2024 ರ ಡಿಸೆಂಬರ್ 27 ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ. ಮಲ್ಲೇಶ್ವರದ ಹವ್ಯಕ ಸಭಾಭವನದಲ್ಲಿ ಭಾನುವಾರ ನಡೆದ ಅಖಿಲ ಹವ್ಯಕ ಮಹಾಸಭಾದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ಈ ವಿಷಯ ಪ್ರಕಟಿಸಿದರು.
ವಿಶ್ವ ಹವ್ಯಕ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಅಮೇರಿಕ, ಸಿಂಗಾಪುರ ಮತ್ತು ಇಂಗ್ಲೆಂಡಿನಲ್ಲಿ ಕೂಡಾ ಹವ್ಯಕ ಸಮಾವೇಶ ನಡೆಯಲಿದೆ. ಮುಂದಿನ 14 ತಿಂಗಳುಗಳಲ್ಲಿ ಹವ್ಯಕ ಮಹಾಸಭಾವು ಏರ್ಪಡಿಸಲಿರುವ ಸಮಾವೇಶಗಳನ್ನೂ ಅವರು ಇದೇ ಸಂದರ್ಭ ಪ್ರಕಟಿಸಿದರು.
ಸಮಾವೇಶಗಳು: ಹವ್ಯಕ ನ್ಯಾಯವಾದಿಗಳ ಸಮಾವೇಶ, ಹವ್ಯಕ ಮಹಿಳಾ ಸಮಾವೇಶ, ಹವ್ಯಕ ಶಿಕ್ಷಕರ ಸಮಾವೇಶ, ಹವ್ಯಕ ಉದ್ಯಮಿಗಳ ಸಮಾವೇಶ , ಹವ್ಯಕ ಕಲಾ ಉತ್ಸವ, ಹವ್ಯಕ ಸಂಗೀತ ಉತ್ಸವ, ಯಕ್ಷಗಾನ ಉತ್ಸವ, ವೈದಿಕ ಉತ್ಸವ, ಗಾಯತ್ರಿ ಮಹೋತ್ಸವ, ಶಂಕರ ಸ್ಮರಣ, ಸಂಸ್ಕಾರೋತ್ಸವ, ಹವ್ಯಕ ವಾಣಿಜ್ಯ ಸಮಾವೇಶ, ಹವ್ಯಕ ಭಾಷಾ ಸಮಾವೇಶ, ಹವ್ಯಕ ಸಾಹಿತ್ಯ ಸಮಾವೇಶ, ಹವ್ಯಕ ಪತ್ರಕರ್ತರ ಸಮಾವೇಶ, ತಾಳಮದ್ದಳೆ ಸಪ್ತಾಹ, ಹವ್ಯಕ ಕ್ರೀಡೋತ್ಸವ, ಹವ್ಯಕ ಹೈನುಗಾರರ ಸಮಾವೇಶಗಳು ನಡೆಯಲಿವೆ.
ಎಲೆಚುಕ್ಕಿ ರೋಗದ ಸಮಸ್ಯೆ: ಅಡಿಕ ಕೃಷಿಯಲ್ಲೇ ತೊಡಗಿರುವ ಹವ್ಯಕರು ಎಲೆಚುಕ್ಕಿ ರೋಗದಿಂದಾಗಿ ತೊಂದರೆಗೊಳಗಾಗಿದ್ದಾರೆ ಎಂದು ಸರ್ವಸದಸ್ಯರ ಸಭೆಯಲ್ಲಿ ಅನೇಕ ಸದಸ್ಯರು ಕಳವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಾ.ಗಿರಿಧರ ಕಜೆ ಅವರು, ಹವ್ಯಕ ಮಹಾಸಭಾ ವತಿಯಿಂದ ಹವ್ಯಕ ಕೃಷಿಕರ ಸಮಾವೇಶ ಏರ್ಪಡಿಸಲಾಗುವುದು. ಇದಕ್ಕೆ ವಿಜ್ಞಾನಿಗಳನ್ನೂ ಆಹ್ವಾನಿಸಿ ಈ ಸಮಸ್ಯೆಗೆ ಮಾರ್ಗೋಪಾಯಗಳನ್ನು ಕಂಡುಹಿಡಿಯಲು ಯತ್ನಿಸಲಾಗುವುದು
ಎಂದರು.
ಬೆಳಕೆ ನಿವೇಶನ ಮತ್ತು ಅಭಿವೃದ್ಧಿ: ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ಶಿರೂರಿನ ಮಂಜುನಾಥ ಬಿಲ್ಲವ ಮತ್ತು ಕುಟುಂಬದವರು ಸೇವಾರೂಪದಲ್ಲಿ ನೀಡಿರುವ ಒಂದು ಎಕರೆ ಜಾಗದಲ್ಲಿ ಸಭಾಂಗಣ ನಿರ್ಮಿಸಲಾಗುವುದು ಎಂದರು. ಬೆಂಗಳೂರಿನ ಚಿಕ್ಕಪೇಟೆ ಮತ್ತು ಕಾಮರಾಜ್ ರಸ್ತೆಯಲ್ಲಿ ಮಹಾಸಭಾ ಅಧೀನಕ್ಕೆ ಬರಲಿರುವ ನಿವೇಶನಗಳಲ್ಲಿ ಕಟ್ಟಡ ನಿರ್ಮಿಸಿ ಹವ್ಯಕ ಸಮುದಾಯಕ್ಕೆ ಅನುಕೂಲಕರವನ್ನಾಗಿ ಮಾಡಲಾಗುವುದು ಎಂದು ಡಾ. ಕಜೆ ತಿಳಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…