Advertisement
ನೇಸರ

ಹನುಮಗಿರಿಯ ಪಂಚಮುಖಿ ಆಂಜನೇಯನ ಶಕ್ತಿ ಎಂತಹದ್ದು….!

Share
ಚ್ಚ ಹಸುರಿನಿಂದ ಕೂಡಿದ ಮಲೆನಾಡು ಅನೇಕ  ದೇವಾಲಯಗಳ ತಾಣವೂ ಹೌದು.ಇದಕ್ಕೆ ಹೊಸದಾಗಿ ಸೇರ್ಪಡೆಯಾಗಿದೆ ಪಂಚಮುಖಿ ಆಂಜನೇಯದೇವಸ್ಥಾನ.
Advertisement
Advertisement

ದಕ್ಷಿಣಕನ್ನಡದ ಪುತ್ತೂರಿನಿಂದ ಕಾವು ಮಾರ್ಗವಾಗಿ ಸುಮಾರು 22 ಕಿಲೋಮೀಟರ್ ಸಾಗಿದಾಗ ಸಿಗುತ್ತದೆ ಈಶ್ವರಮಂಗಲ ಎನ್ನುವ ಪುಟ್ಟಊರು. ಇಲ್ಲಿಗೆ ಸಮೀಪದಲ್ಲಿದೆ ಹನುಮಗಿರಿ ಬೆಟ್ಟ.ರಾಮಭಕ್ತ ಇಲ್ಲಿ ಹನುಮಂತ, ವರಾಹ, ನರಸಿಂಹ, ಹಯಗ್ರೀವ ಮತ್ತುಗರುಡ ಹೀಗೆ ಐದು ಮುಖಗಳನ್ನೊಳಗೊಂಡು ಪಂಚಮುಖಿ ಆಂಜನೇಯನಾಗಿ ನೆಲೆಸಿ ಭಕ್ತರನ್ನು ಪೊರೆಯುತ್ತಿದ್ದಾನೆ.

Advertisement

ಸುಮಾರು 11 ಅಡಿ ಎತ್ತರವಿರುವ ಆಂಜನೇಯ ವಿಗ್ರಹವನ್ನು ಕೃಷ್ಣ ಶಿಲೆಯಲ್ಲಿ ಕೆತ್ತಲಾಗಿದ್ದುಇದು ಏಕಶಿಲಾ ವಿಗ್ರಹವಾಗಿದೆ. ರಘುಕುಲ ತಿಲಕ ಶ್ರೀ ರಾಮಚಂದ್ರನ ಹತ್ತು ಅಡಿ ಎತ್ತರದ ವಿಗ್ರಹವೂಇಲ್ಲಿದೆ. ಈ ಕ್ಷೇತ್ರ ಶ್ರೀ ರಾಮಾಂಜನೇಯರ ಐಕ್ಯತೆಯನ್ನು ಸಾರುವತಾಣವೂ ಹೌದು.

ಶನಿದೋಷ ನಿವಾರಣೆಗಾಗಿ ಶನಿಪೂಜೆ, ಕಷ್ಟಪರಿಹಾರಕ್ಕಾಗಿ ರಾಶಿಪೂಜೆ, ಆಸೆ ಆಕಾಂಕ್ಷೆಗಳ ಈಡೇರಿಕೆಗಾಗಿ ರಂಗಪೂಜೆ ಹಾಗು ಪವಮಾನ ಪೂಜೆ ಮುಂತಾದ ಸೇವೆಗಳನ್ನು ಶ್ರೀ ದೇವರಿಗೆ ಸಲ್ಲಿಸಲು ಭಕ್ತರಿಗೆ ಅವಕಾಶ ಮಾಡಲಾಗಿದೆ.ಅಲ್ಲದೆ ವಿಶೇಷ ಹಬ್ಬದ ದಿನಗಳಂದು ಜನಮಾನಸದಲ್ಲಿ ಧಾರ್ಮಿಕ ಶ್ರದ್ದಾ ಭಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ರೀತಿಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ವತಿಯಿಂದ ಹಮ್ಮಿಕೊಳ್ಳಲಾಗುತ್ತದೆ. ಭಜನೆ, ಪ್ರವಚನ , ಪಾರಾಯಣಗಳಿಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮಾಹಿತಿಯ ಆಗರ ಈ ದೇವಾಲಯ
ಮಹಾದ್ವಾರ ಪ್ರವೇಶಿಸಿದಂತೆ ಎರಡೂ ಬದಿಯಲ್ಲಿದೇವಾಲಯದ ಒಳ ಹೋಗಲು ಮಟ್ಟಿಲುಗಳಿವೆ. ಇದಕ್ಕೆ ಹೊಂದಿಕೊಂಡಂತಿರುವ ಗೋಡೆಗಳಲ್ಲಿ ಆಂಜನೇಯನ ಬಾಲ್ಯ, ರಾಮಾಯಣದಲ್ಲಿ ಬರುವ ಕತೆಗಳನ್ನು ಸಚಿತ್ರವಾಗಿ ವಿವರಿಸುವ ಕೆತ್ತನೆಗಳನ್ನು ಮಾಡಲಾಗಿದೆ.ಹೊರಾಂಗಣದಲ್ಲಿ ಮಾತ್ರವಲ್ಲ, ದೇವಾಲಯದ ಒಳಗೆ ಪ್ರವೇಶಿಸಿದ ನಂತರವೂ ಆಂಜನೇಯ ಹನುಮಗಿರಿಯಲ್ಲಿ ಬಂದು ನೆಲೆ ನಿಲ್ಲಲುಕಾರಣವಾದ ಪೌರಾಣಿಕ ಹಿನ್ನಲೆಗಳನ್ನೊಳಗೊಂಡಿರುವ ಕಥೆಗಳನ್ನು ಕಾಣಬಹುದು.ಇನ್ನುದೇವಸ್ಥಾನದ ಹೊರಗಡೆ ಇರುವ ರಾಮಾಯಣ ಮಾನಸೋದ್ಯಾನದಲ್ಲಿ ಶ್ರೀ ರಾಮಚಂದ್ರನ ಜನನದಿಂದ ಬಾಲ್ಯ,ಯೌವನ, ಸೀತಾ ಸ್ವಯಂವರ, ಶ್ರೀರಾಮ ಪಟ್ಟಾಭಿಷೇಕ ಸಿದ್ದತೆ, ಶ್ರೀರಾಮ ವನಾಭಿಗಮನ, ಸೀತಾಪಹರಣ, ರಾವಣನ ಸಂಹಾರ , ಶ್ರೀರಾಮ ಪಟ್ಟಾಭಿಷೇಕ ಹೀಗೆ ರಾಮಾಯಣದಲ್ಲಿ ಬರುವ ಪ್ರಮುಖ ಘಟನೆಗಳನ್ನು ವಿವರಿಸುವಂತಹ ಶಿಲ್ಪಕಲೆಯನ್ನು ಕಾಣಬಹುದು. ಮಕ್ಕಳಿಗೆ ಸುಲಭವಾಗಿಅರ್ಥವಾಗುವಂತೆರಾಮಾಯಣದ ಕತೆಗಳನ್ನು ಹೇಳಬಹುದಾದ ಈ ಜಾಗ ಒಳ್ಳೆಯ ಪಿಕ್‍ನಿಕ್‍ತಾಣವೂ ಹೌದು

 

Advertisement

ಓಡಾಡಲು ವಿಶಾಲವಾದ ಅಂಗಣ, ಮಕ್ಕಳಿಗಾಗಿ ಮಾಡಲಾದ ಪಾರ್ಕ್, ಒಂದುಕಡೆ ನಿಂತು ನೋಡಿದರೆ ಕಾಣಸಿಗುವ ಬೆಟ್ಟಗುಡ್ಡಗಳ ಸಾಲುಗಳು, ಸಂಜೆಯ ಹೊತ್ತಿಗೆ ಬೀಸುವ ತಂಪಾದ ಗಾಳಿ ಕಣ್ಮನಕ್ಕೆ ಮುದಕೊಡುವಂತಿದೆ. ಮದ್ಯಾಹ್ನ ದೇವಸ್ಥಾನದ ವತಿಯಿಂದ ಊಟದ ವ್ಯವಸ್ಥೆಯೂಇದೆ.ಗೋವುಗಳ ಸಂರಕ್ಷಣೆಗೆ ಗೋ ಶಾಲೆಯೂ ಇಲ್ಲಿದೆ.ಇಲ್ಲಿ ಬಂದು ಭಕ್ತಿಯಿಂದ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿದರೆ ಆರೋಗ್ಯದ ಸಮಸ್ಯೆಗಳು ಪರಿಹಾರವಾಗುತ್ತದೆ ಅಲ್ಲದೇ ಬೇಡಿದ್ದನ್ನುಆಂಜನೇಯ ಈಡೇರಿಸುತ್ತಾನೆ ಎನ್ನುವ ಮಾತುಗಳಿವೆ.

# ವಂದನಾರವಿ ಕೆ.ವೈ.ವೇಣೂರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

20 ಕೃಷಿ ಉತ್ಪನ್ನಗಳ ರಫ್ತುಗಳಿಗೆ ಉತ್ತೇಜನ ನೀಡುವ ಯೋಜನೆ |

ಬಾಳೆಹಣ್ಣು, ಮಾವು, ಆಲೂಗಡ್ಡೆ ಮತ್ತು ಬೇಬಿ ಕಾರ್ನ್ ಸೇರಿದಂತೆ 20 ಕೃಷಿ ಉತ್ಪನ್ನಗಳ …

7 hours ago

Karnataka Weather | 27-04-2024 | ಮೋಡ- ಬಿಸಿಗಾಳಿ | ಮಳೆ ಸಾಧ್ಯತೆ ಕಡಿಮೆ |

ಈಗಿನಂತೆ ಎಪ್ರಿಲ್ 29 ಹಾಗೂ 30ರಂದು ಉತ್ತರ ಒಳನಾಡು, ದಕ್ಷಿಣ ಕರಾವಳಿ ಹಾಗೂ…

13 hours ago

ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |

ಚುನಾವಣಾ ಸಮಯದಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು…

14 hours ago

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?

ದೇಸೀ ಗೋವು ಅದರಲ್ಲೂ ಮಲೆನಾಡು ಗಿಡ್ಡ ತಳಿಯ ಹಸು ಉಳಿಯಬೇಕು, ಅದರ ಉಳಿವು…

2 days ago

ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!

ದಿನದಿಂದ ದಿನಕ್ಕೆ ತಾಪಮಾನ(Temperature) ಏರುತ್ತಿದೆ. ಬಿಸಿ ಗಾಳಿ(Heat wave) ಬೀಸುತ್ತಿದೆ. ನೀರಿಗೆ ಅಭಾವ(Water…

2 days ago

ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ

ವಿಶ್ವ ವಿದ್ಯಾಲಯ ಕಾಲೇಜು, ನೆಲ್ಯಾಡಿಯ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ…

2 days ago