ಇಸ್ರೇಲ್‌ ಜೊತೆ ಯುದ್ಧ ಒಪ್ಪಂದಕ್ಕೆ ಮುಂದಾದ ಹಮಾಸ್‌ : 50 ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ 4 ದಿನ ಯುದ್ಧ ವಿರಾಮ: ಇಸ್ರೇಲ್ ಒಪ್ಪಿಗೆ

November 22, 2023
11:55 AM

ಇಸ್ರೇಲ್‌(Israel) ಮತ್ತು ಪ್ಯಾಲೆಸ್ತೀನ್‌(Palestine) ನಡುವೆ 45 ದಿನಗಳಿಂದ ಯುದ್ಧ ನಡೆಯುತ್ತಿದ್ದು, ಹಮಾಸ್(Hamas)ಅಧಿಕಾರಿಗಳು ಇಸ್ರೇಲ್‌ನೊಂದಿಗೆ ಯುದ್ಧ ಒಪ್ಪಂದಕ್ಕೆ ಸಮೀಪಿಸುತ್ತಿರುವುದಾಗಿ ಹಮಾಸ್‌ ನಾಯಕ ಇಸ್ಮಾಯಿಲ್ ಹನಿಯೆಹ್ ಹೇಳಿದ್ದಾರೆ. ಯುದ್ಧದ ಬಗ್ಗೆ ಕತಾರ್‌ನ(Qatar) ಮಧ್ಯವರ್ತಿಗಳ ಮೂಲಕ ಮಾತುಕತೆ ನಡೆಯುತ್ತಿದೆ. ಈಗ ಗಾಝಾದ(Gaza) ಹಮಾಸ್ ಗುಂಪಿನ ವಶದಲ್ಲಿರುವ 50 ಒತ್ತೆಯಾಳುಗಳ(hostages) ಬಿಡುಗಡೆಗೆ(release) ಪ್ರತಿಯಾಗಿ ನಾಲ್ಕು ದಿನಗಳ ಯುದ್ದ ವಿರಾಮಕ್ಕೆ(ceasefire) ಇಸ್ರೇಲ್ ಸರ್ಕಾರ ಮತ್ತು ಹಮಾಸ್ ಬುಧವಾರ ಒಪ್ಪಿಕೊಂಡಿವೆ.

Advertisement
Advertisement

ಹಮಾಸ್ ಗುಂಪು ವಿದೇಶಿಗರು ಸೇರಿದಂತೆ ಇಸ್ರೇಲ್‌ ಮೂಲದ 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ, ಅತ್ತ ಇಸ್ರೇಲ್‌ ಸರ್ಕಾರ ಗಾಝಾದ 150 ಯುದ್ದ ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ. ಕತಾರ್ ಮತ್ತು ಅಮೆರಿಕದ ಅಧಿಕಾರಿಗಳು ಇಸ್ರೇಲ್ ಸರ್ಕಾರ ಹಾಗೂ ಹಮಾಸ್‌ ನಡುವಿನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದರು. ಎರಡೂ ಕಡೆಯ ಮಾತುಕತೆ ಸಫಲವಾದ ಬಳಿಕ ಗಾಝಾದ ಯುದ್ದ ಕೈದಿಗಳನ್ನು ಬಿಡುಗಡೆ ಮಾಡಲು ಇಸ್ರೇಲ್ ಸಂಸತ್ ಕೂಡ ಒಪ್ಪಿಕೊಂಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಾರ್ಯಾಲಯ ತಿಳಿಸಿದೆ.

Advertisement

ಬಿಡುಗಡೆಯಾಗುವ ಪ್ರತೀ 10 ಹೆಚ್ಚುವರಿ ಒತ್ತೆಯಾಳುಗಳಿಗೆ ಪ್ರತಿಯಾಗಿ ಯುದ್ಧ ವಿರಾಮವನ್ನು ಇನ್ನೊಂದು ದಿನಕ್ಕೆ ವಿಸ್ತರಿಸಲಾಗುವುದು. ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಾವು ಬದ್ದರಾಗಿದ್ದೇವೆ ಎಂದು ಇಸ್ರೇಲ್ ಸರ್ಕಾರ ತಿಳಿಸಿದೆ. ಅಕ್ಟೋಬರ್ 7ರಂದು ಗಾಝಾದ ಹಮಾಸ್ ಗುಂಪು ಇಸ್ರೇಲ್‌ ಮೇಲೆ ಏಕಾಏಕಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಇಸ್ರೇಲ್‌ 1,200 ಜನರು ಬಲಿಯಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಸರ್ಕಾರ ಹಮಾಸ್‌ ಜೊತೆ ಯುದ್ದ ಸಾರಿದೆ. ಕಳೆದ ಒಂದುವರೆ ತಿಂಗಳಿನಿಂದ ನಡೆಯುತ್ತಿರುವ ಸಮರದಲ್ಲಿ ಗಾಝಾದ 11 ಸಾವಿರಕ್ಕೂ ಅಧಿಕ ನಾಗರಿಕರು ಬಲಿಯಾಗಿದ್ದಾರೆ.

ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದ್ದಾಗ ವಿದೇಶಿಗರು ಸೇರಿದಂತೆ 200 ಅಧಿಕ ಜನರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ. ಅವರೆಲ್ಲರನ್ನು ಬಿಡುಗಡೆ ಮಾಡುವವರೆಗೆ ಯುದ್ಧ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಹೇಳಿದೆ.

Advertisement

The war between Israel and Palestine has been going on for 45 days, Hamas leader Ismail Haniyeh has said that Hamas officials are approaching a war agreement with Israel. The war is being negotiated through Qatari intermediaries. The government of Israel and Hamas on Wednesday agreed to a four-day ceasefire in exchange for the release of 50 hostages now held by the Hamas group in Gaza.

– ಅಂತರ್ಜಾಲ ಮಾಹಿತಿ

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮುಂದಿನ 10 ದಿನಗಳ ಹವಾಮಾನ ಪರಿಸ್ಥಿತಿ ಹೇಗಾಗುತ್ತದೆ…? | ದಕ್ಷಿಣ ಭಾರತದಲ್ಲಿ ಭಾರೀ ಮಳೆಯ ಎಚ್ಚರಿಕೆ | ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು…?
May 17, 2024
11:32 AM
by: ದ ರೂರಲ್ ಮಿರರ್.ಕಾಂ
ಸಮಾಜಕ್ಕೆ ಸೇವೆ ಮಾಡುವುದು ಎಂದರೆ ಹಲವು ಆಯಾಮಗಳಿವೆ | ಹವಾಮಾನ ಹೇಳುವುದೂ ಒಂದು ಸೇವೆ |
May 17, 2024
11:12 AM
by: ದ ರೂರಲ್ ಮಿರರ್.ಕಾಂ
ಮುಳಿಯ ಚಿನ್ನೋತ್ಸವ | ಸ್ಪೆಷಲ್ ರುದ್ರಾಕ್ಷಿ ಕಲೆಕ್ಷನ್ ಅನಾವರಣ
May 17, 2024
10:54 AM
by: ದ ರೂರಲ್ ಮಿರರ್.ಕಾಂ
ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ | ಯುವ ಕೃಷಿಕರಿಗೆ ಕೃಷಿ ಬಗ್ಗೆ ಮಾಹಿತಿ
May 16, 2024
5:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror