ಬರಗಾಲದ(Drought) ಹಿನ್ನೆಲೆ ಈ ಬಾರಿ ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿ ನೀರು(Dam water) ಪಾತಾಳಕ್ಕೆ ಇಳಿದಿದೆ. ಇನ್ನು ಬೆಂಗಳೂರು(Bengaluru) ನಗರದ ಜೀವಜಲವಾಗಿರುವ ಕೆಆರ್‌ಎಸ್ ಡ್ಯಾಂನ(KRS Dam) ನೀರು ಈಗಾಗಲೇ ಖಾಲಿಯಾಗಿದೆ. ಬೆಂಗಳೂರು ಹಾಗೂ ಮೈಸೂರಿಗೆ(Mysur) ಜಲಕ್ಷಾಮದ ಭೀತಿ(Water Scarcity) ಇವಾಗಿಂದಲೇ ಆರಂಭವಾಗಿದೆ. ಇನ್ನು ಮಂಂಡ್ಯ ಕೃಷಿಕರಿಗೆ(Mandya Farmers) ನೀರು ಸಿಗುವುದು ದೂರದ ಮಾತು. ಈ ಮಧ್ಯೆ ಸರ್ಕಾರ ತಮಿಳುನಾಡಿಗೆ(Tamilnadu) ನೀರು ಹರಿಸುತ್ತಿದೆ ಎಂಬ ಆರೋಪ ಕೇಳಿಬಂಂದಿತ್ತು. ಇದೀಗ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆಗಾಗಿ ಹರಿಸಲಾಗಿದೆ ಎಂದು ನೀರಾವರಿ ಇಲಾಖೆ(water department) ಸ್ಪಷ್ಟೀಕರಣ ನೀಡಿದೆ.
ಬೆಂಗಳೂರಿಗೆ ನೀರಿನ ಬರ ಇದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳ ಆರೋಪ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಪ್ರತಿಕಾ ಪ್ರಕಟಣೆ ಹೊರಡಿಸಿದೆ. ”ಇಲಾಖೆಯ ಮೈಸೂರು ವಿಭಾಗ ಹಾಗೂ ಬೆಂಗಳೂರು ನಗರಕ್ಕೆ ಕುಡಿಯಲು ನೀರು ಸರಬರಾಜು ಮಾಡುವ ಉದ್ದೇಶಕ್ಕಾಗಿ ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟೆಯನ್ನು ಉಪಯೋಗಿಸಲಾಗುತ್ತಿದೆ. ಕಾವೇರಿ ನದಿಯಿಂದ ಬೆಂಗಳೂರು, ಮೈಸೂರು ಮತ್ತು ಇತರೆ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯಲು ಹಾಗೂ ಕೈಗಾರಿಕೆಗಳಿಗೆ ಸರಬರಾಜು ಮಾಡಲು ಪ್ರತಿದಿನ ಒಟ್ಟಾರೆ 1000 ಕ್ಯೂಸೆಕ್ನಷ್ಟು ನೀರಿನ ಅಗತ್ಯತೆ ಇದೆ” ಎಂದು ನೀರಾವರಿ ಇಲಾಖೆ ತಿಳಿಸಿದೆ.
ಬೆಂಗಳೂರು ಜಲ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ನೀಡಿರುವ ಮಾಹಿತಿಯಂತೆ ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟೆ ಬಳಿಯಿಂದ ನೀರನ್ನು ತೊರೆಕಾಡನಹಳ್ಳಿವರೆಗೆ ಹರಿಸಿ, ತೊರೆಕಾಡನಹಳ್ಳಿಯಲ್ಲಿ ಸ್ಥಾಪಿಸಿರುವ ಜಲಸ್ಥಾವರ ಮುಖಾಂತರ ಸುಮಾರು 1470 ಎಂಎಲ್ಡಿ (600 ಕ್ಯೂಸೆಕ್ನಷ್ಟು) ನೀರನ್ನು ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿದೆ. ಮಾರ್ಚ್ 6ರಿಂದ 8ವರೆಗೆ ಶಿವಾ ಅಣೆಕಟ್ಟಿನಲ್ಲಿನ ನೀರಿನ ಮಟ್ಟವು ದಿನದಿಂದ ದಿನಕ್ಕೆ ಗಣನೀಯವಾಗಿ ಕಡಿಮೆಯಾಗಿ ಅಣೆಕಟ್ಟೆಯ ಮೇಲ್ಭಾಗದಿಂದ 36 ಇಂಚಿನಷ್ಟು ಕೆಳಮಟ್ಟ ತಲುಪಿದೆ. ಇದರಿಂದ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪ್ರಮಾಣವನ್ನು ಸರಬರಾಜು ಮಾಡಲು ವ್ಯತ್ಯಯವಾಗಿದೆ ಎಂದಿದೆ.
ಮಾರ್ಚ್ 9ರಂದು ಬೆಂಗಳೂರು ಜಲ ಮಂಡಳಿ ಅಧಿಕಾರಿಗಳು ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿ, ನೀರಿನ ಹರಿವಿನ ಪ್ರಮಾಣವನ್ನು ಹೆಚ್ಚಿಸಲು ಕೋರಿದ್ದಾರೆ. ಅದರಂತೆ ಕೆಆರ್‌ಎಸ್ ಜಲಾಶಯದಿಂದ ಹಂತ ಹಂತವಾಗಿ ನೀರನ್ನು ಏರಿಕೆ ಮಾಡಿ, ಸುಮಾರು 4780 ಕ್ಯೂಸೆಕ್ಗಳಷ್ಟು ನೀರನ್ನು ಹರಿಬಿಡಲಾಗಿದೆ. ನಂತರ, ಕೆಆರ್‌ಎಸ್ ಡ್ಯಾಂನಿಂದ ಕಾವೇರಿ ಪಾತ್ರದುದ್ದಕ್ಕೂ ಬೆಂಗಳೂರು ಜಲ ಮಂಡಳಿ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಇಲಾಖೆ ವಿವರಿಸಿದೆ.
ಸಿ.ಡಿ.ಎಸ್. ಅಣೆಕಟ್ಟು, ರಾಮಸ್ವಾಮಿ ಆಣೆಕಟ್ಟು, ಮಾಧವಮಂತ್ರಿ ಅಣೆಕಟ್ಟು, ಮೇದಿನಿ ಅಣೆಕಟ್ಟು, ಸತ್ತೇಗಾಲ ಬಳಿಯಿರುವ ಅಣೆಕಟ್ಟು ಹಾಗೂ ಶಿವಾ ಅಣೆಕಟ್ಟುಗಳನ್ನು ಪರಿವೀಕ್ಷಣೆ ಮಾಡಲಾಗಿದೆ. ಅದರಂತೆ, ಸತ್ತೇಗಾಲ ಅಣೆಕಟ್ಟು ಹಾಗೂ ಶಿವಾ ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ತಳಮಟ್ಟ ತಲುಪಿದ್ದು, ತೀವ್ರ ಕೊರತೆ ಉಂಟಾಗಿದೆ. ಮಾರ್ಚ್ 9ರಂದು ಕೆಆರ್ಎಸ್ನಿಂದ 4780 ಕ್ಯೂಸೆಕ್ ಹಾಗೂ ಕಬಿನಿ ಜಲಾಶಯದಿಂದ 2000 ಕ್ಯೂಸೆಕ್ ನೀರನ್ನು ಹರಿಸಿದ್ದರ ಪರಿಣಾಮ ಮಾರ್ಚ್ 10ರ ಬೆಳಗ್ಗೆ ಶಿವಾ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಅಣೆಕಟ್ಟೆಯ ಮೇಲ್ಭಾಗದಿಂದ 38 ಇಂಚು ಕೆಳಮಟ್ಟದಿಂದ 24 ಇಂಚಿಗೆ ತಲುಪಿದ್ದು (16 ಇಂಚು ಏರಿಕೆ) ನಿಧಾನವಾಗಿ ಏರಿಕೆಯಾಗಿದೆ ಎಂದಿದೆ.
ಮಾರ್ಚ್ 10ರ ಬೆಳಗ್ಗೆ 10 ಗಂಟೆಗೆ ಕೆಆರ್ಎಸ್ನ ನೀರಿನ ಹರಿವಿನ ಪ್ರಮಾಣವನ್ನು 4780 ಕ್ಯೂಸೆಕ್ನಿಂದ 2769 ಕ್ಯೂಸೆಕ್ಗೆ ಇಳಿಕೆ ಮಾಡಲಾಗಿದೆ. ಶಿವಾ ಅಣೆಕಟ್ಟೆಯ ನೀರಿನ ಮಟ್ಟವು ಮಧ್ಯಾಹ್ನ 12 ಗಂಟೆಗೆ 2 ಇಂಚು ಏರಿಕೆಯಾದ್ದರಿಂದ ಕೆಆರ್ಎಸ್ನ ನೀರಿನ ಹರಿವಿನ ಪ್ರಮಾಣವನ್ನು 2769 ಕ್ಯೂಸೆಕ್ನಿಂದ 1008 ಕ್ಯೂಸೆಕ್ಗೆ ಇಳಿಕೆ ಮಾಡಲಾಗಿದೆ. ಮಾರ್ಚ್ 10ರ ಸಂಜೆ 6.00 ಗಂಟೆಗೆ ಶಿವಾ ಅಣೆಕಟ್ಟೆಯ ನೀರಿನಮಟ್ಟ ಅಣೆಕಟ್ಟೆಯ ಮೇಲ್ಭಾಗದಿಂದ 18 ಇಂಚು ಕೆಳಗಡೆಯಿದ್ದು, ಹಿಂದಿನ ದಿನದ (ಮಾರ್ಚ್ 9) 36 ಇಂಚು ಕೆಳಮಟಕ್ಕೆ ಹೋಲಿಸಿದರೆ, ಒಟ್ಟಾರೆ 18 ಇಂಚಿನಷ್ಟು ಏರಿಕೆಯಾಗಿದೆ. ಪ್ರಸ್ತುತ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪ್ರಮಾಣವನ್ನು ಸುಸ್ಥಿರಗೊಳಿಸಲಾಗುತ್ತಿದೆ. ಹೀಗಾಗಿ, ಕೆಆರ್‌ಎಸ್ ಜಲಾಶಯದಿಂದ 4,000 ಕ್ಯೂಸೆಕ್ಗೂ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಿಲ್ಲ. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆಗಾಗಿ ಹರಿಬಿಡಲಾಗಿದೆ ಎಂದು ನೀರಾವರಿ ಇಲಾಖೆ ಸ್ಪಷ್ಟೀಕರಣ ನೀಡಿದೆ.
– ಅಂತರ್ಜಾಲ ಮಾಹಿತಿ
Allegations were heard that the government is draining water to Tamil Nadu. Currently, no water has been released from the Krishna Rajasagar (KRS) reservoir to Tamil Nadu. The water department has clarified that it has been diverted for drinking water supply to Bangalore city.
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…