Advertisement
MIRROR FOCUS

ಅಡಿಕೆ ಜಗಿಯುವುದರಿಂದ ಆಯಾಸ ದೂರವಾಗುತ್ತದೆ, ಕರುಳಿನ ಚಟುವಟಿಕೆ ಹೆಚ್ಚಾಗುತ್ತದೆ | ಅಂತರಾಷ್ಟ್ರೀಯ ಜರ್ನಲ್‌ನಲ್ಲಿ ದಾಖಲಾದ ಅಡಿಕೆಯ ಔಷಧೀಯ ಗುಣ |

Share

ಅಡಿಕೆ ಹಾನಿಕಾರಕ ಎಂಬ ಮಾತುಗಳು ಪದೇ ಪದೇ ವಿವಿಧ ಮಾಧ್ಯಮಗಳ ಮೂಲಕ ಬಿಂಬಿಸಲಾಗುತ್ತಿದೆ. ಆದರೆ ಅಡಿಕೆಯಲ್ಲೂ ಔಷಧೀಯ ಗುಣ ಇದೆ, ಆರೋಗ್ಯಕ್ಕೆ ಪೂರಕವಾದ ಅಂಶಗಳು ಇವೆ ಎಂಬುದು ಅಧ್ಯಯನದ ಮೂಲಕ ಸಾಬೀತಾಗುತ್ತಿದೆ. ಇದೀಗ ಅಡಿಕೆ ಜಗಿಯುವುದರಿಂದ ಆಯಾಸ ಕಡಿಮೆಯಾಗುತ್ತದೆ ಹಾಗೂ ಕರುಳಿನ ಚಟುವಟಿಕೆ ಉತ್ತಮಗೊಳ್ಳುತ್ತದೆ ಎಂಬ ಅಧ್ಯಯನ ವರದಿಯು ಇಂಟರ್ನ್ಯಾಷನಲ್ ಜರ್ನಲ್ ಆಫ್ ಫೈಟೊಥೆರಪಿ ಮತ್ತು ಫೈಟೊಫಾರ್ಮಾಕಾಲಜಿಯಲ್ಲಿ ದಾಖಲಾಗಿದೆ. 

ಅಡಿಕೆಯ ಬಗ್ಗೆ ವಿವಿಧ ಅಧ್ಯಯನಗಳು ನಡೆಯುತ್ತಲೇ ಇರುತ್ತದೆ. ಅಡಿಕೆ ಸಿಪ್ಪಿಯೆ ಬಳಕೆ, ಅಡಿಕೆ ಸೋಗೆಯ ಬಳಕೆ, ಎಳೆ ಅಡಿಕೆ, ಚಾಲಿ ಅಡಿಕೆ, ಹೀಗೇ ಅಡಿಕೆ ಗುಣಧರ್ಮ ಹೀಗೇ ಹಲವು ಅಧ್ಯಯನಗಳು ನಡೆಯುತ್ತಿವೆ. ಇದೀಗ ಅಡಿಕೆ ಜಗಿಯುವ ಬಗ್ಗೆ ಇನ್ನೊಂದು ಅಧ್ಯಯನ ನಡೆದಿದೆ. ಇದು ಇಂಟರ್ನ್ಯಾಷನಲ್ ಜರ್ನಲ್ ಆಫ್ ಫೈಟೊಥೆರಪಿ ಮತ್ತು ಫೈಟೊಫಾರ್ಮಾಕಾಲಜಿಯಲ್ಲಿ ದಾಖಲಾಗಿದೆ.  ಅಡಿಕೆಯಿಂದ ಹೊರತೆಗೆಯಲಾದ  ಪಾಲಿಫಿನಾಲ್‌ಗಳ ಬಗ್ಗೆ ಹೆಚ್ಚಿನ ಅಧ್ಯಯನ ಇಲ್ಲಿ ನಡೆದಿದೆ. ಅಡಿಕೆಯ ಈ  ಗುಣಲಕ್ಷಣಗಳಿಗೆ ಆಧಾರವಾಗಿರುವ ಕಾರ್ಯವಿಧಾನಗಳನ್ನು ಇದುವರೆಗೆ ಹೆಚ್ಚಿನ ಅಧ್ಯಯನ ನಡೆಸಲಾಗಿರಲಿಲ್ಲ. ಈ ಪ್ರಕಾರ ಅಡಿಕೆ ಜಗಿಯುವುದರಿಂದ ಅಡಿಕೆಯಲ್ಲಿರುವ ಪಾಲಿಫಿನಾಲ್‌ಗಳು ಕರುಳಿನ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ಕರುಳಿನ ಚಟುವಟಿಕೆ ವೃದ್ಧಿಗೊಳಿಸುತ್ತವೆ ಮತ್ತು ಕರುಳಿನ ಮೈಕ್ರೋಬಯೋಟಾವನ್ನು ನಿಯಂತ್ರಿಸುವ ಮೂಲಕ ಮೈಟೊಕಾಂಡ್ರಿಯದ ಕಾರ್ಯವನ್ನು ಸುಧಾರಿಸುತ್ತದೆ.

ಅಷ್ಟೇ ಅಲ್ಲ, ಅಡಿಕೆ ಜಗಿಯುವುದರಿಂದ ರಕ್ತದಲ್ಲಿನ ಶಕ್ತಿಯನ್ನೂ ವಿವಿಧ ಕಾರಣಗಳಿಂದ ಹೆಚ್ಚಿಸುತ್ತವೆ, ಹೀಗಾಗಿ ದೇಹದ ಬಳಲಿಕೆಯೂ ಕಡಿಮೆಯಾಗುತ್ತದೆ ಎಂದು ವರದಿ ಹೇಳುತ್ತದೆ.ಈ ಅಧ್ಯಯನವು ಅಡಿಕೆ ಪಾಲಿಫಿನಾಲ್‌ಗಳ  ಕಾರ್ಯವಿಧಾನಗಳ ಬಗ್ಗೆ ಮಾಹಿತಿ ಒದಗಿಸುತ್ತದೆ, ಚಿಕಿತ್ಸಕ ಏಜೆಂಟ್ ಆಗಿಯೂ ಅಡಿಕೆಯ ಸಾಮರ್ಥ್ಯವನ್ನು ಹೇಳುತ್ತದೆ.

ಅಡಿಕೆ ಮೇಲೆ ಇರುವ ಆರೋಪಗಳ ನಡುವೆ ಅಡಿಕೆಯ ಉತ್ತಮ ಗುಣಧರ್ಮಗಳ ಬಗ್ಗೆ ನಡೆದಿರುವ ಈ ಅಧ್ಯಯನವು ಅಡಿಕೆಯ ಮೇಲೆ ಧನಾತ್ಮಕ ಪರಿಣಾಮ ಬೀರುವುದಕ್ಕೆ ಮಹತ್ವದ ದಾಖಲೆಯೂ ಆಗಿದೆ.

Arecanut, also known as betel nut, has been a popular ingredient in many cultures for centuries. Despite the negative connotations associated with nuts, recent studies have shown that arecanut also possesses medicinal properties and health benefits. In fact, chewing arecanut has been linked to improved digestion, increased energy levels, and even potential anti-inflammatory effects. While it’s important to consume arecanut in moderation due to its stimulant properties, incorporating this nut into your diet can offer a unique blend of nutrients and potential health benefits.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ

ಅರಬ್ಬಿ ಸಮುದ್ರದ ಕಡೆಯಿಂದ ಬೀಸುವ ಗಾಳಿಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮುನ್ಸೂಚನೆಯಲ್ಲಿದ್ದಷ್ಟು…

8 hours ago

ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಉ ತ್ತಮ ಮಳೆಯ…

1 day ago

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ

ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಮತ್ತೆ ಹೆಚ್ಚಾಗುವ ಸೂಚನೆ ದೊರೆತಿದ್ದು, ಮುಂದಿನ ಏಳು ದಿನಗಳ…

1 day ago

ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ

ಭಾರತದ ತೆಂಗಿನಕಾಯಿ ರಫ್ತು ಮೌಲ್ಯ ಒಂದೇ ವರ್ಷದಲ್ಲಿ ಶೇ.62ರಷ್ಟು ಏರಿಕೆಯಾಗಿ ₹7,038 ಕೋಟಿಗೆ…

2 days ago

ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು

ಒಡಿಶಾದ ಬಾಲಸೋರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಅಡಿಕೆ ಸಾಗಾಟದ ಹಲವು ಪ್ರಕರಣಗಳು ಪತ್ತೆಯಾಗಿದ್ದು,…

2 days ago

ಹವಾಮಾನ ವರದಿ | 19-09-2026 | ಸೆ.22 ರಿಂದ ಮಳೆ ಹೆಚ್ಚಳದ ಸೂಚನೆ – ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ

ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ಸೆ.22ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ…

2 days ago