ಹೊಸ ವರ್ಷದ ಶುಭಾಶಯಗಳು(Happy New Year), 2023 ವರ್ಷ ಮುಗಿದೇ ಹೋಯಿತು…. 2024ರ ವರ್ಷ ಇಂದಿನ ದಿನದಿಂದ ಪ್ರಾರಂಭವಾಯಿತು. ಹೊಸ ಸಾಹಸದಿಂದ ಹಿಡಿದ ಕೆಲಸ ಮುಂದುವರೆಸು. ಒಂದು ದಿನ ಅಥವಾ ಅಲ್ಪ ಸಮಯದಲ್ಲೇ ಜಯಗಳಿಸುವೆನೆಂದು ಯಾವಾಗಲೂ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡ ನಾನು ಯಾವಾಗಲೂ ಅತ್ಯುನ್ನತವಾದ ಆದರ್ಶವನ್ನೇ ಆಶ್ರಯಿಸುತ್ತೇನೆ ಹಾಗೂ ಸ್ಥಿರವಾಗಿರುತ್ತೇನೆಂದು ನಿಶ್ಚಯ ಮಾಡಿಕೋ, ಅಸೂಯೆ, ಸ್ವಾರ್ಥವನ್ನು ತೊರೆದು, ನನ್ನ ದೇಶಕ್ಕೆ ಮತ್ತು ಮಾನವತೆಗೆ ನಿರಂತರವಾಗಿ ವಿಧೇಯನಾಗಿರುತ್ತೇನೆಂದು ಮತ್ತು ಸತ್ಯ ನಿಷ್ಠೆಗೆ ಬದ್ಧನಾಗಿರುತ್ತೇನೆಂದು ನಿಶ್ಚಯಿಸು ಆಗ ಜಗತ್ತನ್ನೇ ಅಲ್ಲಾಡಿಸುವ ಶಕ್ತಿಯನ್ನು ಆ ಭಗವಂತನೇ ನಿನಗೆ ಕರುಣಿಸುತ್ತಾನೆ.
ನಿನ್ನ ಮನಸ್ಸಿನಲ್ಲಿ ಅಹಂಕಾರವೇನಾದರೂ ಬಂದರೆ ನಿನ್ನ ಹತ್ತಿರದಲ್ಲಿ ಇರುವ ಸ್ಮಶಾನಕ್ಕೆ ಒಮ್ಮೆಭೇಟಿ ಕೊಡು ಅಲ್ಲಿ ನಿನಗಿಂತ ಶ್ರೀಮಂತ, ಶಕ್ತಿವಂತ, ಸೌಂದರ್ಯವಂತ, ಹಾಗೂ ನಿನಗಿಂತ ಬಲಾಡ್ಯ ದೇಹವನ್ನು ಹೊ०ದಿದಂತಹ ವ್ಯಕ್ತಿ ,6×3,ಅಡಿ, ಮಣ್ಣಲ್ಲಿ ಮಣ್ಣಾಗಿ ಹೋಗಿದ್ದರೆ ಅಥವಾ ಕಟ್ಟಿಗೆಯ ನಡುವೆ ಬೂದಿಯಾಗುತ್ತಿದ್ದರೆ, ಒಂದಲ್ಲ ಒಂದು ದಿನ ನಿನಗೂ ಅದೇ ಸ್ಥಳಕ್ಕೆ ಹೋಗಲಿಕ್ಕೆ ಇದೆ. ಇದನ್ನು ಅರ್ಥಮಾಡಿಕೊಂಡವನ ಮನಸ್ಸಿನಲ್ಲಿ ಒಂದು ಅಣುವಿನಷ್ಟು ಅಹಂಕಾರ ಬರಲಾರದು.
ಚಿಂತಿಸುವವನಿಗೆ ದೃಷ್ಟಾಂತವಿದೆ. ನಮಗೆ ಸಿಹಿಯ ರುಚಿ ಅರಿವಾಗಬೇಕೆಂದರೆ ಮೊದಲು ಕಹಿಯ ಅನುಭವ ಇರಬೇಕು, ಕಷ್ಟದ ಬೆಲೆ ತಿಳಿದಿದ್ದರೆ ಸುಖದ ಅನುಭವ ಪ್ರತಿಫಲ ಏನು ಎಂದು ತಿಳಿಯುತ್ತದೆ. ಅರ್ಥ ಮಾಡಿಕೊಂಡರೆ ಜೀವನ ತುಂಬ ಸುಂದರ, ಸಹಾಯ ಪಡೆದವರನ್ನು ಎಂದಿಗೂ ಮರೆಯಬಾರದು,
ಸಹಾಯ ಮಾಡಿದರೆ ಅದನ್ನು ಪದೇ ಪದೇ ನೆನಪಿಸಬಾರದು. ನಮ್ಮ ಶಕ್ತಿ ಹೆಚ್ಚಾಗುವುದು ನಮ್ಮ ಗೆಲುವುಗಳಿಂದಲ್ಲ. ಗೆಲುವಿಗಾಗಿ ನಾವುನಡೆಸುವ ಹೋರಾಟಗಳಿಂದ. ಆದುದರಿಂದ ಎಂತಹ ಪರಿಸ್ಥಿಯಲ್ಲೂ ಶರಣಾಗತರಾಗದಿರುವುದೇ ನಿಜವಾದ ಶಕ್ತಿ. ಆ ಅನುಭವ ನಮನ್ನು ಯಶಸ್ಸಿನಿಂದ ಜಗತ್ತಿಗೆ ಪರಿಚಯಿಸುತ್ತದೆ.
ಹಿಂದಿನ ವಷ೯ದ ಕೊನೆಯ ದಿನ ಮುಗಿದು ಹೊಸ ವರ್ಷ ಬಂದೇ ಬಿಟ್ಟಿತು, ನಮ್ಮ ಕಣ್ಣ್ ಗಳಲ್ಲಿ ನೀರು ತಂದವರಿಗೆ ಹಾಗೂ ಮುಖದಲ್ಲಿ ನಗು ತಂದವರಿಗೆ, ಇಬ್ಬರಿಗೂ ಧನ್ಯವಾದಗಳು ಹೇಳುವ ಮನಸ್ಸು ನಮ್ಮದಾಗಬೇಕು. 2024ರ ಹೊಸ ವರ್ಷ ದೊಡ್ಡ ಯಶಸ್ಸಿನ ವರ್ಷ ನಿಮ್ಮದಾಗಲಿ ನಿಮ್ಮ ಕನಸುಗಳು ನನಸಾಗಲಿ..
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…