Advertisement
ಸುದ್ದಿಗಳು

ಸಮಯದ ಒತ್ತಡದಲ್ಲೂ ಗುಕೇಶ್ ಹೋರಾಟ – ಚೆಸ್ ಮೊದಲ ಪಂದ್ಯ ಡ್ರಾ

Share

ವಿಶ್ವ ಚೆಸ್ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಹೋರಾಟ ಆರಂಭಿಸಿರುವ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ. ಗುಕೇಶ್, ಉಜ್ಬೇಕಿಸ್ತಾನದ ಸವಾಲುಗಾರ ಜಾವೊಖಿರ್ ಸಿಂಧರೋವ್ ವಿರುದ್ಧ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ. ಪಂದ್ಯದ ಬಹುತೇಕ ಅವಧಿಯಲ್ಲಿ ಸಮಯದ ಒತ್ತಡ ಎದುರಿಸಿದರೂ ಕೊನೆಯ ಹಂತದಲ್ಲಿ ಅತ್ಯುತ್ತಮ ರಕ್ಷಣಾತ್ಮಕ ಆಟ ಪ್ರದರ್ಶಿಸಿ ಸೋಲಿನಿಂದ ಪಾರಾಗಿದ್ದಾರೆ.

ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದ ಕೊಲೊನಿಯಲ್ಲಿ ಮಂಗಳವಾರ ನಡೆದ 2026ರ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಸಿಂಧರೋವ್ ಬಿಳಿ ಕಾಯಿಗಳೊಂದಿಗೆ ಆಡಿದರೆ, ಹಾಲಿ ವಿಶ್ವ ಚಾಂಪಿಯನ್ ಗುಕೇಶ್ ಕಪ್ಪು ಕಾಯಿಗಳೊಂದಿಗೆ ಕಣಕ್ಕಿಳಿದರು. ಆರಂಭಿಕ ಹಂತದಲ್ಲಿ ಇಬ್ಬರೂ ಆಟಗಾರರು ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಎಂಟನೇ ನಡೆ ವೇಳೆಗೆ ರಾಣಿಗಳ ವಿನಿಮಯ ನಡೆದಿದ್ದರಿಂದ ಪಂದ್ಯವು ಸಂಕೀರ್ಣವಾಗಿ ಎಂಡ್‌ಗೇಮ್  ಪ್ರವೇಶಿಸಿತು. ಸುಮಾರು 15ನೇ ನಡೆಯಿಂದ ಗುಕೇಶ್ ಹೆಚ್ಚಿನ ಸಮಯ ತೆಗೆದುಕೊಳ್ಳಬೇಕಾಯಿತು. ಆದರೆ ಸಮಯದ ಒತ್ತಡದ ನಡುವೆಯೂ ಗುಕೇಶ್ ಸಮರ್ಥವಾಗಿ ರಕ್ಷಿಸಿಕೊಂಡರು.

ಈ ವಿಶ್ವ ಚಾಂಪಿಯನ್‌ಷಿಪ್ ಪಂದ್ಯಾವಳಿ ಡಿಸೆಂಬರ್ 12ರವರೆಗೆ ನಡೆಯಲಿದೆ.

India’s reigning world champion D. Gukesh began his title defence with a draw against Uzbekistan’s Javokhir Sindarov in the opening game of the 2026 World Chess Championship in Geneva.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕನಿಷ್ಠ ವೇತನಕ್ಕಿಂತ Cost of living ಅಧಿಕ – ದುಡಿಯುವ ಕೈಗಳಿಗೆ ಬದುಕಲು ಸಾಕಾಗದ ವೇತನ..!

ದೇಶದ 37 ನಗರಗಳಲ್ಲಿ ಕನಿಷ್ಠ ವೇತನಕ್ಕಿಂತ ಜೀವನ ವೆಚ್ಚ (cost of living)…

26 minutes ago

ಹವಾಮಾನ ವರದಿ | 24-11-2026 | ನ.28 ರವರೆಗೆ ಮಳೆ ಮುಂದುವರಿಯುವ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ…

23 hours ago

ರಸಗೊಬ್ಬರ ಖರೀದಿಗೆ ಹೊಸ ಮೊಬೈಲ್ ಆಪ್ : ಡಿ.1 ರಿಂದ ಮಂಡ್ಯ ಜಿಲ್ಲೆಯಲ್ಲಿ ಜಾರಿ

ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 1ರಿಂದ 'ರಸಗೊಬ್ಬರ ಮಾರಾಟ ಚೌಕಟ್ಟು' ಎಂಬ ಹೊಸ ಮೊಬೈಲ್…

1 day ago

ಸಂತೃಪ್ತಿಯೇ ಆನಂದದ‌ ಬದುಕಿನ ಗುಟ್ಟು

ಮನುಷ್ಯನ ಬದುಕಿನಲ್ಲಿ ಆಸೆ ಸಹಜವಾದರೂ ಅದು ಮಿತಿಮೀರಿದಾಗ ದುಃಖ ಮತ್ತು ಅತೃಪ್ತಿಗೆ ಕಾರಣವಾಗುತ್ತದೆ.…

2 days ago

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ – ಮಂಗಳೂರಿನಲ್ಲಿ ದಂಡ ವಿಧಿಸಿ ಎಚ್ಚರಿಕೆ

ಮಂಗಳೂರಿನ ಲಾಲ್‌ಬಾಗ್, ಪಂಪ್‌ವೆಲ್ ಸೇರಿದಂತೆ ವಿವಿಧೆಡೆ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದವರಿಗೆ ಆರೋಗ್ಯ ಇಲಾಖೆ…

2 days ago

ಹವಾಮಾನ ವರದಿ | 23-11-2026 | ನ.24 ರಿಂದ ಮಲೆನಾಡು, ನ.25 ರಿಂದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಹವಾಮಾನ ಬದಲಾವಣೆಯ ಸೂಚನೆಗಳಿದ್ದು, ನವೆಂಬರ್ 24ರಿಂದ ಮಲೆನಾಡಿನಲ್ಲಿ ಹಾಗೂ ನವೆಂಬರ್ 25ರಿಂದ…

2 days ago