರರ್.com
ಸುದ್ದಿಗಳನ್ನು theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.
Be the first to comment on "ರಾಜ್ಯದ ಹಲವೆಡೆ ಆಲಿಕಲ್ಲು ಮಳೆ : ಕಾಶ್ಮೀರದಂತಾದ ಕೆಲ ಜಿಲ್ಲೆಗಳು"