ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಹಾಲೆಮಜಲು ಆದರ್ಶ ಯೂತ್ ಕ್ಲಬ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಆಟೋಟ ಸ್ಪರ್ದೆ ಹಾಗೂ ಜನ್ಮಾಷ್ಟಮಿ ಕಾರ್ಯಕ್ರಮ ನಡೆಸಲಾಯಿತು.
ಆದರ್ಶ ಯೂತ್ ಕ್ಲಬ್ ನ ಗೌರವದ್ಯಕ್ಷರಾದ ದಿನೇಶ್ ಹಾಲೆಮಜಲು ಊರಿನ ಹಿರಿಯರಾದ ಚೆನ್ನಪ್ಪ ಗೌಡ ಕುಳ್ಳಂಪ್ಪಾಡಿ. ಪಂಚಾಯತ್ ಸದಸ್ಯೆ ಅನಿತಾ ರಮಾನಂದ ಇವರಿಂದ ದೀಪ ಪ್ರಜ್ವಲನೆಗೊಂಡು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ನಂತರ ಸಮರೋಪ ಕಾರ್ಯಕ್ರಮದಲ್ಲಿ ಕೃಷಿಕ, ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಮಾತನಾಡಿದರು.
ವೇದಿಕೆಯಲ್ಲಿ ಕ್ಲಬ್ ನ ಅದ್ಯಕ್ಷರಾದ ಸತೀಶ್ ಬಂಬುಳಿ, ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಇದರ ಕೋಶಾಧಿಕಾರಿ ಮುರಳಿ ನಳಿಯಾರು, ಪಂಚಾಯತ್ ಉಪಾಧ್ಯಕ್ಷೆ ಭಾರತಿ ಸಾಲ್ತಾಡಿ, ದಾನಿಗಳಾದ ದುಗ್ಗಪ್ಪ ಮಾಸ್ತರ್ ಕುಳ್ಳಂಪ್ಪಾಡಿ, ಪುಷ್ಪ ದೇವಿದಾಸ್ ಬುಡ್ಲೆಗುತ್ತು, ಕಾರ್ಯದರ್ಶಿ ದೀಪಕ್ ಕುಂಭಡ್ಕ ಉಪಸ್ಥಿತರಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಹರಿಶ್ಚಂದ್ರ ಕುಳ್ಳಂಪ್ಪಾಡಿ ಸ್ವಾಗತಿಸಿ ಆಕರ್ಷ್ ಕುಳ್ಳಂಪ್ಪಾಡಿ ವಂದಿಸಿದರು. ಪೂರ್ವದ್ಯಕ್ಷರಾದ ಶಿವಪ್ರಸಾದ್ ಹಾಲೆಮಜಲು, ದುರ್ಗದಾಸ್ ಕಡ್ಲಾರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಾವಳದಲ್ಲಿ ಕಡಲಾಮೆ ಮೊಟ್ಟೆಯಿಂದ ಹೊರ ಬಂದ…
ದಕ್ಷಿಣ ಕನ್ನಡದಲ್ಲಿ ಗುಣಮಟ್ಟದ ಮೀನು ಮರಿ ಕೊರತೆ ನೀಗಿಸಲು ಮಂಗಳೂರಿನಲ್ಲಿ Marine Finfish…
ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ನೀಡಬೇಕೆಂದು…
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…